ಕಡೂರು:ಕಳೆದ ಕೆಲ ದಿನಗಳ ಹಿಂದೆ ಜೆಡಿಎಸ್​ ತೊರೆದು ಕಾಂಗ್ರೆಸ್​ ಸೇರಿದ್ದ ಮಾಜಿ ಶಾಸಕ ವೈ.ಎಸ್​.ವಿ.ದತ್ತಾ ಮರಳಿ ಗೂಡು ಸೇರಿದ್ದಾರೆ.
ಕಡೂರಿನ ಯಗಟಿಯ ನಿವಾಸದಲ್ಲಿ ಮಾಜಿ ಸಚಿವ ರೇವಣ್ಣ ಹಾಗೂ ಸಂಸದ ಪ್ರಜ್ಷಲ್​ ರೇವಣ್ಣ ಅವರ ಸಮ್ಮುಖದಲ್ಲಿ ನಡೆದ ಸಭೆ ಬಳಿಕ ಅವರು ಕಾಂಗ್ರೆಸ್​ ತೊರೆದು ಜೆಡಿಎಸ್​ ಪಕ್ಷಕ್ಕೆ ಮರಳುವುದಾಗಿ ಮತ್ತು ಕಡೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.
ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಜ್ಷಲ್​ ರೇವಣ್ಣ ಕಾಂಗ್ರೆಸ್​ ಪಕ್ಷ ದತ್ತಣ್ಣ ಅಲ್ಲದೆ ಅವರ ಅಭಿಮಾನಿಗಳಿಗೂ ನಂಬಿಸಿ ಮೋಸ ಮಾಡಿದೆ. ನಾನು ಅವರು ಕಾಂಗ್ರೆಸ್​ ಸೇರುವುದಕ್ಕೆ ಮುನ್ನವೇ ಈ ವಿಚಾರವನ್ನ ಹೇಳಿದ್ದೆ. ದತ್ತಣ್ಣ ಸಾಕಷ್ಟು ನೋವು ಅನುಭವಿಸಿದ್ದಾರೆ ಅವರು ದೂರ ಹೋದಾಗ ನಮಗೂ ನೋವಾಯಿತ್ತು. ಇದೆಲ್ಲವನ್ನೂ ಮರೆತು ನಾವು ಅವರನ್ನು ಸ್ವಾಗತಿಸೋಣ ನಮ್ಮ ಕುಟುಂಬ ಹಾಗೂ ಪಕ್ಷ ಅವರ ಜೊತೆ ಇದೆ ನಾವು ಅವರಿಗೆ ಯಾವ ರೀತಿಯಲ್ಲಿ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಚುನಾವಣಾ ಅಕ್ರಮ; ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಒಂದು ಕೋಟಿ ರೂ. ಹಣ ಸೀಜ್​
ಮಾಜಿ ಸಚಿವ ಎಚ್​.ಡಿ.ರೇವಣ್ಣ ಮಾತನಾಡಿ ಕಡೂರು ಕ್ಷೇತ್ರದ ಮೇಲೆ ದೇವೇಗೌಡರಿಗೆ ವಿಶೇಷವಾದ ಪ್ರೀತಿ ಅಭಿಮಾನ ಇದೆ. ಜೆಡಿಎಸ್​ ಬೆಳವಣಿಗೆಯಲ್ಲಿ ದತ್ತಾ ಅವರ ಪಾಲು ಎಷ್ಟಿದೆ ಎಂಬ ವಿಚಾರ ಎಲ್ಲರಿಗೂ ಗೊತ್ತಿದೆ. ಸ್ವತಃ ದೇವೇಗೌಡರೇ ದತ್ತಾ ಅವರ ಕೈ ಬಿಡಬಾರದು ಎಂದು ಹೇಳಿದ್ದಾರೆ.
ಚುನಾವಣೆಗೆ ಹೆಚ್ಚಿನ ಸಮಯ ಇಲ್ಲ ನಾವೆಲ್ಲರೂ ಒಮ್ಮತ್ತದ ನಿರ್ಣಯಕ್ಕೆ ಬಂದು ದತ್ತಾ ಅವರನ್ನು ಕಡೂರಿನಲ್ಲಿ ಗೆಲ್ಲಿಸಬೇಕು ಎಂದು ಮಾಜಿ ಸಚಿವ ಎಚ್​.ಡಿ.ರೇವಣ್ಣ ಕಾರ್ಯಕರ್ತರು ಹಾಗೂ ಬೆಂಬಲಿಗರಿಗೆ ಕರೆ ನೀಡಿದ್ದಾರೆ.
ವೈ.ಎಸ್​.ವಿ.ದತ್ತಾ ಮಾತನಾಡಿ ನಿನ್ನನ್ನು ಪಕ್ಷೇತರನಾಗಿ ಚುನಾವಣೆಗೆ ನಿಲ್ಲಿಸಲು ನಾನಿನ್ನೂ ಸತ್ತಿಲ್ಲ ನೀನು ನಾಮಪತ್ರ ಸಲ್ಲಿಸುವಾಗ ಮಾಜಿ ಪ್ರಧಾನಿಯಾಗಿ ಅಲ್ಲ ಮಗ ನಾಮಪತ್ರ ಸಲ್ಲಿಸುತ್ತಿದ್ದಾನೆ ಎಂದು ನಿನ್ನ ಜೊತೆ ಬರುವೆ. ದೇವೇಗೌಡರು ಹಾಗೂ ನನ್ನ ನಡುವಿನ ಸಂಬಂಧ ರಾಜಕೀಯಕ್ಕಿಂತ ಮಿಗಿಲಾದದ್ದು ಎಂದು ಹೇಳಿದ್ದರು.
ಅಭಿಮಾನಿಗಳು ಹಾಗೂ ಬೆಂಬಲಿಗರು ಒಪ್ಪುವುದಿಲ್ಲ ಎಂದಿದ್ದಕ್ಕೆ ನಾಳೆಯೇ ನಿನ್ನ ಮನೆಗೆ ರೇವಣ್ಣ ಹಾಗೂ ಪ್ರಜ್ಷಲ್​ ಇಬ್ಬರು ಬರುತ್ತಾರೆ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ನಿನ್ನ ಬೆಂಬಲಿಗರ ಜೊತೆ ಸಭೆ ನಡೆಸುತ್ತಾರೆ ಎಂದು ಮಾಜಿ ಪ್ರಧಾನಿ ದೇವೇಗೌಡರ ಜೊತೆಗಿನ ಮಾತುಕತೆ ಕುರಿತು ಸ್ಮರಿಸಿಕೊಂಡರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + nineteen =
Remember me
