ಬೆಂಗಳೂರು:ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಹಲವರಿಂದ ಹಣ ಪಡೆದು ವಂಚಿಸಿದ್ದ ಯುವರಾಜ್ ಅಲಿಯಾಸ್ ಸ್ವಾಮಿ ತನ್ನ ಪತ್ನಿಯ ಹೆಸರಿನಲ್ಲಿ ಅಪಾರ ಆಸ್ತಿ-ಪಾಸ್ತಿ ಖರೀದಿಸಿರುವ ಅಂಶ ಬೆಳಕಿಗೆ ಬಂದಿದೆ. ಆತನ ಪತ್ನಿ ಪ್ರೇಮಾ ಹೆಸರಿನಲ್ಲಿ ಕೋಟಿ ಕೋಟಿ ಬೆಲೆ ಬಾಳುವ ನಿವೇಶನ, ಕೃಷಿ ಜಮೀನು, ಐಷಾರಾಮಿ ಕಾರುಗಳು ಇವೆ ಎಂಬ ಮಾಹಿತಿ ಲಭ್ಯವಾಗಿದೆ.
ಯುವರಾಜ್ ಜತೆ ಹಣಕಾಸು ವ್ಯವಹಾರ ಮಾಡಿರುವವರ ವಿಚಾರಣೆಯನ್ನು ಪೊಲೀಸರು ಮತ್ತು ಆದಾಯ ತೆರಿಗೆ ಅಧಿಕಾರಿಗಳು ಸದ್ಯದಲ್ಲೇ ನಡೆಸಲಿದ್ದಾರೆ. ಯುವರಾಜ್‌ನಿಂದ ರಾಧಿಕಾ ಕುಮಾರಸ್ವಾಮಿ ಖಾತೆಗೆ ದೊಡ್ಡ ಮೊತ್ತದ ಹಣ (1 ಕೋಟಿ ರೂ.ಗಿಂತಲೂ ಹೆಚ್ಚು) ಹೋಗಿರುವುದು ಸಿಸಿಬಿ ತನಿಖೆಯಲ್ಲಿ ಕಂಡು ಬಂದಿತ್ತು. ಇದೀಗ ರಾಧಿಕಾ ಅವರು ಈ ಹಣವನ್ನು ವಾಪಸ್ ಕೊಟ್ಟಿದ್ದಾರೆ ಎನ್ನಲಾಗಿದೆ. ಸಿಸಿಬಿಯಿಂದಲೂ ಯುವರಾಜ್ನ ಆಸ್ತಿಯ ಮಾಹಿತಿಯನ್ನು ಒಳಗೊಂಡ ಕಡತಗಳ ನಕಲು ಪ್ರತಿಯನ್ನು ಐಟಿ ಪಡೆದುಕೊಂದಿದೆ. ಉಮೇಶ್ ಹಾಗೂ ಅಡುಗೆ ಭಟ್ಟರ ಬ್ಯಾಂಕ್ ಖಾತೆಗೆ ಯುವರಾಜ್ ಹಲವರಿಂದ ದೊಡ್ಡ ಮೊತ್ತದ ಹಣ ಹಾಕಿಸಿಕೊಂಡಿದ್ದ ಎನ್ನಲಾಗಿದೆ.ಇದನ್ನೂ ಓದಿರಿಸರ್ಕಾರದ ವಿರುದ್ಧ ಸಿಡಿದೆದ್ದ ಧ್ರುವ ಸರ್ಜಾ! ನಟನ ಆ ಪ್ರಶ್ನೆಗೆ ಸಿಎಂ ಉತ್ತರಿಸುವರೇ?
ತನ್ನ ಕಾರು ಚಾಲಕನ ಬ್ಯಾಂಕ್ ಖಾತೆಯಿಂದ ಯುವರಾಜ್ ಹಣಕಾಸಿನ ವಹಿವಾಟು ನಡೆಸಿರುವುದೂ ಬಯಲಾಗಿದೆ. ಈ ಕುರಿತು ಚಾಲಕ ಉಮೇಶ್‌ನನ್ನು ವಿಚಾರಣೆ ನಡೆಸಲಾಗುತ್ತಿದೆ. ಸಿಸಿಬಿ ವಶದಲ್ಲಿರುವ ಯುವರಾಜ್ ಹೊಂದಿರುವ ಆಸ್ತಿಗಳ ಬಗ್ಗೆ ಐಟಿ, ಮಾಹಿತಿ ಕಲೆ ಹಾಕಿದಾಗ ಈತನ ಕಾರು ಚಾಲಕ ಉಮೇಶ್ ಬ್ಯಾಂಕ್ ಖಾತೆ ಮೂಲಕ ದೊಡ್ಡ ಪ್ರಮಾಣದಲ್ಲಿ ಹಣ ವರ್ಗಾವಣೆ ಆಗಿರುವುದು ಬೆಳಕಿಗೆ ಬಂದಿತ್ತು. ಇದರ ಬೆನ್ನಲ್ಲೇ ಕಳೆದ ಜ.22ರಂದು ವಿಚಾರಣೆಗೆ ಹಾಜರಾಗುವಂತೆ ಉಮೇಶ್‌ಗೆ ಐಟಿ ಅಧಿಕಾರಿಗಳು ಸಮನ್ಸ್ ಜಾರಿ ಮಾಡಿದ್ದರು. ಉಮೇಶ್ ಐಟಿ ವಿಚಾರಣೆ ಎದುರಿಸಿ, ತನ್ನ ಬ್ಯಾಂಕ್ ಖಾತೆ ಮೂಲಕ ಎಷ್ಟು ಪ್ರಮಾಣದಲ್ಲಿ ಹಣ ವರ್ಗಾವಣೆಯಾಗಿದೆ ಎಂಬ ಬಗ್ಗೆ ಕೆಲ ಮಾಹಿತಿ ನೀಡಿದ್ದು, ಇದಕ್ಕೆ ಸಂಬಂಧಿಸಿದ ದಾಖಲೆ ನೀಡಲು ಸಮಯಾವಕಾಶ ಕೇಳಿದ್ದಾನೆ ಎನ್ನಲಾಗಿದೆ.
ಸೇನೆಯಿಂದ ಸ್ವಗ್ರಾಮಕ್ಕೆ ಬಂದ ಕೋಲಾರದ ಯೋಧ ಪತ್ನಿಯ ಮಡಿಲಲ್ಲೇ ಪ್ರಾಣಬಿಟ್ಟರು!

ವರ್ಷವಾದರೂ ಕೋರ್ಟ್‌ಗೆ ಅಲೆಯುತ್ತಿದ್ದಾರೆ ಪಾಕ್ ಪರ ಘೋಷಣೆ ಕೂಗಿದ ಕಾಶ್ಮೀರಿ ವಿದ್ಯಾರ್ಥಿಗಳು

ಸ್ಯಾನಿಟೈಸರ್​ನ್ನು ಗಟಗಟನೆ ಕುಡಿದ ಅಧಿಕಾರಿ; ಅಯ್ಯಯ್ಯೋ ಹಾಗೆ ಮಾಡಬೇಡಿ ಎಂದ ಸಹೋದ್ಯೋಗಿಗಳು

10ನೇ ತರಗತಿ ಪರೀಕ್ಷೆ ಬರೆಯಲಿದ್ದಾನೆ 11 ವರ್ಷದ ಪೋರ!

ಮದುವೆಯಾಗಲು ಹೆಣ್ಣಿಗೊಂದು ಗಂಡಿಗೊಂದು ವಯಸ್ಸೇಕೆ ? ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವ ವಕೀಲರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + seventeen =
Remember me
