ನವದೆಹಲಿ:ಮಾರುಕಟ್ಟೆ ವಿಚಲಿತವಾಗಿರುವ ಕಾರಣ ಮಹತ್ವಾಕಾಂಕ್ಷೆಯ ಲೈಫ್ ಇನ್ಶೂರೆನ್ಸ್ ಕಾರ್ಪೆರೇಷನ್ (ಎಲ್​ಐಸಿ)ನ ಐಪಿಒ ಬಿಡುಗಡೆ ಮೇ 12ರ ತನಕ ಮುಂದೂಡಲು ಸರ್ಕಾರ ತೀರ್ವನಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಸೆಬಿಗೆ ಸಲ್ಲಿಸಬೇಕಾದ ಕಾಗದಪತ್ರಗಳನ್ನು ಸ್ವಲ್ಪ ತಡವಾಗಿ ಸಲ್ಲಿಸುವ ಮೂಲಕ ಈ ವಿಳಂಬ ಮಾಡುವ ಸಾಧ್ಯತೆ ಇದೆ. ರಷ್ಯಾ-ಯೂಕ್ರೇನ್ ಸಂಘರ್ಷ ಮತ್ತು ಜಾಗತಿಕ ಭೌಗೊಳಿಕ ರಾಜಕೀಯ ಬಿಕ್ಕಟ್ಟಿನಿಂದಾಗಿ ಷೇರುಪೇಟೆ ಬಹಳ ವಿಚಲಿತವಾಗಿ ವಹಿವಾಟು ನಡೆಸುತ್ತಿದೆ. ಇಂತಹ ಸನ್ನಿವೇಶದಲ್ಲಿ, ಹೂಡಿಕೆ ಹಿಂಪಡೆತದ ಮೂಲಕ ನಿರೀಕ್ಷಿತ ಪ್ರಮಾಣದಲ್ಲಿ ಹಣ ಸಂಗ್ರಹ ಮಾಡುವುದು ಸಾಧ್ಯವಾಗದು. ಎಲ್​ಐಸಿ ಐಪಿಒ ಮೂಲಕ ಸರ್ಕಾರವು ತನ್ನ ಪಾಲಿನ ಶೇಕಡ 5 ಷೇರುಗಳನ್ನು (31.6 ಕೋಟಿ ಷೇರುಗಳು) ಮಾರಾಟ ಮಾಡಿ 60,000 ಕೋಟಿ ರೂಪಾಯಿ ಸಂಗ್ರಹಿಸಲು ಮುಂದಾಗಿದೆ. ಸೆಬಿಗೆ ಫ.13ರಂದು ಸಲ್ಲಿಸಿದ ಡ್ರಾಫ್ಟ್ ರೆಡ್ ಹೆರ್ರಿಂಗ್ ಪ್ರಾಸ್ಪೆಕ್ಟಸ್ (ಡಿಆರ್​ಎಚ್ಪಿ)ಗೆ ಕಳೆದ ವಾರ ಅನುಮೋದನೆ ಸಿಕ್ಕಿದೆ. ಐಪಿಒ ಬಿಡುಗಡೆ ಮಾಡಬೇಕಾದರೆ, ಹೊಸದಾಗಿ ಇನ್ನೂ ಒಂದಿಷ್ಟು ಪ್ರಕ್ರಿಯೆಗಳು ಬಾಕಿ ಇದ್ದು, ಇದನ್ನು ಮುಂದಿನ ಹಣಕಾಸು ವರ್ಷದಲ್ಲಿ ನಡೆಸಲು ಸರ್ಕಾರ ಮುಂದಾಗಿದೆ.
