ಚಿಕ್ಕನಾಯಕನಹಳ್ಳಿ:ಕೋಟ್ಯಂತರ ರೂಪಾಯಿ ವಂಚನೆ ಆರೋಪಿ ಯುವರಾಜ್​ ಅಲಿಯಾಸ್​ ಸೇವಾಲಾಲ್​ ಸ್ವಾಮಿ ಪ್ರಕರಣದಲ್ಲಿ ಜೆಡಿಎಸ್​ ಮಾಜಿ ಶಾಸಕ ಸಿ.ಬಿ.ಸುರೇಶ್​ಬಾಬು ಹೆಸರು ಹರಿದಾಡುತ್ತಿದ್ದು, ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸ ಒದಗಿಸಿದೆ.
ಯುವರಾಜ್​ ಬಳಿಯಿಂದ ಸಿಸಿಬಿ ಜಪ್ತಿ ಮಾಡಿರುವ ಎರಡು ಐಷಾರಾಮಿ ಕಾರುಗಳ ಪೈಕಿ ರೇಂಜ್​ ರೋವರ್​ ಕಾರು ಸುರೇಶ್​ಬಾಬು ಹೆಸರಿನಲ್ಲಿದ್ದು, ಯುವರಾಜ್​ಗೆ ರಾಜಕಾರಣಿಗಳ ಜತೆ ನಂಟು ಇರುವುದು ಒಂದೊಂದಾಗಿ ಬೆಳಕಿಗೆ ಬರುತ್ತಿದೆ. 75 ಲಕ್ಷ ರೂ.ಗೆ ಸುರೇಶ್​ಬಾಬು ಬಳಿಯಿಂದ ಕಾರನ್ನು ಖರೀದಿಸಿರುವ ಯುವರಾಜ್​ ಈವರೆಗೆ ತನ್ನ ಹೆಸರಿಗೆ ಮಾಲೀಕತ್ವ ಬದಲಿಸಿಕೊಂಡಿಲ್ಲ.ಇದನ್ನೂ ಓದಿರಿನಿನ್ ಹೆಂಡ್ತಿಗೆ ಸೀರೆ ತರಲು ಹೋಗಿದ್ಯಾ? ರಾಸ್ಕಲ್​…: ಅಧಿಕಾರಿಗಳ ವಿರುದ್ಧ ನಾಲಿಗೆ ಹರಿಯಬಿಟ್ಟ ಮಾಧುಸ್ವಾಮಿ
75 ಲಕ್ಷ ರೂ. ಚೆಕ್​: ಒಂದೂವರೆ ಕೋಟಿ ರೂ. ಮೌಲ್ಯದ 2019ರ ಮಾಡೆಲ್​ ರೇಂಜ್​ ರೋವರ್​ ಸ್ಪೋರ್ಟ್​ ಡೀಸೆಲ್​ ಕಾರನ್ನು ಕಳೆದ ವರ್ಷ 75 ಲಕ್ಷ ರೂ.ಗೆ ಯುವರಾಜ್​ ಖರೀದಿಸಿದ್ದರು. 75 ಲಕ್ಷ ರೂಪಾಯಿಯನ್ನು ಚೆಕ್​ ರೂಪದಲ್ಲಿ ನೀಡಿದ್ದು, ಆ ಚೆಕ್​ ದಾಖಲೆಗಳನ್ನು ಸುರೇಶ್​ಬಾಬು ಇನ್ನೂ ಇಟ್ಟಿದ್ದಾರೆ. ಡಿಲಿವರಿನೋಟ್​ಗೆ ಸಹ ಸುರೇಶ್​ಬಾಬು ಸಹಿ ಹಾಕಿದ್ದಾರೆ. ಆದರೆ, ಈವರೆಗೆ ಯುವರಾಜ್​ ತನ್ನ ಹೆಸರಿಗೆ ಕಾರನ್ನು ಮಾಡಿಸಿಕೊಳ್ಳದೆ ಇರುವುದು ಹಲವು ಅನುಮಾನಿಗಳಿಗೆ ಎಡೆ ಮಾಡಿಕೊಟ್ಟಿದೆ.ಇದನ್ನೂ ಓದಿರಿಪರಸ್ತ್ರೀ ಜತೆ ಮೂರು ಮಕ್ಕಳ ತಂದೆಗೆ ಲವ್ವಿಡವ್ವಿ! ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದವರ ಕಥೆ ಏನಾಯ್ತು?
