|ಎನ್.ಎಲ್.ಶಿವಮಾದುಬೆಂಗಳೂರು
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಈ ಬಾರಿ ಶೂನ್ಯ ಫಲಿತಾಂಶ ಪಡೆದಿರುವ ಬಹುತೇಕ ಖಾಸಗಿ ಕಾಲೇಜುಗಳು ಬೋಗಸ್ ಆಗಿದ್ದು, ನಾಮ್ ಕೇ ವಾಸ್ತೆಗಷ್ಟೇ ಕಾರ್ಯ ನಿರ್ವಹಿತ್ತಿವೆ. ಪ್ರಸಕ್ತ ಸಾಲಿನ ಫಲಿತಾಂಶದಲ್ಲಿ 73 ಖಾಸಗಿ ಕಾಲೇಜುಗಳು ಶೂನ್ಯ ಸಂಪಾದನೆ ಮಾಡಿದ್ದು, ಈ ಪೈಕಿ 50ಕ್ಕೂ ಹೆಚ್ಚಿನ ಕಾಲೇಜುಗಳಲ್ಲಿ ಒಂದಂಕಿ ವಿದ್ಯಾರ್ಥಿಗಳಷ್ಟೇ ಇದ್ದಾರೆ ಎನ್ನಲಾಗಿದೆ.
73 ಕಾಲೇಜುಗಳ ಪೈಕಿ 13ರಲ್ಲಿ ಮಾತ್ರ ಎರಡಂಕಿ ವಿದ್ಯಾರ್ಥಿಗಳಿದ್ದಾರೆ. 25ಕ್ಕೂ ಹೆಚ್ಚು ಕಾಲೇಜುಗಳಲ್ಲಿ 10ಕ್ಕಿಂತ ಕಡಿಮೆ ಮತ್ತು 30 ಕಾಲೇಜುಗಳಲ್ಲಿ 5ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿದ್ದಾರೆ. ಫಲಿತಾಂಶದ ಜತೆಗೆ ದಾಖಲಾತಿ ಕೂಡ ಶೂನ್ಯವಿರುವ ಕಾಲೇಜುಗಳೂ ಇವೆ. ಈ ಕಾಲೇಜುಗಳು ಹೆಸರಿಗೆ ಮಾತ್ರ ನಡೆಯುತ್ತಿವೆ. ವಿದ್ಯಾರ್ಥಿಗಳೇ ಅಲ್ಲದವರ ಹೆಸರನ್ನು ನೋಂದಣಿ ಮಾಡಿಕೊಂಡಿರುತ್ತವೆ ಎಂದು ತಿಳಿದುಬಂದಿದೆ.
ವರ್ಷದಿಂದ ವರ್ಷಕ್ಕೆ ಶೂನ್ಯ ಫಲಿತಾಂಶ ಪಡೆಯುವ ಖಾಸಗಿ ಕಾಲೇಜುಗಳ ಸಂಖ್ಯೆ ಹೆಚ್ಚಳವಾಗುತ್ತಲೇ ಇದೆ. ಕಳೆದ ವರ್ಷ ಯಾವುದೇ ಕಾಲೇಜು ಶೂನ್ಯ ಫಲಿತಾಂಶ ಪಡೆದಿರಲಿಲ್ಲ. ಕರೊನಾ ಕಾರಣಕ್ಕೆ 2021ರಲ್ಲಿ ಎಲ್ಲ ವಿದ್ಯಾರ್ಥಿಗಳನ್ನು ಪಾಸ್ ಮಾಡಲಾಗಿತ್ತು. ಅದಕ್ಕೂ ಮೊದಲು ಸಹ ಖಾಸಗಿ ಕಾಲೇಜುಗಳು ಶೂನ್ಯ ಫಲಿತಾಂಶ ಪಡೆಯುತ್ತಿದ್ದವು. ಆದರೆ, ಈ ವರ್ಷ ಕಾಲೇಜುಗಳ ಸಂಖ್ಯೆ ಹೆಚ್ಚಳವಾಗಿದೆ.
