ರಾಮನಗರ:ಕಾಂಗ್ರೆಸ್​ ಶಾಸಕ ಹಾಗೂ ಮಾಜಿ ಸಚಿವ ಜಮೀರ್​ ಅಹ್ಮದ್​ ಮನೆ ಹಾಗೂ ಕಚೇರಿ ಮೇಲಿನ ಇಡಿ ದಾಳಿ ಬಗ್ಗೆ ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಅವರು ಪ್ರತಿಕ್ರಿಯೆ ನೀಡಿದ್ದು, ರಾಜಕೀಯದಲ್ಲಿದ್ದಾಗ ಇದೆಲ್ಲವೂ ಸಾಮಾನ್ಯ ಎಂದು ಹೇಳಿದ್ದಾರೆ.
ನಿನ್ನೆ ದಾಳಿ ಸಂಬಂಧ ಮಾತನಾಡಿದ್ದ ಜಮೀರ್​, ಯಾರೋ ಮನೆಯ ವಿಚಾರವಾಗಿ ದೂರು ಕೊಟ್ಟಿದ್ದಾರೆ. ಹಾಗಾಗಿ ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿದ್ದಾರೆ ಎಂದಿದ್ದರು. ಈ ವಿಚಾರವಾಗಿ ಬಿಡದಿಯ ಕೇತಗಾನಹಳ್ಳಿ ತೋಟದ ಮನೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್​ಡಿಕೆ, ನಾನಂತೂ ಯಾವ ದೂರನ್ನು ಕೊಟ್ಟಿಲ್ಲ. ರಾಜಕೀಯದಲ್ಲಿದ್ದಾಗ ಇದೆಲ್ಲವೂ ಸಾಮಾನ್ಯ ಎಂದು ಹೇಳಿದರು.
ಯಾರು ದೂರು ಕೊಟ್ಟಿದ್ದಾರೆ ಅನ್ನೋದು ಇಡಿ ಅಧಿಕಾರಿಗಳಗೆ ಗೊತ್ತಿದೆ. ಅದು ನನಗೆ ಗೊತ್ತಿಲ್ಲ. ನಾನಂತೂ ಯಾವ ದೂರು ಕೊಟ್ಟಿಲ್ಲ. ಆದರೆ, ಕೇಂದ್ರ ಸರ್ಕಾರದ ಕೆಲ ಸಂಸ್ಥೆಗಳು ಮೂಗರ್ಜಿ ಬರೆಯುತ್ತಾರೆ. ಈ ರೀತಿಯ ರೇಡ್​ಗಳು ನಡೆಯುತ್ತಿರುತ್ತವೆ. ನನ್ನ ತೋಟದ ಜಮೀನಿನ‌ ವಿಚಾರದಲ್ಲಿಯೂ ದಾಳಿಯಾಗಿತ್ತು. 25 ವರ್ಷಗಳ ಕಾಲ ನನಗಾದ ಕಷ್ಟ, ಕಾಟ ನನಗೆ ಮಾತ್ರ ಗೊತ್ತಿದೆ ಎಂದರು.
ರಾಜಕೀಯದಲ್ಲಿದ್ದಾಗ ಇದೆಲ್ಲವೂ ಸಾಮಾನ್ಯ. ಆದರೆ, ನಮ್ಮ ದಾಖಲೆಗಳು ಸರಿಯಿದ್ದರೆ ಯಾರು ಏನು ಮಾಡಲು ಸಾಧ್ಯವಿಲ್ಲ ಎಂದು ಮಾಜಿ ಸಿಎಂ ಎಚ್​ಡಿಕೆ ಹೇಳಿಕೆ ನೀಡಿದರು.(ದಿಗ್ವಿಜಯ ನ್ಯೂಸ್​)
ಡಿಕೆಶಿಗೆ ಐಟಿ-ಇಡಿ ಲಿಂಕ್ ಜಾಸ್ತಿ… ಎನ್ನುತ್ತಲೇ ಜಮೀರ್ ಮನೆ ಮೇಲೆ ದಾಳಿಗೆ ಲಿಂಕ್​ ಕೊಟ್ಟ ಸಚಿವ!

ಇಡೀ ರಾಜ್ಯವೇ ಬೆಚ್ಚಿಬೀಳುವ ಸುದ್ದಿ… ಬೆಂಗಳೂರು ಮೂಲದ ಯುವಕನಿಂದಲೇ ನಡೆದಿತ್ತು ಮಹಾ ಸಂಚು

ಅರವಿಂದ್​ ಜತೆ ಸಂಬಂಧ ಮುರಿದಿಕೋ ಎಂದ ಪ್ರಶಾಂತ್​ಗೆ ದಿವ್ಯಾ ಉರುಡುಗ ಕೊಟ್ಟ ಉತ್ತರವಿದು..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 1 =
Remember me
