ಹುಬ್ಬಳ್ಳಿ:26ನೇ ರಾಷ್ಟ್ರೀಯ ಯುವ ಜನೋತ್ಸವದಲ್ಲಿ ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ, ಈ ಪುಣ್ಯಭೂಮಿಗೆ ನನ್ನ ನಮಸ್ಕಾರಗಳು, ಸಿದ್ಧಾರೂಢ ಮಠ, ಮೂರು ಸಾವಿರ ಮಠ, ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣರ ಈ ಪುಣ್ಯನಾಡಿಗೆ ನನ್ನ ನಮಸ್ಕಾರಗಳು. ‘ಏಳಿ ಎದ್ದೇಳಿ ಜಾಗೃತರಾಗಿ ಗುರಿ ಮುಟ್ಟುವವರೆಗೆ ನಿಲ್ಲದಿರಿ’ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದರು. ಈ ದೇಶದ ಶಕ್ತಿ ಯುವಕರು ಎಂದು ಅವರು ನಂಬಿದ್ದರು. ವಿವೇಕಾನಂದರ ಚರಣಕ್ಕೆ ನಮಿಸುತ್ತೇನೆ ಎನ್ನುತ್ತಾ ನಾಡಿನ ಮಹಾನ್​ ಸಂತರು, ಸಾಧಕರನ್ನ ಸ್ಮರಿಸಿದರು.
ಕೆಲ ದಿನಗಳ ಹಿಂದೆ ಕರ್ನಾಟಕದ ಮಣ್ಣಲ್ಲಿ ಮಹಾನ್​ ಸಂತ ಸಿದ್ದೇಶ್ವರ ಸ್ವಾಮೀಜಿಯವರ ದೇಹಾಂತ್ಯವಾಗಿದೆ. ಸಿದ್ದೇಶ್ವರ ಶ್ರೀಗಳಿಗೆ ಶ್ರದ್ಧಾಂಜಲಿ ಸಲ್ಲಿಸುತ್ತೇನೆ. ಕಿತ್ತೂರು ರಾಣಿ ಚೆನ್ನಮ್ಮ ದೇಶದ ಅಗ್ರ ಸ್ವತಂತ್ರ ಹೋರಾಟಗಾರರಾಗಿದ್ದರು. ಸಂಗೊಳ್ಳಿ ರಾಯಣ್ಣ ಅವರಂತಹ ಮಹಾನ್ ವೀರರ ಹೋರಾಟ ಬ್ರೀಟಿಷರನ್ನು ನಡಗಿಸಿತ್ತು. ಹುಬ್ಬಳ್ಳಿಯ ನಾರಾಯಣ ಡೋಣಿಯಂತಹ ಬಾಲಕ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾನೆ. ಲ್ಯಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ್ ಸಿಯಾಚಿನ್‌ನ ಚಳಿಯಲ್ಲಿ ಆರು ದಿನಗಳ ಕಾಲ ಸಾವಿನೊಂದಿಗೆ ಸೆಣಸಾಡಿದ್ದರು. ಭೀಮಸೇನ ಜೋಶಿ, ಗಂಗೂಬಾಯಿ ಹಾನಗಲ್, ಪಂಡಿತ್​ ಬಸವರಾಜ ರಾಜಗುರು… ಹೀಗೆ ಕರ್ನಾಟಕದ ಭೂಮಿಯು ಮಹಾನ್ ವ್ಯಕ್ತಿಗಳನ್ನು ದೇಶಕ್ಕೆ ಕೊಟ್ಟಿದೆ. ಚಿಕ್ಕ ವಯಸ್ಸಲ್ಲೇ ವಿವೇಕಾನಂದರು ಸಾಧನೆ ಮಾಡಿದರು. ಚಿಕಾಗೋ ಯಾತ್ರೆಗೆ ವಿವೇಕಾನಂದರಿಗೆ ಮೈಸೂರು ಮಹಾರಾಜರು ನೆರವು ನೀಡಿದ್ದರು. ಯುವ ಶಕ್ತಿಯಿದ್ದರೆ ದೇಶದ ಭವಿಷ್ಯ ನಿರ್ಮಾಣ ಮಾಡುವುದು ಸರಳ ಎಂದು ವಿವೇಕಾನಂದರು ಹೇಳಿದ್ದರು. ಸ್ವಾಮಿ ವಿವೇಕಾನಂದರು ಕರ್ನಾಟಕದ ಜೊತೆಗೆ ನಂಟು ಹೊಂದಿದ್ದಾರೆ. ಅವರು ಹುಬ್ಬಳ್ಳಿ- ಧಾರವಾಡ ಮಾರ್ಗವಾಗಿ ಯಾತ್ರೆ ಮಾಡಿದ್ದಾರೆ ಎನ್ನುತ್ತಲೇ ದೇಶದ ಯುವ ಜನತೆ ನಾಯಕತ್ವ ಬೆಳೆಸಿಕೊಳ್ಳಬೇಕು ಎಂದು ಪ್ರಧಾನಿ ಕರೆ ನೀಡಿದರು.
