ಬೆಂಗಳೂರು:ವಿದ್ಯುತ್ ಕ್ಷೇತ್ರದಲ್ಲಿ ಶೂನ್ಯ ಇಂಗಾಲ ಸಾಧನೆ ನಿಟ್ಟಿನಲ್ಲಿ ನಡೆಸಿರುವ ಪ್ರಯತ್ನ ಹಾಗೂ ಸೌರಶಕ್ತಿಯೂ ಸೇರಿ ನವೀಕೃತ ಇಂಧನ ಮೂಲಗಳನ್ನು ಬಳಸುವ ವಿಚಾರದಲ್ಲಿ ಕರ್ನಾಟಕ ಅಗ್ರಸ್ಥಾನದಲ್ಲಿದೆ. ಭಾರತೀಯ ಇಂಧನ ಆರ್ಥಿಕತೆ ಹಾಗೂ ಹಣಕಾಸು ವಿಶ್ಲೇಷಣೆ ಮತ್ತು ಎಂಬರ್ ಸಂಸ್ಥೆಗಳು ಪ್ರಕಟಿಸಿರುವ ‘ರಾಜ್ಯಗಳ ವಿದ್ಯುತ್ ಪರಿವರ್ತನೆ’ ವರದಿಯಲ್ಲಿ ಈ ಹೆಗ್ಗಳಿಕೆ ಪಡೆದಿದೆ. ಪರಿವರ್ತನೆ ಹಾದಿಯಲ್ಲಿ ಸಾಗಲು 21 ರಾಜ್ಯಗಳ ಸಿದ್ಧತೆಯನ್ನು ಮೌಲ್ಯಮಾಪನ ಮಾಡುವ ವರದಿ ಇದಾಗಿದ್ದು, ಮೂರು ಆಯಾಮಗಳಲ್ಲಿ ಅಳೆಯಲಾಗಿದೆ. ಇಂಧನ ವಲಯದಲ್ಲಿ ನವೀಕೃತ ಸಂಪನ್ಮೂಲಗಳನ್ನು ಸೇರ್ಪಡೆಗೊಳಿಸುವಲ್ಲಿ ರಾಜ್ಯವೂ ಮುಂದಿದ್ದು, ಗುಜರಾತ್ ಕೂಡ ಇದೇ ಸಾಧನೆ ಮಾಡಿದೆ. ಇದಷ್ಟೇ ಅಲ್ಲದೆ, ಭವಿಷ್ಯದಲ್ಲಿ ಶುದ್ಧ ಇಂಧನಕ್ಕೆ ಬದಲಾಗಲು ಮಾರುಕಟ್ಟೆ ಪೂರಕ ಅಂಶಗಳು ಸೇರಿ ಅಗತ್ಯ ಸಿದ್ಧತಾ ಕ್ರಮ ಕೈಗೊಳ್ಳುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಲಾಗಿದೆ.
ಎಸ್ಕಾಂಗಳಿಂದ ಹಿನ್ನಡೆ: ನವೀಕೃತ ಇಂಧನ ವಲಯದಲ್ಲಿ ಉತ್ತಮ ಸಾಧನೆ ಹೊರತಾಗಿಯೂ ಕರ್ನಾಟಕ ಒಟ್ಟಾರೆಯಾಗಿ ಮಧ್ಯಮ ಸ್ಥಾನದಲ್ಲಿರಲು ವಿತರಣಾ ಕಂಪನಿಗಳು ನಿರೀಕ್ಷಿತ ಅಂಕಗಳನ್ನು ಪಡೆಯದಿರುವುದು ಕಾರಣವಾಗಿದೆ. ಒಟ್ಟು ವಿದ್ಯುತ್​ನಲ್ಲಿ ಶೇ.47 ಬಳಸುವ, ಬೆಸ್ಕಾಂ ಪಿಎಫ್​ಸಿಯಿಂದ 2ನೇ ಅತಿ ಕಡಿಮೆ ರೇಟಿಂಗ್ ಪಡೆದಿದೆ. ಎರಡು ಹಾಗೂ ಮೂರನೇ ಆಯಾಮದಲ್ಲಿ ಕಳೆದ ಬಾರಿ ಉತ್ತಮ ಸಾಧನೆ ಪ್ರದರ್ಶಿಸಿದ್ದ ಕರ್ನಾಟಕ, ಈ ಬಾರಿ ಹಿಂದುಳಿಯುವಂತಾಗಿದೆ.