ಭಾರತದಲ್ಲಿ ಗ್ರಾಹಕ ದರ ಸೂಚ್ಯಂಕ (ಸಿಪಿಐ) ಆಧಾರಿತ ಚಿಲ್ಲರೆ ಹಣದುಬ್ಬರ ಪ್ರಮಾಣ ಫೆಬ್ರವರಿಯಲ್ಲಿ ಶೇಕಡ 6.07 ಮತ್ತು ಸಗಟು ಮಾರಾಟ ದರ ಆಧಾರಿತ ಹಣದುಬ್ಬುರ ಪ್ರಮಾಣ ಫೆಬ್ರವರಿಯಲ್ಲಿ ಶೇಕಡ 13.11 ತಲುಪಿದೆ. ಇವು ಜನವರಿಯಲ್ಲಿ ಕ್ರಮವಾಗಿ ಶೇ. 6.01 ಮತ್ತು ಶೇ. 12.96 ಇದ್ದವು. ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ನಿಗದಿಪಡಿಸಿದ್ದ ಶೇಕಡ 6ರ ಮಿತಿಯನ್ನು ಚಿಲ್ಲರೆ ಹಣದುಬ್ಬರ ಎರಡನೇ ತಿಂಗಳು ಮೀರಿದೆ. ಕೇಂದ್ರ ಸರ್ಕಾರ 2026ರ ಮಾರ್ಚ್ ತನಕ ಹಣದುಬ್ಬರ ಪ್ರಮಾಣ ಶೇಕಡ 4ರ ಆಸುಪಾಸಿನಲ್ಲಿ ಶೇಕಡ 2ರ ಅಂಚಿನೊಂದಿಗೆ ನಿರ್ವಹಿಸುವಂತೆ ಆರ್​ಬಿಐಗೆ ಸೂಚಿಸಿತ್ತು. ಗ್ರಾಹಕ ಆಹಾರ ದರ ಸೂಚ್ಯಂಕ ಆಧಾರಿತ ಹಣದುಬ್ಬರ ಪ್ರಮಾಣ ಫೆಬ್ರವರಿಯಲ್ಲಿ ಶೇಕಡ 5.85 ದಾಖಲಾಗಿದೆ. ಜನವರಿಯಲ್ಲಿ ಇದು ಶೇಕಡ 5.43 ಇತ್ತು ಎಂದು ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಸಚಿವಾಲಯ ಸೋಮವಾರ ಬಿಡುಗಡೆ ಮಾಡಿದ ದತ್ತಾಂಶ ತಿಳಿಸಿದೆ.
ಖಾದ್ಯ ತೈಲ ಆಮದು ಶೇ. 23 ಹೆಚ್ಚಳ:ರಷ್ಯಾ- ಯೂಕ್ರೇನ್ ಸಂಘರ್ಷದ ಕಾರಣ ಅಡುಗೆ ಎಣ್ಣೆ ಬೆಲೆ ಏರಿಕೆಯ ನಡುವೆಯೂ ಫೆಬ್ರವರಿಯಲ್ಲಿ ಖಾದ್ಯ ತೈಲ ಆಮದು ಪ್ರಮಾಣ ಶೇ. 23 ಹೆಚ್ಚಳ ಕಂಡಿದೆ. 9,83,608 ಟನ್ ಅಡುಗೆ ಎಣ್ಣೆ ಹೊರದೇಶಗಳಿಂದ ಬಂದಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ ಆಮದಿನ ಪ್ರಮಾಣ 7,96,468 ಟನ್ ಇತ್ತು.
ಚಿಲ್ಲರೆ ವ್ಯಾಪಾರ ಶೇ. 10 ವೃದ್ಧಿ:ಕಳೆದ ವರ್ಷದ ಫೆಬ್ರವರಿಗೆ ಹೋಲಿಸಿದರೆ, ಈ ವರ್ಷ ದೇಶದ ಒಟ್ಟಾರೆ ಚಿಲ್ಲರೆ ವ್ಯಾಪಾರ ಶೇ. 10ರಷ್ಟು ವೃದ್ಧಿಸಿದೆ. 2021ರಲ್ಲಿ ಕೋವಿಡ್ ಎರಡನೇ ಅಲೆಯ ಕಾರಣ ವ್ಯಾಪಾರ ತಗ್ಗಿತ್ತು. ಆದರೆ, ಈ ಸಾರಿ ಮೂರನೇ ಅಲೆ ಕಾಣಿಸಿಕೊಂಡರೂ ಅದು ಫೆಬ್ರವರಿ ಮಾಹೆಯಲ್ಲಿ ತೀವ್ರವಾಗಿರದ ಕಾರಣ ವ್ಯಾಪಾರ ಚುರುಕಿನಿಂದ ನಡೆದಿದೆ ಎಂದು ಭಾರತೀಯ ಚಿಲ್ಲರೆ ಮಾರಾಟಗಾರರ ಅಸೋಸಿಯೇಷನ್ (ಆರ್​ಎಐ) ಹೇಳಿದೆ.
ರಫ್ತು ಶೇ. 25 ಏರಿಕೆ:ಫೆಬ್ರವರಿಯಲ್ಲಿ ದೇಶದ ರಫ್ತು ಪ್ರಮಾಣ ಶೇ. 25.41ರಷ್ಟು ಏರಿಕೆ ಆಗಿದ್ದು, 4.36 ಲಕ್ಷ ಕೋಟಿ ರೂ. (57.03 ಬಿಲಿಯನ್ ಡಾಲರ್)ಗೆ ಹೆಚ್ಚಳ ಕಂಡಿದೆ. 94,300 ಕೋಟಿ ರೂ. (12.32 ಬಿಲಿಯನ್ ಡಾಲರ್) ವಾಣಿಜ್ಯ ವಹಿವಾಟಿನ ಕೊರತೆಯೂ ಈ ತಿಂಗಳು ಎದುರಾಗಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ 3.48 ಲಕ್ಷ ಕೋಟಿ ರೂ. (45.48 ಬಿಲಿಯನ್ ಡಾಲರ್) ಪ್ರಮಾಣದ ರಫ್ತು ಆಗಿತ್ತು ಎಂದು ಸರ್ಕಾರ ತಿಳಿಸಿದೆ.