The 'can do' spirit of our Yuva Shakti inspires everyone. Addressing National Youth Festival in Hubballi, Karnataka.https://t.co/dIgyudNblI
— Narendra Modi (@narendramodi)January 12, 2023

ಇಡೀ ಜಗತ್ತೇ ಬೆರಗುಗಣ್ಣಿನಿಂದ ಭಾರತದ್ತ ನೋಡುತ್ತಿದೆ. ಎಲ್ಲಾ ಕ್ಷೇತ್ರದಲ್ಲೂ ಸಕಾರಾತ್ಮಕ ಬೆಳವಣಿಗೆ ಆಗುತ್ತಿದೆ. ಭಾರತದ ಸ್ಟಾರ್ಟ್‌ಅಪ್‌ಗಳಿಗೆ ಹಣ ಹರಿದು ಬರುತ್ತಿದೆ, ವಿದೇಶಿ ಬಂಡವಾಳ ಹೂಡಿಕೆಯಾಗುತ್ತಿದೆ. ಮಹಿಳಾ ಶಕ್ತಿ ರಾಷ್ಟ್ರಶಕ್ತಿಯನ್ನು ಜಾಗೃತವಾಗಿ ಇಟ್ಟಿದೆ. ಭಾರತದ ಮಹಿಳೆಯರು ಇಂದು ಫೈಟರ್ ಜೆಟ್ ಹಾರಿಸುತ್ತಿದ್ದಾರೆ. ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ನಮ್ಮ ಹೆಣ್ಣುಮಕ್ಕಳು ಉನ್ನತ ಸಾಧನೆ ಮಾಡುತ್ತಿದ್ದಾರೆ. 21ನೇ ಶತಮಾನವನ್ನು ಭಾರತದ ಶತಮಾನ ಮಾಡಬೇಕಿದೆ. ವರ್ತಮಾನದಿಂದ ಹತ್ತು ವರ್ಷ ಮುಂದಿನದ್ದನ್ನು ವಿಚಾರ ಮಾಡಬೇಕಾಗಿದೆ. ವಿಶ್ವದ ಆಧುನಿಕ ದೇಶಗಳಿಗಿಂತಲೂ ಮುಂದೆ ಸಾಗಬೇಕಿದೆ. ಬರುವ ಕೆಲ ವರ್ಷಗಳಲ್ಲಿ ನಮ್ಮ ಜಗತ್ತು ಸಂಪೂರ್ಣ ಬದಲಾಗಲಿದೆ. ಯುವಕರು ಹೊಸತನಕ್ಕೆ ಹೊಂದಿಕೊಳ್ಳಲು ಸಿದ್ಧರಾಗಬೇಕು. ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗುತ್ತಿದೆ. ಇನ್ಸ್‌ಟಿಟ್ಯೂಷನ್, ಇನ್ನೋವೇಷನ್ ಬಗ್ಗೆ ಚಿಂತಿಸಬೇಕಾಗಿದೆ. ಇಂದು ಭಾರತ ಡಿಜಿಟಲ್ ಪೇಮೆಂಟ್‌ನಲ್ಲಿ ವರ್ಡ್ ಲೀಡರ್ ಆಗಿದೆ. ಯೂತ್​ ಫೆಸ್ಟಿವಲ್‌‌ನಲ್ಲಿ ಯಾರೇ ಗೆದ್ದರೂ ದೇಶ ಗೆದ್ದಂತೆ. ‘ವಿಕಸಿತ ಭಾರತ’, ‘ಸಶಕ್ತ ಭಾರತ’ ಅನ್ನೋದು ನಮ್ಮ ಆಶಯ ಎಂದು ಹುರಿದುಂಬಿಸಿದರು.
