ನವದೆಹಲಿ:ಅಕ್ಟೋಬರ್​ನಲ್ಲಿ 1,72,003 ಕೋಟಿ ರೂಪಾಯಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಸಂಗ್ರಹವಾಗಿದೆ. ಇದು ಈ ವರ್ಷ ಏಪ್ರಿಲ್​ನಲ್ಲಿ ಸಂಗ್ರಹವಾದ ಜಿಎಸ್​ಟಿ ನಂತರದ ಎರಡನೇ ಅತಿ ಹೆಚ್ಚು ಸಂಗ್ರಹದ ದಾಖಲೆಯಾಗಿದೆ. ಕಳೆದ ವರ್ಷ ಇದೇ ತಿಂಗಳಿಗಿಂತ ಶೇಕಡ 13ರಷ್ಟು ಏರಿಕೆಯಾಗಿದೆ. 2023-24ರ ಹಣಕಾಸು ವರ್ಷದಲ್ಲಿ ಸರಾಸರಿ ಒಟ್ಟು ಮಾಸಿಕ ಜಿಎಸ್​ಟಿ ಸಂಗ್ರಹ 1.66 ಲಕ್ಷ ಕೋಟಿ ರೂಪಾಯಿ ಆಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 11 ಏರಿಕೆಯಾಗಿದೆ.
ಅಕ್ಟೋಬರ್​ನಲ್ಲಿ ಸಂಗ್ರಹವಾದ 1,72,003 ಕೋಟಿ ರೂಪಾಯಿಯಲ್ಲಿ 30,062 ಕೋಟಿ ರೂಪಾಯಿ ಕೇಂದ್ರೀಯ ಜಿಎಸ್​ಟಿ (ಸಿಜಿಎಸ್​ಟಿ) ಆಗಿದೆ. 38,171 ಕೋಟಿ ರೂಪಾಯಿ ರಾಜ್ಯ ಜಿಎಸ್​ಟಿ ಆಗಿದೆ. ಸರಕುಗಳ ಆಮದು ಮೇಲಿನ 42,127 ಕೋಟಿ ರೂ. ಸಹಿತ 91,315 ಕೋಟಿ ರೂಪಾಯಿ ಸಮಗ್ರ (ಐ) ಜಿಎಸ್​ಟಿ ಸಂಗ್ರಹವಾಗಿದೆ. ಸರಕು ಗಳ ಆಮದು ಮೇಲಿನ 1,294 ಕೋಟಿ ರೂ. ಸಹಿತ 12,46 ಕೋಟಿ ರೂಪಾಯಿ ಸೆಸ್ ಆಗಿದೆ ಎಂದು ಸರ್ಕಾರ ತಿಳಿಸಿದೆ. ಸರ್ಕಾರ ಐಜಿಎಸ್​ಟಿಯಿಂದ 42,873 ಕೋಟಿ ರೂಪಾಯಿಯನ್ನು ಸಿಜಿಎಸ್​ಟಿಗೆ ಹಾಗೂ 36,614 ಕೋಟಿಯನ್ನು ಎಸ್​ಜಿಎಸ್​ಟಿಗೆ ಇತ್ಯರ್ಥಪಡಿಸಿದೆ. ನಿಯಮಿತ ಇತ್ಯರ್ಥದ ನಂತರ 2023ರ ಅಕ್ಟೋಬರ್​ನಲ್ಲಿ ಕೇಂದ್ರ ಮತ್ತು ರಾಜ್ಯಗಳ ನಿವ್ವಳ ಆದಾಯ ಸಿಜಿಎಸ್​ಟಿಗೆ 72,934 ಕೋಟಿ ರೂ. ಹಾಗೂ ಎಸ್​ಜಿಎಸ್​ಟಿಗೆ 74,785 ಕೋಟಿ ರೂ. ಆಗಿದೆ. ಅಕ್ಟೋಬರ್ ತಿಂಗಳ ನಿವ್ವಳ ಆದಾಯವು ಕಳೆದ ವರ್ಷದ ಇದೇ ಮಾಸಕ್ಕಿಂತ ಶೇ. 13ರಷ್ಟು ಹೆಚ್ಚಾಗಿದೆ. ಈ ತಿಂಗಳು ಸೇವೆಗಳ ಆಮದು ಸಹಿತ ದೇಶೀಯ ವಹಿವಾಟುಗಳು ಕೂಡ ಕಳೆದ ವರ್ಷ ಇದೇ ತಿಂಗಳ ವಹಿವಾಟಿಗಿಂತ ಶೇ. 13ರಷ್ಟು ಹೆಚ್ಚಾಗಿದೆ.
