
ಬೆಂಗಳೂರು:ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಯುವನಿಧಿ ಯೋಜನೆಯಲ್ಲಿ ನಿರುದ್ಯೋಗಿಗಳಿಗೆ ಪ್ರತಿ ತಿಂಗಳೂ ಸ್ವಯಂ ೋಷಣಾ ಪತ್ರವನ್ನು ಕಡ್ಡಾಯ ಮಾಡಿರುವುದನ್ನು ಸಡಿಲಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ.ಯುವನಿಧಿಯ ಲಾನುಭವಿ ಆಗಿದ್ದರೂ, ಅವರು ಪ್ರತಿ ತಿಂಗಳು ನನಗೆ ಇನ್ನೂ ಉದ್ಯೋಗ ದೊರೆತಿಲ್ಲ ಎಂದು ಆನ್ ಲೈನ್‌ನಲ್ಲಿ ಸ್ವಯಂ ೋಷಣೆ ಮಾಡಿ ಅದನ್ನು ಅಪ್‌ಲೋಡ್ ಮಾಡಲೇಬೇಕು. ಇಲ್ಲದೆ ಇದ್ದರೆ ಅವರ ಅಕೌಂಟ್‌ಗೆ ಹಣ ಪಾವತಿ ಆಗುವುದಿಲ್ಲ. ಇದರಿಂದಾಗಿ ಭತ್ಯೆ ಪಡೆಯುವ ನಿರುದ್ಯೋಗಿಗಳಿಗೂ ಸಮಸ್ಯೆ ಆಗುತ್ತಿದೆ. ಮತ್ತೊಂದೆಡೆ ಈ ೋಷಣೆಯನ್ನು ಕಡ್ಡಾಯ ಮಾಡಿರುವುದರಿಂದ ಸಾಪ್ಟ್‌ವೇರ್‌ನಲ್ಲಿ ಡಿಬಿಟಿ ಮೂಲಕ ಹಣ ಪಾವತಿ ಮಾಡಲು ವಿಳಂಬವಾಗುತ್ತಿದೆ.ನನಗೆ ಕೆಲಸ ಸಿಕ್ಕಿಲ್ಲ, ಇನ್ನೂ ನಿರುದ್ಯೋಗಿಯಾಗಿದ್ದೇನೆ ಎನ್ನುವುದನ್ನು ಪ್ರತಿ ತಿಂಗಳೂ ೋಷಣಾ ಪತ್ರ ಪಡೆಯುವ ಬದಲು ಪ್ರತಿ ಎರಡು ಅಥವಾ ಮೂರು ತಿಂಗಳಿಗೊಮ್ಮೆ ಸ್ವಯಂ ೋಷಣಾ ಪತ್ರವನ್ನು ಪಡೆದುಕೊಳ್ಳುವುದು ಉತ್ತಮ ಎನ್ನುವ ಸಲಹೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಸಚಿವರಾದ ಶರಣ ಪ್ರಕಾಶ್ ಪಾಟೀಲ ಅವರು ಸೂಚನೆ ನೀಡದ್ದಾರೆ ಎಂದು ಮೂಲಗಳು ತಿಳಿಸಿವೆ.ೋಷಣಾ ಪತ್ರದ ವ್ಯವಸ್ಥೆಯನ್ನು ಬದಲಿಸಿದರೆ ಆಗುವ ಅನುಕೂಲ ಮತ್ತು ಅನಾನುಕೂಲದ ಬಗ್ಗೆಯೂ ವರದಿ ನೀಡುವಂತೆ ತಿಳಿಸಲಾಗಿದ್ದು, ಈ ವ್ಯವಸ್ಥೆಯನ್ನು ಇನ್ನಷ್ಟು ಸರಳೀಕರಣ ಮಾಡಲು ಸಚಿವರು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.ಐಟಿಐ, ಡಿಪ್ಲೊಮೊ, ಇಂಜಿನೀಯರಿಂಗ್ ಸೇರಿದಂತೆ 3,02,373 ಲಾನುಭವಿಗಳಿಗೆ 90.68 ಕೋಟಿ ರೂ ಪಾವತಿ ಮಾಡಲಾಗಿದೆ. ಸ್ವಯಂ ೋಷಣಾ ಪತ್ರ ನೀಡದ ಕಾರಣಕ್ಕಾಗಿ 56 ಸಾವಿರ ನಿರುದ್ಯೋಗಿಗಳಿಗೆ ಹಣ ಪಾವತಿ ಆಗಿಲ್ಲ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − one =
Remember me