ಕಾರು ಖರೀದಿಸುವ ವೇಳೆ 50 ಲಕ್ಷ ರೂ. ಬ್ಯಾಂಕ್​ ಸಾಲ ಪಡೆಯಲಾಗಿತ್ತು. ಕರೊನಾ ಸಂದರ್ಭದಲ್ಲಿ ಯುವರಾಜ್​ ಸಾಲದ ಕಂತು ಕಟ್ಟಲಿಲ್ಲ ಎಂಬುದು ತಿಳಿದುಬಂದಿದೆ. ಅವರಿಗೆ ಕಾರು ಮಾರಿರುವ ಸಂಬಂಧದ ಎಲ್ಲ ವ್ಯವಹಾರ ಪತ್ರಗಳು ನನ್ನ ಬಳಿ ಇದ್ದು, ಅದನ್ನು ಸಿಸಿಬಿಯವರಿಗೆ ತಲುಪಿಸಿದ್ದಾನೆ. ಕಾರಿನ ಮಾರಾಟ ವ್ಯವಹಾರಿಕ ಸಂಬಂಧ ಹೊರತುಪಡಿಸಿ ನನಗೂ ಆತನಿಗೂ ಯಾವುದೇ ಬೇರೆ ರೀತಿಯ ಸಂಬಂಧವಿಲ್ಲ ಎಂದು ಸುರೇಶ್​ಬಾಬು ‘ವಿಜಯವಾಣಿ’ಗೆ ಸ್ಪಷ್ಟಪಡಿಸಿದ್ದಾರೆ.
ನನ್ನ ಕಾರನ್ನು ಅವರಿಗೆ ವರ್ಷದ ಹಿಂದೆಯೇ ಮಾರಾಟ ಮಾಡಿದ್ದೆ. ಅದರೆ, ವ್ಯವಹಾರ ಪೂರ್ಣಗೊಳಿಸಿಕೊಂಡಿಲ್ಲ. ಕಾರಿನ ಮೇಲೆ ಸಾಲ ಕೂಡ ಇದೆ. ಒಳ್ಳೆಯ ವ್ಯಕ್ತಿ ಎಂದು ಯಾರೋ ಆತನನ್ನು ಪರಿಚಯಿಸಿದ್ದರು. ನನ್ನ ಕಾರಿನ ರಿಜಿಸ್ಟ್ರೇಷನ್​ ನಂಬರ್​ (123) ವಿಶೇಷವಾಗಿದ್ದರಿಂದ ಆ ಖಯಾಲಿಗೆ ಆತ ನನ್ನ ಬಳಿ ಖರೀದಿಸಿದ್ದರು. ಈ ಬಗ್ಗೆ ಸಿಸಿಬಿ ಪೊಲೀಸರೊಂದಿಗೆ ಮಾತನಾಡಿ ವ್ಯವಾಹಾರ ಬಗೆಹರಿಸಿಕೊಳ್ಳುತ್ತೇನೆ.| ಸಿ.ಬಿ.ಸುರೇಶ್​ಬಾಬುಮಾಜಿ ಶಾಸಕ
ಡ್ಯೂಟಿ ಮುಗಿಸಿ ರಾತ್ರಿ ಬಂದವ ಮಗಳ ಬಾಯಿಗೆ ಬಟ್ಟೆ ತುರುಕುತ್ತಿದ್ದ.. ಕೈಕಾಲು ಕಟ್ಟಿ ಹೊಡೆಯುತ್ತಿದ್ದ…

ರಾಧಿಕಾ ಕುಮಾರಸ್ವಾಮಿಗೆ ಸಿಸಿಬಿ ನೋಟಿಸ್​ ಜಾರಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × four =
Remember me
