ಬೆಂಗಳೂರು:18ನೇ ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಜೂನ್​ 04ರಂದು ಪ್ರಕಟಗೊಂಡಿದ್ದು, ಈ ಬಾರಿ ಲೆಕ್ಕಾಚಾರವೆಲ್ಲವೂ ತಲೆ ಕೆಳಗಾಗಿದೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​ ಡಿ.ಕೆ. ಸುರೇಶ್​ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್. ಮಂಜುನಾಥ್​ ಎದುರು ಎರಡು ಲಕ್ಷಕ್ಕೂ ಹೆಚ್ಚಿನ ಅಂತರದಲ್ಲಿ ಸೋಲು ಕಂಡಿದ್ದು, ಇದು ಕಾಂಗ್ರೆಸ್​ ನಾಯಕರ ನಿದ್ದೆಗೆಡಿಸಿದೆ.
ಇನ್ನೂ ಸೋಲಿನ ಹತಾಶೆಯಲ್ಲಿರುವ ಡಿ.ಕೆ. ಸುರೇಶ್​ರನ್ನು ಸಂತೈಸಲು ಕಾಂಗ್ರೆಸ್​ ನಾಯಕರ ದಂಡೇ ಅವರ ಮನೆಗೆ ದೌಡಾಯಿಸಿದ್ದು, ಸೋಲಿನ ಪರಮಾರ್ಶೆ ಮಾಡುತ್ತಿದ್ದಾರೆ. ಇನ್ನೂ ಡಿ.ಕೆ. ಸುರೇಶ್​ರನ್ನು ಭೇಟಿ ಮಾಡಿ ಮಾತನಾಡಿದ ಸಚಿವ ಜಮೀರ್​ ಅಹ್ಮದ್​ ಸೋಲಿನ ಹಿಂದಿನ ಕಾರಣವನ್ನು ತಿಳಿಸಿದ್ದಾರೆ.
ಇದನ್ನೂ ಓದಿ:ಟೀಮ್​ ಇಂಡಿಯಾವನ್ನು ಸೋಲಿಸಲು ಸಾಕಷ್ಟು ಡೇಟಾ ಇದೆ; ಪಂದ್ಯಕ್ಕೂ ಮುನ್ನ ಅಚ್ಚರಿಯ​ ಹೇಳಿಕೆ ನೀಡಿದ ಐರ್ಲೆಂಡ್​ ಕೋಚ್
ಈ ಕುರಿತು ಮಾತನಾಡಿದ ಜಮೀರ್​, ಸುರೇಶ್​ ಅವರ ಸೋಲು ಅಘಾತಕಾರಿಯಾಗಿದ್ದು, ಬಹಳ ನೋವುಂಟು ಮಾಡಿದೆ. ದೇಶದ ಅಲ್ಲಾ ಸಂಸತ್​ ಸದಸ್ಯರ ಪೈಕಿ ಅತಿ ಹೆಚ್ಚು ಕೆಲಸ ಮಾಡಿದವರ ಯಾರಾದರು ಇದ್ದೆರ ಅದು ಡಿ.ಕೆ. ಸುರೇಶ್​. ಏಕೆಂದರೆ ನಾನು ನೋಡಿದಂರೆ ಪ್ರತಿದಿನ ತಮ್ಮ ಕ್ಷೇತ್ರದ ಕೆಲಸ ಅಥವಾ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದರು. ಭಾನುವಾರದಂದು ಸುರೇಶ್​ ಕೆಲಸ ಮಾಡಿರುವುದನ್ನು ನಾನು ನೋಡಿದ್ದೇನೆ. ಅವರನ್ನು ಸೋಲಿಸಿದ್ದು ಯಾರದ್ದೋ ಜಿದ್ದಲ್ಲ ಮತ್ತು ಜೆಡಿಎಸ್-ಬಿಜೆಪಿ ಮೈತ್ರಿಯೂ ಅಲ್ಲ, ಜನ ಅವರನ್ನು ಸೋಲಿಸಿದ್ದಾರೆ, ಕೆಲಸಗಾರನನ್ನು ಸೋಲಿಸಿರುವುದು ವೇದನೆಯನ್ನುಂಟು ಮಾಡುತ್ತದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆಯಿಂದ ಹೇಳುವುದಾದರೆ, ಕಾಂಗ್ರೆಸ್ ಪಕ್ಷದ ಪ್ರದರ್ಶನ ಬಹಳ ಚೆನ್ನಾಗಿದೆ, ಕಳೆದ ಬಾರಿ ಕೇವಲ ಒಂದು ಸೀಟು ಸಿಕ್ಕಿತ್ತು, ಈ ಬಾರಿ 9ನ ಸಿಕ್ಕಿವೆ. ಉಳಿದ ಕ್ಷೇತ್ರಗಳ ಸೋಲಿನ ಬಗ್ಗೆ ಪರಮಾರ್ಶಿಸಲಾಗುವುದು ಎಂದು ಮಾಜಿ ಸಂಸದ ಡಿ.ಕೆ. ಸುರೇಶ್​ ಭೇಟಿ ಬಳಿಕ ಸಚಿವ ಜಮೀರ್​ ಅಹ್ಮದ್​ ಹೇಳಿದ್ದಾರೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:18 + seventeen =
Remember me