ಗಣಿತದಿಂದ ಹಿಡಿದು ವಿಜ್ಞಾನದವರೆಗೂ ಭಾರತದ ಯುವ ಪ್ರತಿಭೆಗಳು ವಿಶ್ವವನ್ನೇ ವಿಸ್ಮಿತಗೊಳಿಸಿವೆ. ಭಾರತ ಒಂದು ಯುವದೇಶ. ಯುವಕರ ದೊಡ್ಡ ಪಡೆ, ಯುವಶಕ್ತಿ ನಮ್ಮ ದೇಶದಲ್ಲಿದೆ. ದೇಶದ ಬೆಳವಣಿಗೆಗೆ ಯುವಶಕ್ತಿ ಅಡಿಪಾಯವಾಗಲಿದೆ. ಯುವ ಶಕ್ತಿ ದೇಶದ ದಿಕ್ಸೂಚಿ. ನಮ್ಮ ಯೋಚನೆ ಮತ್ತು ಪ್ರಯತ್ನಗಳು ಯೌವನದಿಂದ ಕೂಡಿರಬೇಕು. ಜಗತ್ತು ಭಾರತದತ್ತ ಭರವಸೆಯಿಂದ ನೋಡುತ್ತಿರುವುದಕ್ಕೆ ಯುವಕರೇ ಕಾರಣ. ಆರ್ಥಿಕ ಶಕ್ತಿಯಲ್ಲಿ ಭಾರತ ಜಗತ್ತಿನ ಟಾಪ್ ಮೂರಲ್ಲಿ ಒಂದಾಗಬೇಕು ಅನ್ನೋದು ನಮ್ಮ ಇಚ್ಛೆ. ಕ್ರೀಡಾ ಕ್ಷೇತ್ರದಲ್ಲಿ ಭಾರತ ಜಗತ್ತಿನ ದೊಡ್ಡ ಶಕ್ತಿಯಾಗಿ ಹೊರಹೊಮ್ಮುತ್ತಿದೆ ಎಂದರು.
ಹುಬ್ಬಳ್ಳಿಯಲ್ಲಿ ಪ್ರಧಾನಿ ರೋಡ್​ ಶೋ ವೇಳೆ ಭದ್ರತಾ ಲೋಪ: ಹಾರ ಹಿಡಿದು ಮೋದಿ ಕಾರಿನತ್ತ ನುಗ್ಗಿ ಬಂದ ಬಾಲಕ!

ಯುವ ಜನೋತ್ಸವದಲ್ಲಿ ಮನಸೆಳೆದ ಪಥಸಂಚಲನ, ಯೋಗಾ, ಮಲ್ಲಕಂಬ… ರಾಜ್ಯಗಳ ಸಂಸ್ಕೃತಿ ಅನಾವರಣ

ಹುಬ್ಬಳ್ಳಿಯಲ್ಲಿ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ: ಒಂದು ತಾಸು ರೋಡ್ ಶೋ, ದಾರಿಯುದ್ದಕ್ಕೂ ಜೈಕಾರ.. ಘೋಷಣೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 2 =
Remember me
