ಇಂಫಾಲ್​:ಗಲಭೆ ಪೀಡಿತ ಮಣಿಪುರದಲ್ಲಿ ಶಂಕಿತ ಕೂಕಿ ಬಂಡುಕೋರರೊಂದಿಗಿನ ಗುಂಡಿನ ಚಕಮಕಿಯಲ್ಲಿ ಗಡಿ ಭದ್ರತಾ ಪಡೆ(BSF)ಯ ಯೋಧರೊಬ್ಬರು ಹುತಾತ್ಮರಾಗಿದ್ದು, ಅಸ್ಸಾಂ ರೈಫಲ್​ನ ಇಬ್ಬರು ಸೈನಿಕರು ಗಂಭೀರವಾಗಿ ಗಾಯಗೊಂಡಿದ್ಧಾರೆ.
ಮೃತ ಸೈನಿಕನನ್ನು ರಂಜಿತ್ ಯಾದವ್​ ಎಂದು ಗುರುತಿಸಲಾಗಿದೆ. ಕಾಕ್​ಜಿಂಗ್​ ಜಿಲ್ಲೆಯ ಸುಗನು ಪ್ರದೇಶದಲ್ಲಿರುವ ಸೆರೌ ಶಾಲೆಯಲ್ಲಿ ಬಿಎಸ್​ಎಫ್​ ಯೋಧರು ಹಾಗೂ ಶಂಕಿತ ಬಂಡುಕೋರರ ನಡುವೆ ಗುಂಡಿನ ಕಾಳಗ ನಡೆದಿದೆ.
Extensive area domination operations by Assam Rifles, BSF & Police undetaken in areas of Sugnu/Serou in#Manipur. Intermittent firing between Security Forces & group of insurgents took place throughout night of 05/06 June. Security Forces effectively retaliated to the fire(1/2)pic.twitter.com/TQvpzlmLwb— SpearCorps.IndianArmy (@Spearcorps)June 6, 2023

Extensive area domination operations by Assam Rifles, BSF & Police undetaken in areas of Sugnu/Serou in#Manipur. Intermittent firing between Security Forces & group of insurgents took place throughout night of 05/06 June. Security Forces effectively retaliated to the fire(1/2)pic.twitter.com/TQvpzlmLwb
ಇದನ್ನೂ ಓದಿ:ಖಾಸಗಿ ಶಾಲೆಯಲ್ಲಿ ತ್ರಿವರ್ಣ ಧ್ವಜಕ್ಕೆ ಅವಮಾನ; ವ್ಯಾಪಕ ಖಂಡನೆ
ಸೆರೌ ಫ್ರೌಢಶಾಲೆಗೆ ಬಿಎಸ್​ಎಫ್​ ಯೋಧರನ್ನು ನಿಯೋಜಿಸಲಾಗಿತ್ತು. ಜೂನ್​ 6ರಂದು ನಸುಕಿನ 4:15ರ ಸುಮಾರಿಗೆ ಬಂಡುಕೋರರು ಏಕಾಏಕಿ ಗುಂಡಿನ ದಾಳಿ ನಡೆಸಿದ್ಧಾರೆ. ಗುಂಡಿನ ಚಕಮಕಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಯೋಧ ರಂಜಿತ್​ ಯಾದವ್​ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗಮಧ್ಯೆ ಮೃತಪಟ್ಟಿದ್ದರು ಎಂದು ಅಧಿಕಾರಿ ಒಬ್ಬರು ತಿಳಿಸಿದ್ಧಾರೆ.
ಗಂಭೀರವಾಗಿ ಗಾಯಗೊಂಡಿರುವ ಅಸ್ಸಾಂ ರೈಫಲ್​ನ ಇಬ್ಬರು ಯೋಧರನ್ನು ಏರ್​ ಆ್ಯಂಬುಲೆನ್ಸ್ ಮೂಲಕ ಹೆಚ್ಚಿನ ಚಿಕಿತ್ಸೆಗಾಗಿ ಮಂತ್ರಿಪುಖ್ರಿಗೆ ಕಳುಹಿಸಿಕೊಡಲಾಗಿದೆ ಎಂದು ಬಿಎಸ್​ಎಫ್​ನ ಹಿರಿಯ ಅಧಿಕಾರಿ ಒಬ್ಬರು ತಿಳಿಸಿದ್ಧಾರೆ.

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:1 × five =
Remember me
