ಹುಬ್ಬಳ್ಳಿ :ಇತ್ತೀಚೆಗೆ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್​​ ಮುತಾಲಿಕ್​​ ಮಾಧ್ಯಮಗಳ ಮೂಲಕ ಹಲಾಲ್​​ಮುಕ್ತ ದೀಪಾವಳಿ ಅಭಿಯಾನಕ್ಕೆ ಕರೆ ಕೊಟ್ಟಿದ್ದರು. ಇದರಂತೆ ಈ ಹಲಾಲ್​​​ ಮುಕ್ತ ದೀಪಾವಳಿಯಲ್ಲಿ ಪೂಜಾ ಸಾಮಾಗ್ರಿಗಳನ್ನು ಹಿಂದೂಗಳಿಂದಲೇ ಖರೀದಿಸಬೇಕು. ನಮ್ಮ ಹಣವನ್ನು ಮುಸ್ಲಿಮರು ವಿಧ್ವಂಸಕ ಕೃತ್ಯಗಳಿಗೆ ಬಳಸಿಕೊಳ್ಳುತ್ತಿದ್ದಾರೆ ಎಂದು ಹುಬ್ಬಳ್ಳಿಯಲ್ಲಿ ಕಳೆದ ವಾರ ಹೇಳಿಕೆ ನೀಡಿದ್ದರು.
ಇಂದು ಹುಬ್ಬಳ್ಳಿಯಲ್ಲಿ ಹಿಂದೂ ಸಂಘಟನೆಗಳಿಂದ ಹಲಾಲ್ ಮುಕ್ತ ದೀಪಾವಳಿ ಅಭಿಯಾನದ ವಿಚಾರವಾಗಿ ಕಾಂಗ್ರೆಸ್​​​ ಶಾಸಕ ಜಮೀರ್ ಅಹ್ಮದ್ ಹೇಳಿಕೆ ನೀಡಿದ್ದಾರೆ. ಪ್ರಮೋದ್​​ ಮುತಾಲಿಕ್​​ ಹೇಳಿದ್ದಾರೆ ಎಂದ ಮಾತ್ರಕ್ಕೆ ಹಿಂದೂಗಳು ಮುಸ್ಲಿಮರ ಬಳಿ ಖರೀದಿಗೆ ಬರುವುದಿಲ್ಲವಾ? ನನ್ನೊಂದಿಗೆ ಬನ್ನಿ ನಾನು ತೋರಿಸುತ್ತೇನೆ. ಯಾವುದಾದರೂ ಮುಸ್ಲಿಮರು ತಮ್ಮ ಬಳಿ ಹಿಂದೂಗಳು ಖರೀದಿಗೆ ಬರುವುದಿಲ್ಲ ಎಂದು ಹೇಳಲಿ ನೋಡೋಣ. ನಾನು ನಮಾಜ್​​ ಮಾಡಿ ಬರುತ್ತೇನೆ. ನಡೀರಿ ಎಲ್ಲರೂ ಮುಸ್ಲಿಂ ಏರಿಯಾಗಳಿಗೆ ಹೋಗೋಣ. ಆ ರೀತಿ ಒಂದೇ ಒಂದು ಉದಾಹರಣೆಯನ್ನು ನೀವು ಕೊಟ್ಟರೂ ನಾನು ಇಡೀ ದಿನ ನಿಮ್ಮ ಜತೆಯೇ ಇರುತ್ತೇನೆ ಎಂದು ಶಾಸಕ ತಿಳಿಸಿದರು.
ಇನ್ನೂ ಇದರ ಕುರಿತಾಗಿ ಮಾತನಾಡಿದ ಜಮೀರ್​​, ದೀಪಾವಳಿಯಲ್ಲಿ ಮಾರಾಟವಾಗುವ ದೀಪಗಳನ್ನು ಹೆಚ್ಚಾಗಿ ಮುಸ್ಲಿಮರೇ ತಯಾರಿಸುತ್ತಾರೆ. ಹಿಂದೂಗಳು ಅದನ್ನು ಖರೀಸುತ್ತಾರೆ. ಆದರೆ ಈ ರೀತಿ ಹೇಳುವವರಿಗೆ ಹಿಂದೂಗಳೂ ಬೇಕಾಗಿಲ್ಲ. ಮುಸ್ಲಿಮರು ಕೂಡ ಬೇಕಾಗಿಲ್ಲ. ಖಾಲಿ ಅವರ ಬೆಳೆ ಬೇಯಿಸಿಕೊಳ್ಳಲು ಈ ರೀತಿ ಮಾಡುತ್ತಿದ್ದಾರೆ. ಮೊದಲು ಒಳ್ಳೆಯ ಕೆಲಸಗಳನ್ನು ಮಾಡಿ. ಎಲ್ಲರನ್ನೂ ಜೋಡಿಸೋದು. ಪ್ರೀತಿಯಿಂದ ಬಾಳುವುದನ್ನುಕಲಿಸಿಕೊಡಿ. ಅದು ಬಿಟ್ಟು ನೀವು ಮುಸ್ಲಿಮರ ಅಂಗಡಿಗಳಲ್ಲಿ ಹಿಂದೂಗಳು ತೆಗೆದುಕೊಳ್ಳಬಾರದು ಎಂದರೆ ಅದು ಆಗುವಂತ ಮಾತಾ? ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:four × 2 =
Remember me