ಸರ್ಕಾರಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡಿದ 2,29,329 ವಿದ್ಯಾರ್ಥಿಗಳಲ್ಲಿ 1,45,919 (ಶೇ.63.63)ಮಂದಿ ತೇರ್ಗಡೆಯಾಗಿದ್ದು, ಅನುದಾನಿತ ಕಾಲೇಜುಗಳ 1,15,448 ವಿದ್ಯಾರ್ಥಿಗಳಲ್ಲಿ 82,229(ಶೇ.71.23) ಮಂದಿ ಪಾಸ್ ಆಗಿದ್ದಾರೆ. ಇನ್ನು ಖಾಸಗಿ ಕಾಲೇಜುಗಳ 2,95,330 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 2,47,271(ಶೇ.83.71) ಮಂದಿ ಉತ್ತೀರ್ಣರಾಗಿದ್ದಾರೆ. ಖಾಸಗಿ ಕಾಲೇಜಗಳು ಉತ್ತಮ ಫಲಿತಾಂಶ ಪಡೆದಿದ್ದರೂ ಅದೇ ರೀತಿ ಕಳಪೆ ಸಾಧನೆಯಲ್ಲೂ ಮುಂದಿವೆ.
ಪರಿಣಾಮಗಳೇನು?: ಹೆಸರಿಗಷ್ಟೇ ನಡೆಯುವ ಕಾಲೇಜುಗಳಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಹಾಳಾಗಲಿದೆ. ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಬೇರೊಂದು ಕಾಲೇಜಿಗೆ ಸೇರಲು ಸಾಧ್ಯವಾಗದೆ ವಿದ್ಯಾರ್ಥಿಗಳು ಮಾನಸಿಕ ಕಿರಿಕಿರಿ ಅನುಭವಿಸಬಹುದು
ಶೂನ್ಯ ಫಲಿತಾಂಶ ಪ್ರಕಟವಾಗಿರುವ ಕಾಲೇಜುಗಳ ಮೇಲೆ ಕ್ರಮಕ್ಕೆ ಸೂಚಿಸಿ ಪಿಯು ಇಲಾಖೆಗೆ ಪತ್ರ ಬರೆಯಲಾಗುವುದು. ಪಿಯು ಇಲಾಖೆಯು ಆಡಳಿತಾತ್ಮಕ ಕ್ರಮ ಜರುಗಿಸಲಿದೆ.
|ಎಚ್.ಎನ್. ಗೋಪಾಲಕೃಷ್ಣನಿರ್ದೇಶಕ, ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ
ಸರ್ಕಾರದ ನಿರ್ಲಕ್ಷ್ಯ:ಪ್ರತಿ ವರ್ಷ ಫಲಿತಾಂಶದ ಸಮಯದಲ್ಲಿ ಶೂನ್ಯ ಫಲಿತಾಂಶ ಪ್ರಕಟವಾಗಿರುವ ಕಾಲೇಜುಗಳ ಮಾನ್ಯತೆ ನವೀಕರಣ ಮಾಡುವುದಿಲ್ಲ. ಸಂಬಂಧಪಟ್ಟ ಕಾಲೇಜುಗಳನ್ನು ಬಂದ್ ಮಾಡಿಸಿ ಬೀಗ ಜಡಿಯುವುದಾಗಿ ಭರವಸೆ ನೀಡುತ್ತವೆ. ಆದರೆ, ಪದವಿ ಪೂರ್ವ ಶಿಕ್ಷಣ ಇಲಾಖೆಯು ಯಾವುದೇ ಕಠಿಣ ಕ್ರಮ ಜರುಗಿಸದ ಪರಿಣಾಮ ನಿರಂತರವಾಗಿ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಲೇ ಇದೆ.
1630 ಕೆ.ಜಿ.ಗೂ ಅಧಿಕ ತೂಕದ ಚಿನ್ನ ವಿಮಾನನಿಲ್ದಾಣದಿಂದ ಕಳವು!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + 5 =
Remember me