ಜಲ ವಿದ್ಯುತ್ ಅವಲಂಬನೆ
ಇಂಗಾಲದ ಪ್ರಮಾಣ ತಗ್ಗಿಸುವ ವಿಚಾರದಲ್ಲಿ 21 ರಾಜ್ಯಗಳಿಗಿಂತ ಕರ್ನಾಟಕ ಮುಂದಿದೆ. ನವೀಕೃತ ಸಂಪನ್ಮೂಲಗಳ ವಿದ್ಯುತ್ ಬಳಕೆ ಪ್ರಮಾಣದಲ್ಲಿ ಹಿಂದಿದ್ದರೂ, ಜಲವಿದ್ಯುತ್ ಹೆಚ್ಚು ಅವಲಂಬಿಸಿರುವುದರಿಂದ ಇಂಗಾಲ ಪ್ರಮಾಣ ಕಡಿಮೆಗೊಳಿಸುವುದು ಸಾಧ್ಯವಾಗಿದೆ. ಹಿಮಾಚಲಪ್ರದೇಶ ಹಾಗೂ ಉತ್ತರಾಖಂಡ್​ನಷ್ಟೇ ಕರ್ನಾಟಕವೂ ಪ್ರಾಬಲ್ಯ ಹೊಂದಿದೆ. ರಾಜ್ಯವು ಬಳಸುವ ಒಟ್ಟಾರೆ ವಿದ್ಯುತ್​ನಲ್ಲಿ ಶೇ.37 ನವೀಕೃತ ಇಂಧನ ಮೂಲದ್ದಾಗಿದೆ. 2020ರಿಂದ 2024ರ ಫೆಬ್ರವರಿ ಅವಧಿಯಲ್ಲಿ ಮರುಬಳಕೆಯ ವಿದ್ಯುತ್ ಮೂಲಗಳ ಸೇರ್ಪಡೆ ವಿಚಾರದಲ್ಲಿ ರಾಜ್ಯ ಗಮನಾರ್ಹ ಸಾಧನೆ ಮಾಡಿದ್ದು, ದೇಶದಲ್ಲೇ 5ನೇ ಸ್ಥಾನದಲ್ಲಿದೆ. ಈ ಅವಧಿಯಲ್ಲಿ 3.4 ಗಿಗಾ ವಾಟ್ ಸೇರ್ಪಡೆಯಾಗಿದ್ದು. ಶೇ.7 ಬೆಳವಣಿಗೆ ಕಂಡಿದೆ. ಮೌಲ್ಯಮಾಪನದ ಮಾನದಂಡಗಳಲ್ಲಿ ಬದಲಾವಣೆ ಹೊರತಾಗಿಯೂ ಅಗ್ರಸ್ಥಾನ ಕಾಯ್ದುಕೊಳ್ಳಲು ಸಾಧ್ಯವಾಗಿದೆ. ಈ ವಲಯದಲ್ಲಿ ರಾಜಸ್ಥಾನ ಹಾಗೂ ಆಂಧ್ರಪ್ರದೇಶ ಸಾಧನೆಯು ಉತ್ತಮವಾಗಿದೆ.
ಚಾರ್ಜಿಂಗ್ ಕೇಂದ್ರ
ವಿದ್ಯುತ್ ಚಾಲಿತ ವಾಹನಗಳ ಸಾರ್ವಜನಿಕ ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆಯಲ್ಲಿ ಮಹಾರಾಷ್ಟ್ರ ಹಾಗೂ ದೆಹಲಿಯನ್ನು ಕರ್ನಾಟಕ ಹಿಂದಿಕ್ಕಿದೆ. 2024ರ ಜನವರಿವರೆಗೆ 5,059 ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಪ್ರತಿ 62 ವಾಹನಗಳಿಗೆ ಒಂದು ಕೇಂದ್ರವನ್ನು ಹೊಂದಿದೆ. ಈ ವರ್ಷದ ವರದಿಗೆ ಹಸಿರು ಇಂಧನ ಹಾಗೂ ವಿದ್ಯುತ್ ಚಾಲಿತ ವಾಹನಗಳಿಗೆ ಮೂಲಸೌಕರ್ಯ ಅಂಶಗಳು ಮುಖ್ಯವಾಗಿದ್ದವು. ಇವೆರಡೂ ವಿಚಾರದಲ್ಲಿ ಕರ್ನಾಟಕ ಸಮಗ್ರತೆ ಸಾಧಿಸಿದೆ.
