ಪಟ್ನ :ಸಿನಿಮೀಯ ಮಾದರಿಯಲ್ಲಿ ಗನ್​ಗಳನ್ನು ಹಿಡಿದ ದರೋಡೆಕೋರರು ಬ್ಯಾಂಕಿಗೆ ಲಗ್ಗೆ ಇಟ್ಟು, 1.19 ಕೋಟಿ ರೂಪಾಯಿ ಹಣ ದೋಚಿರುವ ಪ್ರಕರಣ ಬಿಹಾರದಿಂದ ವರದಿಯಾಗಿದೆ. ಕೇಂದ್ರದ ಗೃಹ ಖಾತೆಯ ರಾಜ್ಯ ಸಚಿವ ನಿತ್ಯಾನಂದ ರೈ ಅವರ ನಿವಾಸದ ಬಳಿಯಲ್ಲೇ ಈ ಘಟನೆ ನಡೆದಿರುವುದು ವಿಪರ್ಯಾಸ.
ಬಿಹಾರದ ಹಾಜಿಪುರದಲ್ಲಿನ ಎಚ್​ಡಿಎಫ್​ಸಿ ಬ್ಯಾಂಕ್​​ನ ಜಾದುಹ ಶಾಖೆಯಲ್ಲಿ ಈ ದರೋಡೆ ನಡೆದಿದೆ. ಬೆಳಿಗ್ಗೆ ಶಾಖೆಯು ಸಾರ್ವಜನಿಕರ ಸೇವೆಗೆ ತೆರೆದ ಸ್ವಲ್ಪ ಸಮಯದಲ್ಲೇ 5 ಜನ ಬೈಕ್​ಗಳಲ್ಲಿ ಬಂದು, ಬ್ಯಾಂಕಿಗೆ ನುಗ್ಗಿದರು. ಸಿಬ್ಬಂದಿಯನ್ನು ಬೆದರಿಸಿ ಕ್ಯಾಶ್​ ರೂಮಿನಿಂದ ಹಣವನ್ನು ತರಿಸಿಕೊಂಡು ಸುಮಾರು 1.19 ಕೋಟಿ ರೂಪಾಯಿಗಳನ್ನು ಮೂಟೆಗಳಿಗೆ ತುಂಬಿಸಿಕೊಂಡು ಪಲಾಯನ ಮಾಡಿದರು ಎನ್ನಲಾಗಿದೆ.
ಇದನ್ನೂ ಓದಿ:5 ರೂಪಾಯಿ ನೋಟು ವಿನಿಮಯ ಮಾಡಿ 30 ಸಾವಿರ ರೂ. ಸಂಪಾದಿಸಿ! ಹೇಗೆ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ
ಹಣದ ಮೂಟೆಗಳನ್ನು ತಮ್ಮ ಭುಜದ ಮೇಲೆ ಎತ್ತಿಕೊಂಡು ಬ್ಯಾಂಕ್​ನಿಂದ ಹೊರಹೋಗುವ ಸಮಯದಲ್ಲಿ ಈ ಖದೀಮರ ಮುಖಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಈ ಐವರನ್ನು ಗುರುತಿಸುವುದಕ್ಕಾಗಿ ಸಿಸಿಟಿವಿ ಫೂಟೇಜನ್ನು ಪರಿಶೀಲಿಸಲಾಗುತ್ತಿದೆ. ಬಾರ್ಡರ್​ ಸೀಲ್ ಮಾಡಲಾಗಿದ್ದು, ಪತ್ತೆ ಕಾರ್ಯ ಆರಂಭವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್)
8 ಜಿಲ್ಲೆಗಳಲ್ಲಿ 65,000 ಕರೊನಾ ಪ್ರಕರಣ : ಜಿಲ್ಲಾಧಿಕಾರಿಗಳಿಗೆ ಸಿಎಂ ಕ್ಲ್ಯಾಸ್!

ನಟ ಸುಶಾಂತ್​ ಸಿಂಗ್ ಬಗೆಗಿನ ಚಲನಚಿತ್ರ ಬಿಡುಗಡೆಗೆ ತಡೆ ಇಲ್ಲ

ಒಂದು ಹಣ್ಣಿಗೆ 1,000 ರೂ. ಬೆಲೆ ಬಾಳುವ ನೂರ್​ಜಹಾನ್ ಮಾವಿನಹಣ್ಣು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 1 =
Remember me
