ನವದೆಹಲಿ:ದೆಹಲಿ ಗಲಭೆ ವೇಳೆ ಮೃತಪಟ್ಟ ಬೇಹುಗಾರಿಕೆ ದಳದ ಸಿಬ್ಬಂದಿ ಅಂಕಿತ್ ಶರ್ಮಾ ಕುಟುಂಬಕ್ಕೆ  1 ಕೋಟಿ ರೂ. ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸೋಮವಾರ ಪ್ರಕಟಿಸಿದ್ದಾರೆ.
ಅಂಕಿತ್ ಶವ ಕಳೆದ ವಾರ ಚರಂಡಿಯೊಂದರಲ್ಲಿ ಪತ್ತೆಯಾಗಿತ್ತು. ಗಲಭೆ ವೇಳೆ ಮೃತಪಟ್ಟ ಹೆಡ್​ಕಾನ್​ಸ್ಟೆಬಲ್ ಒಬ್ಬರ ಕುಟುಂಬಕ್ಕೂ ಕೇಜ್ರಿವಾಲ್ 1 ಕೋಟಿ ರೂ. ಪರಿಹಾರವನ್ನು ಘೋಷಿಸಿದ್ದರು. ಈ ಮಧ್ಯೆ, 1,880 ದೂರವಾಣಿ ಕರೆಗಳನ್ನು ದೆಹಲಿ ಪೊಲೀಸರು ಸ್ವೀಕರಿಸಿದ್ದಾರೆ ಮತ್ತು ವದಂತಿ ಹಬ್ಬಿಸುತ್ತಿದ್ದ ಆರೋಪದ ಮೇಲೆ 40 ಜನರನ್ನು ಸೋಮವಾರ ಬಂಧಿಸಿದ್ದಾರೆ.
ಹೈಕೋರ್ಟ್ ಸೂಚನೆ:ಈಶಾನ್ಯ ದೆಹಲಿಯ ಗಲಭೆಗ್ರಸ್ತ ಪ್ರದೇಶಗಳ ಸಂತ್ರಸ್ತ ಜನರ ಚಿಕಿತ್ಸೆ ಮತ್ತು ಪುನರ್​ವಸತಿಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ವರದಿ ಸಲ್ಲಿಸುವಂತೆ ದೆಹಲಿ ಹೈಕೋರ್ಟ್ ಪೊಲೀಸರಿಗೆ ಸೋಮವಾರ ಸೂಚಿಸಿದೆ.
ದೆಹಲಿ ಗಲಭೆ ಸರ್ಕಾರಿ ಪ್ರಾಯೋಜಿತ ನರಮೇಧ. ದೇಶದ್ರೋಹಿಗಳಿಗೆ ಗುಂಡಿಟ್ಟು ಸಾಯಿಸಿ ಎಂಬಂಥ ಘೋಷಣೆಗಳನ್ನು ಸಹಿಸುವುದಿಲ್ಲ. ಇಂಥ ಘೊಷಣೆ ಕೂಗಿದ ಮೂವರನ್ನು ಈಗಾಗಲೇ ನಮ್ಮ ರಾಜ್ಯದ ಪೊಲೀಸರು ಬಂಧಿಸಿದ್ದಾರೆ.
|ಮಮತಾ ಬ್ಯಾನರ್ಜಿಪಶ್ಚಿಮ ಬಂಗಾಳ ಮುಖ್ಯಮಂತ್ರಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − three =
Remember me