ನೀರಾವರಿ ಪಂಪ್​ಸೆಟ್
ಇಂಧನ ಇಲಾಖೆಯು ವಿದ್ಯುತ್ ಚಾಲಿತ ನೀರಾವರಿ ಪಂಪ್​ಸೆಟ್​ಗಳನ್ನು ಸೌರಶಕ್ತಿಚಾಲಿತ ಪಂಪ್​ಸೆಟ್​ಗಳಾಗಿ ಪರಿವರ್ತಿಸಲು ಯೋಜನೆ ರೂಪಿಸಿ ಜಾರಿಗೊಳಿಸುತ್ತಿರುವುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದರಿಂದ ಪ್ರತಿವರ್ಷ ವಿದ್ಯುತ್ ಸಬ್ಸಿಡಿಗೆ ನೀಡುತ್ತಿರುವ ಕೋಟ್ಯಂತರ ರೂ. ಉಳಿತಾಯವಾಗಲಿದೆ.
ಮೂರು ಆಯಾಮಗಳಲ್ಲಿ ಮೌಲ್ಯಮಾಪನ
ಕಾರ್ಬನ್ ಹೊರಸೂಸುವಿಕೆ ತಗ್ಗಿಸುವುದು, ವಿದ್ಯುತ್ ಜಾಲದ ಸನ್ನದ್ಧತೆ ಹಾಗೂ ಮಾರುಕಟ್ಟೆಗೆ ಪೂರಕ ಅಂಶಗಳು ಹೊಂದಿದ ಮೂರು ಆಯಾಮಗಳಲ್ಲಿ ರಾಜ್ಯಗಳನ್ನು ಮೌಲ್ಯಮಾಪನ ಮಾಡಲಾಗಿದೆ. ನವೀಕೃತ ಸಂಪನ್ಮೂಲಗಳನ್ನು ಬಳಸಿ ಇಂಗಾಲ ಹೊರಸೂಸುವಿಕೆ ತಗ್ಗಿಸುವುದು ಹಾಗೂ ಶೂನ್ಯ ಇಂಗಾಲ ಗುರಿಯತ್ತ ಸಾಗುವುದರತ್ತ ಪ್ರಯತ್ನಗಳನ್ನು ಗುರುತಿಸಲಾಗುತ್ತದೆ. ಸಾಂಪ್ರದಾಯಿಕ ವಿದ್ಯುತ್ ವ್ಯವಸ್ಥೆಯಿಂದ ಶುದ್ಧ ಇಂಧನ ಪೂರೈಕೆಗೆ ವ್ಯತ್ಯಯ ಉಂಟಾಗದಂತೆ ಒಟ್ಟಾರೆ ಜಾಲದ ಸನ್ನದ್ಧತೆಯ ಪರಿಶೀಲನೆ ನಡೆಸಲಾಗುತ್ತದೆ. ಮೂರನೆಯದಾಗಿ ನವೀಕೃತ ಇಂಧನ ಮೂಲಗಳ ಬಳಕೆ ಹಾಗೂ ಬೆಳವಣಿಗೆಗೆ ಮಾರುಕಟ್ಟೆ ಪೂರಕ ಅಂಶಗಳು, ನೀತಿ-ನಿರೂಪಣೆ ವ್ಯವಸ್ಥೆಯನ್ನು ಒಳಗೊಳ್ಳುವುದಾಗಿದೆ. ಈ ಮೂರೂ ಆಯಾಮಗಳಲ್ಲೂ ರಾಜ್ಯ ಉತ್ತಮ ಸಾಧನೆ ಪ್ರದರ್ಶಿಸಿದೆ.
ಸುಖ ನಿದ್ರೆಗಾಗಿ ಈಕೆ ಮಾಡಿದ್ದನ್ನು ಕಂಡು ದಂಗಾದ ಪ್ರಯಾಣಿಕರು! ಹಿಂದೆಂದೂ ಇಂತಹ ಘಟನೆ ಕೇಳಿರಲು ಸಾಧ್ಯವಿಲ್ಲ

ಅಂದು ಆರ್​ಸಿಬಿ ಪ್ಲೇಆಫ್​ ಕನಸಿನ ಬಗ್ಗೆ ವಿಲ್​ ಜ್ಯಾಕ್ಸ್​ ನುಡಿದಿದ್ದ ಭವಿಷ್ಯ ಇಂದು ನಿಜವಾಗ್ತಿದೆ! ಏನು ಗೊತ್ತೇ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 12 =
Remember me
