ನವದೆಹಲಿ:ಜಿಎಸ್​ಟಿ ಗುಪ್ತಚರ ನಿರ್ದೇಶನಾಲಯ (ಡಿಜಿಜಿಐ) ಪ್ರಸ್ತುತ ಹಣಕಾಸು ವರ್ಷದಲ್ಲಿ -ಠಿ; 1.36 ಲಕ್ಷ ಕೋಟಿ ಮೊತ್ತದ ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ವಂಚನೆ ಪ್ರಕರಣಗಳನ್ನು ಪತ್ತೆ ಮಾಡಿದೆ. ಇದರಲ್ಲಿ ಇನ್​ಪುಟ್ ತೆರಿಗೆ ಕ್ರೆಡಿಟ್​ನ ನಕಲಿ ಕ್ಲೈಮ್ಳು ಸೇರಿವೆ. ಈ ಪೈಕಿ -ಠಿ;14,108 ಕೋಟಿಗಳನ್ನು ಸ್ವಯಂಪ್ರೇರಿತವಾಗಿ ಸಂಗ್ರಹಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಕಳೆದ ಮೂರೂವರೆ ವರ್ಷಗಳಲ್ಲಿ ವಿಶೇಷ ಅಭಿಯಾನದ ಭಾಗವಾಗಿ ತನಿಖಾ ಸಂಸ್ಥೆಯು ಗಣನೀಯ ತೆರಿಗೆ ವಂಚನೆ ನಿದರ್ಶನಗಳನ್ನು ಕಂಡುಹಿಡಿದಿದೆ. 2023ರ ಜೂನ್​ನಿಂದ, ದೇಶಾದ್ಯಂತ ಕಾರ್ಯನಿರ್ವಹಿಸುತ್ತಿರುವ ಸಿಂಡಿಕೇಟ್​ಗಳ ಮಾಸ್ಟರ್​ವೆುೖಂಡ್​ಗಳನ್ನು ಗುರುತಿಸಲು ಮತ್ತು ಬಂಧಿಸಲು ವಿಶೇಷ ಒತ್ತು ನೀಡಿದೆ ಎಂದು ಸಚಿವಾಲಯ ತಿಳಿಸಿದೆ. ಸುಧಾರಿತ ತಾಂತ್ರಿಕ ಸಾಧನಗಳ ಸಹಾಯದಿಂದ ದತ್ತಾಂಶ ವಿಶ್ಲೇಷಣೆಯನ್ನು ಬಳಸಿಕೊಂಡು ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ. ಇದು ತೆರಿಗೆ ವಂಚಕರ ಬಂಧನಕ್ಕೆ ಕಾರಣವಾಗಿದೆ ಎಂದು ತಿಳಿಸಿದೆ.
ಈ ತೆರಿಗೆ ಸಿಂಡಿಕೇಟ್​ಗಳು ಸಂಭಾವ್ಯ ಸಂತ್ರಸ್ತರನ್ನು ಅವರ ’ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ’ (ಕೆವೈಸಿ) ದಾಖಲೆಗಳನ್ನು ಪಡೆಯಲು ಉದ್ಯೋಗ, ಕಮಿಷನ್, ಬ್ಯಾಂಕ್ ಸಾಲ ಇತ್ಯಾದಿಗಳ ಭರವಸೆಯೊಂದಿಗೆ ಆಕರ್ಷಿಸುತ್ತವೆ. ಇವುಗಳನ್ನು ನಂತರ ಅವರ ಅರಿವಿಗಿಲ್ಲದೆ ಮತ್ತು ಒಪ್ಪಿಗೆಯಿಲ್ಲದೆ ಶೆಲ್ ಘಟಕಗಳನ್ನು ರಚಿಸಲು ಬಳಸಲಾಗುತ್ತದೆ ಎಂದು ಸಚಿವಾಲಯ ಹೇಳಿದೆ.
ಕೆಲವು ಸಂದರ್ಭಗಳಲ್ಲಿ, ಇಂತಹ ಕೆವೈಸಿ ವಿವರಗಳನ್ನು ಸಂಬಂಧಿಸಿದ ವ್ಯಕ್ತಿಗೆ ಸಣ್ಣ ಮೊತ್ತವನ್ನು ಪಾವತಿಸುವ ಮೂಲಕ ಅವರ ಒಪ್ಪಿಗೆಯೊಂದಿಗೆ ಬಳಸಲಾಗುತ್ತದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ -ಠಿ; 14,000 ಕೋಟಿ ಒಳಗೊಂಡ ಒಟ್ಟು 1,040 ನಕಲಿ ಇನ್​ಪುಟ್ ತೆರಿಗೆ ಕ್ರೆಡಿಟ್ ಸಂಬಂಧಿತ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದ್ದು, 91 ವಂಚಕರನ್ನು ಬಂಧಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಮುಂಬೈ:ಜಾಗತಿಕ ಮಾರುಕಟ್ಟೆಯ ದುರ್ಬಲ ಪ್ರವೃತ್ತಿ ಹಾಗೂ ವಿದೇಶಿ ಹಣದ ಹೊರಹರಿವಿನ ಕಾರಣದಿಂದ ಭಾರತೀಯ ಷೇರು ಮಾರುಕಟ್ಟೆಗಳಲ್ಲಿ ಸತತ ಎರಡನೇ ದಿನ ಕುಸಿತ ಕಂಡುಬಂದಿತು. ಬಿಎಸ್​ಇ ಸೂಚ್ಯಂಕ 247.78 ಅಂಕಗಳಷ್ಟು ಕುಸಿದು 65,629.24 ಕ್ಕೆ ತಲುಪಿತು. ನಿಫ್ಟಿ ಸೂಚ್ಯಂಕವು 46.40 ಅಂಕ ಇಳಿಕೆ ಕಂಡು 19,624.70 ಕ್ಕೆ ಸ್ಥಿರಗೊಂಡಿತು.
ವಿಪ್ರೊ, ಟೆಕ್ ಮಹೀಂದ್ರಾ, ಯುಪಿಎಲ್, ಭಾರ್ತೀ ಏರ್​ಟೆಲ್, ಹಿಂಡಾಲ್ಕೋ ಇಂಡಸ್ಟ್ರೀಸ್ ಷೇರುಗಳ ಬೆಲೆ ಕುಸಿತ ಕಂಡರೆ, ಬಜಾಜ್ ಆಟೋ, ಎಲ್​ಟಿಮೈಂಡ್​ಟ್ರೀ, ನೆಸ್ಲೆ ಇಂಡಿಯಾ, ಹೀರೊ ಮೊಟೊಕಾರ್ಪ್, ಅಲ್ಟ್ರಾಟೆಕ್ ಸಿಮೆಂಟ್ ಷೇರುಗಳು ಏರಿಕೆ ದಾಖಲಿಸಿದವು.
ಪೆಟ್ರೋಲ್ ಬಂಕ್​ಗಳಲ್ಲಿನ ಮೋಸ ತಪ್ಪಿಸಲು ಸರ್ಕಾರಕ್ಕೆ ಹೊಸ ಬೇಡಿಕೆ: ವಿಡಿಯೋ ವೈರಲ್!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − nine =
Remember me