ಕರ್ನಾಟಕದಲ್ಲಿ ಶೇ. 16 ಬೆಳವಣಿಗೆ:2022 -23ರಲ್ಲಿ ಕರ್ನಾಟಕದ ಎಸ್​ಜಿಎಸ್​ಟಿ 20,165 ಕೋಟಿ ಇದ್ದದ್ದು 2023-24ರಲ್ಲಿ 23,400 ಕೋಟಿ ರೂಪಾಯಿಗೆ ಏರಿದೆ. ಅಂದರೆ ಶೇಕಡ 16 ಬೆಳವಣಿಗೆ ದಾಖಲಿಸಿದೆ.
ಮುಂಬೈ:ನಿರಂತರ ವಿದೇಶಿ ನಿಧಿಯ ಹೊರಹರಿವು ಮತ್ತು ಜಾಗತಿಕ ವಿದ್ಯಮಾನ ಹಿನ್ನೆಲೆಯಲ್ಲಿ ಭಾರತದ ಷೇರು ಸೂಚ್ಯಂಕ ಸೆನ್ಸೆಕ್ಸ್ ಮತ್ತು ನಿಫ್ಟಿ ಸತತ ಎರಡನೇ ದಿನವಾದ ಬುಧವಾರವೂ ಕುಸಿತ ಕಂಡಿವೆ. ಅಮೆರಿಕದ ಫೆಡರಲ್ ರಿಸರ್ವ್​ನ ಬಡ್ಡಿದರ ನಿರ್ಧಾರದ ಮೇಲೆ ಈಗ ಹೂಡಿಕೆದಾರರು ಗಮನ ಕೇಂದ್ರೀಕರಿಸಿದ್ದಾರೆ ಎಂದು ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ. ಸೆನ್ಸೆಕ್ಸ್ 283.60 ಪಾಯಿಂಟ್ ಕುಸಿದು 63,591.33ಕ್ಕೆ ಸ್ಥಿರವಾಯಿತು. ದಿನದ ಅವಧಿಯಲ್ಲಿ ಇದು 324.47 ಪಾಯಿಂಟ್ ಕುಸಿದು 63,550.46ಕ್ಕೆ ತಲುಪಿದೆ. ನಿಫ್ಟಿ 90.45 ಅಂಕ ಇಳಿಕೆ ಕಂಡು 18,989.15ಕ್ಕೆ ತಲುಪಿದೆ. ಏಷ್ಯನ್ ಪೇಂಟ್ಸ್, ಟಾಟಾ ಸ್ಟೀಲ್, ಎಚ್​ಸಿಎಲ್ ಟೆಕ್ನಾಲಜೀಸ್, ನೆಸ್ಲೆ, ಮಾರುತಿ, ಎನ್​ಟಿಪಿಸಿ ಮತ್ತು ಲಾರ್ಸನ್ ಆಂಡ್ ಟೂಬ್ರೋ ಷೇರುಗಳು ಇಳಿಕೆ ಕಂಡವು. ಜಾಗತಿಕ ತೈಲ ಮಾನದಂಡ ಬ್ರೆಂಟ್ ಕಚ್ಚಾ ತೈಲ ಶೇ. 1.31 ಏರಿಕೆಯಾಗಿದ್ದು, ಪ್ರತಿ ಬ್ಯಾರೆಲ್​ಗೆ 86.13 ಡಾಲರ್​ಗೆ ತಲುಪಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್​ಐಐ) ಬುಧವಾರ 1,816.91 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.
ಮುಂಬೈ:ಚಲಾವಣೆಯಲ್ಲಿದ್ದ 2,000 ರೂಪಾಯಿ ನೋಟುಗಳ ಪೈಕಿ ಶೇ. 97ರಷ್ಟು ವಾಪಸ್ ಬಂದಿವೆ. ಸುಮಾರು 10,000 ಕೋಟಿ ರೂಪಾಯಿ ಮೌಲ್ಯದ ನೋಟುಗಳು ಇನ್ನೂ ಸಾರ್ವಜನಿಕರ ಬಳಿ ಇವೆ ಎಂದು ರಿಸರ್ವ್ ಬ್ಯಾಂಕ್ ಬುಧವಾರ ಹೇಳಿದೆ. ಕಳೆದ ಮೇ 19ರಂದು 2000 ರೂಪಾಯಿ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವುದಾಗಿ ಆರ್​ಬಿಐ ಘೊಷಿಸಿತ್ತು. ಈ ವೇಳೆ 3.56 ಲಕ್ಷ ಕೋಟಿ ರೂ. ಮೊತ್ತದ 2000 ರೂಪಾಯಿ ನೋಟುಗಳು ದೇಶದಲ್ಲಿ ಚಲಾವಣೆಯಲ್ಲಿದ್ದವು. ಈಗಲೂ ಕೂಡ ಆರ್​ಬಿಐನ ಆಯ್ದ 19 ಕಚೇರಿಗಳಲ್ಲಿ ಸಾರ್ವಜನಿಕರು 2,000 ರೂ. ನೋಟುಗಳನ್ನು ಬದಲಾವಣೆ ಮಾಡಿಕೊಳ್ಳಬಹುದು. ಆಯ್ದ ಅಂಚೆ ಕಚೇರಿಗಳ ಮೂಲಕವೂ ಈ ಸೌಲಭ್ಯ ಪಡೆಯಬಹುದು ಎಂದು ಆರ್​ಬಿಐ ಹೇಳಿದೆ.