ಮುಂಬೈ:ಯೂಕ್ರೇನ್-ರಷ್ಯಾ ಸಂಘರ್ಷದ ಕಾರಣ ಕಳೆದವಾರ ಆರಂಭದಲ್ಲಿ ಭಾರಿ ಇಳಿಕೆ ದಾಖಲಿಸಿದ್ದ ಭಾರತದ ಷೇರುಪೇಟೆ ಸತತ ಐದು ವಹಿವಾಟಿನಲ್ಲಿ ಚೇತರಿಕೆ ಕಂಡಿದೆ. ಇದರಿಂದ ಹೂಡಿಕೆದಾರರ ಸಂಪತ್ತು 13.16 ಲಕ್ಷ ಕೋಟಿ ರೂಪಾಯಿ ವೃದ್ಧಿಸಿದೆ. ಸೆನ್ಸೆಕ್ಸ್​ನಲ್ಲಿ 935.72 ಅಂಶ (ಶೇ. 1.68) ಏರಿಕೆ ಆಗಿದ್ದು, 56,486.02ರಲ್ಲಿ ಸೋಮವಾರದ ವಹಿವಾಟು ಕೊನೆಗೊಂಡಿದೆ. ನಿಫ್ಟಿಯಲ್ಲಿ 240.85 ಪಾಯಿಂಟ್ (ಶೇ. 1.45) ಹೆಚ್ಚಳ ಆಗಿದ್ದು, 16,871.30ರಲ್ಲಿ ವಹಿವಾಟು ಮುಗಿದಿದೆ. ಇನ್ಪೋಸಿಸ್, ಎಸ್​ಬಿಐ, ಎಚ್​ಡಿಎಫ್​ಸಿ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಮಾರುತಿ ಸುಜುಕಿ ಇಂಡಿಯಾ, ಎಚ್​ಡಿಎಫ್​ಸಿ, ವಿಪ್ರೊಗಳು ಲಾಭ ದಾಖಲಿಸಿವೆ. ಇನ್ನೊಂದೆಡೆ ಹಿಂದೂಸ್ತಾನ್ ಯೂನಿಲಿವರ್, ಸನ್ ಫಾರ್ವಸುಟಿಕಲ್, ಡಾ.ರೆಡ್ಡೀಸ್ ಲ್ಯಾಬ್, ಟಾಟಾ ಸ್ಟೀಲ್ ನಷ್ಟ ಕಂಡಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರೆಲ್ ಬ್ರೆಂಟ್ ಕಚ್ಚಾ ತೈಲದ ದರ ಶೇ. 3ರಷ್ಟು ಇಳಿಕೆ ಆಗಿದ್ದು, 109.3 ಡಾಲರ್​ಗೆ ತಗ್ಗಿದೆ.
ಚಿನ್ನ-ಬೆಳ್ಳಿ ದರ ಇಳಿಕೆ:ದೆಹಲಿ ಚಿನಿವಾರ ಪೇಟೆಯಲ್ಲಿ ಚಿನ್ನದ ದರ 362 ರೂ. ಇಳಿಕೆ ಆಗಿದ್ದು, 10 ಗ್ರಾಂ ಅಪರಂಜಿ ಬಂಗಾರದ ಬೆಲೆ 52,443 ರೂ.ಕ್ಕೆ ತಗ್ಗಿದೆ. ಬೆಳ್ಳಿ ದರ 612 ರೂ. ಕಡಿಮೆ ಆಗಿದ್ದು, ಕೆ.ಜಿ. ಧಾರಣೆ 69,665 ರೂ.ಗೆ ಇಳಿಕೆ ಕಂಡಿದೆ.
ಹುಬ್ಬಳ್ಳಿಯಲ್ಲಿ ಅಪ್ಪು ಬೆಳಕು; ಪುನೀತ್ ಜನ್ಮದಿನಂದು ಬೃಹತ್ ನೇತ್ರದಾನ ವಾಗ್ದಾನ ಶಿಬಿರ

ನಾನ್ಯಾರನ್ನೂ ಪ್ರೀತಿಸಿಲ್ಲ, ನನ್ನ ಸಾವಿಗೆ ಪ್ರೀತಿ ಕಾರಣವಲ್ಲ ಎಂದು ಹೇಳಿ 23ನೇ ಮಹಡಿಯಿಂದ ಹಾರಿ ಸತ್ತ ವಿದ್ಯಾರ್ಥಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 3 =
Remember me
