ಬೆಂಗಳೂರು:ಬೆಂಗಳೂರಿನ ವೇಗಾ ಸಿಟಿ ಮಾಲ್​ನಲ್ಲಿ ಝೊಮಾಟೊ(Zomato)ಫುಡ್ ಡೆಲಿವರಿ ಸಂಸ್ಥೆ ಇದೀಗ ತನ್ನ ಮೊದಲ ರೆಸ್ಟಿಂಗ್ ಪಾಯಿಂಟ್(Resting Point)ಅನ್ನು ಆರಂಭಿಸಿದೆ.
ಇದನ್ನೂ ಓದಿ:ಮಧ್ಯಪ್ರದೇಶದಲ್ಲೂ ಮಹಿಳೆಯರಿಗೆ ಹಣ ‘ಗ್ಯಾರಂಟಿ’; ಸ್ತ್ರೀಯರ ಮತ ಸೆಳೆಯಲು ನಗದು ತಂತ್ರ!
ಫುಡ್ ಡೆಲಿವರಿ ಮಾಡುವ ಹುಡುಗರಿಗೆ ವಿಶ್ರಾಂತಿ ಪಡೆಯಲು ಈ ಕೇಂದ್ರವನ್ನು ಪ್ರತ್ಯೇಕವಾಗಿ ಸ್ಥಾಪಿಸಿದ್ದು, ಕೇವಲ ಝೊಮಾಟೊ ಸಂಸ್ಥೆಯ ಹುಡುಗರು ಮಾತ್ರ ಈ ರೆಸ್ಟಿಂಗ್ ಪಾಯಿಂಟ್​ನಲ್ಲಿ ವಿಶ್ರಾಂತಿ ಪಡೆಯಬಹುದು ಎಂಬುದೇನಿಲ್ಲ! ಬೇರೆ ಸಂಸ್ಥೆಯ ಪುಡ್ ಡೆಲಿವರಿ ಹುಡುಗರು ಕೂಡ ಇಲ್ಲಿನ ಸೌಲಭ್ಯಗಳನ್ನು ಉಪಯೋಗಿಸಿಕೊಳ್ಳಬಹುದು ಎಂದು ಝೆಮಾಟೋ ಸಂಸ್ಥೆ ತಿಳಿಸಿದೆ.

ಈ ವಿಶ್ರಾಂತಿ ಕೇಂದ್ರ ಬೆಂಗಳೂರಿನಲ್ಲಿ(Bengaluru)ಸ್ಥಾಪನೆಯಾಗುವ ಮೂಲಕ ದಕ್ಷಿಣ ಭಾರತದ ಮೊದಲ ರೆಸ್ಟಿಂಗ್ ಪಾಯಿಂಟ್ ಎಂಬ ಖ್ಯಾತಿಗೆ ಒಳಪಟ್ಟಿದೆ. ರೆಸ್ಟಿಂಗ್ ಪಾಯಿಂಟ್​ನ ಉದ್ಘಾಟನೆ ಕಾರ್ಯಕ್ರಮದಲ್ಲಿ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ(Tejasvi Surya)ಭಾಗವಹಿಸಿದ್ದರು.
ಇದನ್ನೂ ಓದಿ:ದೇವಸ್ಥಾನದಲ್ಲಿ ನಮಾಜ್ ಮಾಡುತ್ತಿದ್ದ ವ್ಯಕ್ತಿ ಅರೆಸ್ಟ್​​; ಕಠಿಣ ಕ್ರಮಕ್ಕೆ ಬಿಜೆಪಿ ಆಗ್ರಹ
ಈ ಬಗ್ಗೆ ತಮ್ಮ ಟ್ವಿಟರ್(Twitter)ಖಾತೆಯಲ್ಲಿ ಬರೆದುಕೊಂಡಿರುವ ಸಂಸದ ತೇಜಸ್ವಿ ಸೂರ್ಯ, “ದಕ್ಷಿಣ ಭಾರತದ ಮೊದಲ ವಿಶ್ರಾಂತಿ ಕೇಂದ್ರವನ್ನು ಝೊಮಾಟೊ ಸಂಸ್ಥೆ ಬೆಂಗಳೂರಿನ ವೇಗಾ ಸಿಟಿ ಮಾಲ್​ನಲ್ಲಿ ಸ್ಥಾಪಿಸಿದೆ. ಈ ರೆಸ್ಟಿಂಗ್ ಪಾಯಿಂಟ್​ನಲ್ಲಿ ಪ್ರಥಮ ಚಿಕಿತ್ಸೆ, ಕುಡಿಯುವ ನೀರು, ಸ್ವಚ್ಛವಾದ ವಿಶ್ರಾಂತಿ ಕೊಠಡಿಗಳು ಲಭ್ಯವಿದೆ. ಡೆಲಿವರಿ ಹುಡುಗರು ಇಲ್ಲಿ ಬಂದು ವಿಶ್ರಾಂತಿ ಪಡೆಯಲು ಸೂಕ್ತವಾದ ಸ್ಥಳ” ಎಂದು ಟ್ವೀಟ್​ನಲ್ಲಿ ಹೇಳಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × five =
Remember me