ಚಿನ್ನ 350 ರೂ. ಇಳಿಕೆ:ದುರ್ಬಲ ಜಾಗತಿಕ ಸೂಚನೆಗಳ ನಡುವೆ ಬುಧವಾರ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 350 ರೂ.ಗೆ ಕುಸಿದು 61,700 ರೂ.ಗೆ ತಲುಪಿದೆ. ಬೆಳ್ಳಿ ಪ್ರತಿ ಕಿಲೋಗ್ರಾಂಗೆ 1,200 ರೂ. ಕುಸಿದು 74,300 ರೂ.ಗೆ ಸ್ಥಿರವಾಗಿದೆ.
ಮುಂಬೈ: ಭಾರತದ ರೂಪಾಯಿ ಮೌಲ್ಯ ಅಮೆರಿಕದ ಡಾಲರ್ ಎದುರು ಸಾರ್ವಕಾಲಿಕ ಕನಿಷ್ಠ ಮಟ್ಟವಾದ 83.33ಕ್ಕೆ ಕುಸಿದಿದೆ. ಬುಧವಾರದ ವಹಿವಾಟಿನಲ್ಲಿ 9 ಪೈಸೆ ಇಳಿಕೆ ಕಂಡುಬಂದಿದೆ. ದೇಶೀಯ ಷೇರುಪೇಟೆಯಲ್ಲಿನ ಇಳಿಕೆ, ಮಧ್ಯ ಪ್ರಾಚ್ಯದಲ್ಲಿನ ರಾಜಕೀಯ ಅನಿಶ್ಚಿತತೆ, ಕಚ್ಚಾ ತೈಲ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಇಳಿಕೆ ಕಂಡುಬರುತ್ತಿದೆ. ಬುಧವಾರ ಬೆಳಗ್ಗೆ ರೂಪಾಯಿ 83.26ನಲ್ಲಿ ಪ್ರಾರಂಭವಾಯಿತು. ವಹಿವಾಟಿನ ಅವಧಿಯಲ್ಲಿ ಇದು 83.35ರ ವರೆಗೂ ಇಳಿಕೆ ಕಂಡಿತ್ತು. ಅಂತಿಮವಾಗಿ ಜೀವಮಾ ನದ ಕನಿಷ್ಠ ಮಟ್ಟವಾದ 83.33ನಲ್ಲಿ ಕೊನೆಗೊಂಡಿತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಡಾಲರ್ ಸೂಚ್ಯಂಕ ಶೇ. 0.20 ಹೆಚ್ಚಾಗಿ 106.87ನಲ್ಲಿ ವಹಿವಾಟು ನಡೆಸುತ್ತಿದೆ.
ಬಾಲಕನ ಹುಟ್ಟುಹಬ್ಬದ ಮುನ್ನಾದಿನವೇ ಸಂಸಾರ ಸರ್ವನಾಶ; ಸಮಾಧಿ ಮೇಲೆ ಬರ್ತ್​ಡೇ ಗಿಫ್ಟ್​​ಗಳನ್ನಿಟ್ಟ ಅಜ್ಜ-ಅಜ್ಜಿ!

ಈ ಸಿಮ್ ದೇಶದಲ್ಲೇ ಮೊದಲು, ಏಕೆಂದರೆ ಇದು ಇ-ಸಿಮ್!; ಇದಿದ್ರೆ ವಿದೇಶ ಪ್ರಯಾಣದಲ್ಲಿ ರೋಮಿಂಗ್ ಸಮಸ್ಯೆಯೇ ಇಲ್ಲ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 3 =
Remember me
