ಪಟನಾ:ನೇಪಾಳಿ ಪೊಲೀಸರ ಗುಂಡಿನ ದಾಳಿಗೆ ಭಾರತೀಯ ನಾಗರಿಕನೋರ್ವ ಗಂಭೀರ ಗಾಯಗೊಂಡಿದ್ದಾರೆ.ಬಿಹಾರದ ಕಿಶಂಗಂಜ್​ನಲ್ಲಿರುವ ಭಾರತ-ಚೀನಾ ಗಡಿ ಪ್ರದೇಶದಲ್ಲಿ ಶನಿವಾರ ಸಂಜೆ ನೇಪಾಳಿ ಪೊಲೀಸರು ಒಟ್ಟು ಮೂವರು ಭಾರತೀಯ ನಾಗರಿಕರತ್ತ ಗುಂಡು ಹಾರಿಸಿದ್ದಾರೆ. ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಅವರ ಪರಿಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಗಾಯಗೊಂಡ ವ್ಯಕ್ತಿಯನ್ನು ಜಿತೇಂದ್ರ ಕುಮಾರ್​ (25)ಎಂದು ಗುರುತಿಸಲಾಗಿದೆ. ಜಿತೇಂದ್ರ ಕುಮಾರ್​ ಸೇರಿ ಒಟ್ಟು ಮೂವರು ಶನಿವಾರ ಸಂಜೆ 7.40ರ ಹೊತ್ತಿಗೆ ತಮ್ಮ ಜಾನುವಾರುಗಳನ್ನು ಹುಡುಕುತ್ತ ನೇಪಾಳ ಗಡಿಯಲ್ಲಿರುವ ತೊಲಾ ಮಫಿ ಗ್ರಾಮಕ್ಕೆ ಹೋಗಿದ್ದರು.ಇದನ್ನೂ ಓದಿ:ಗೋವಾದ ಖಾಸಗಿ ಆಸ್ಪತ್ರೆಯಲ್ಲಿ ನಾಳೆಯಿಂದ ‘ಕೊವಾಕ್ಸಿನ್’ ಲಸಿಕೆ​ ಮಾನವರ ಮೇಲಿನ ಪ್ರಯೋಗ ಪ್ರಾರಂಭ
ಗ್ರಾಮದ ಹೊರವಲಯದಲ್ಲಿರುವ ಗದ್ದೆಯಲ್ಲಿ ಓಡಾಡುತ್ತ ಜಾನುವಾರುಗಳನ್ನು ಹುಡುಕುತ್ತಿರುವಾಗ, ಗಡಿ ಕಾಯುತ್ತಿದ್ದ ಪೊಲೀಸರು ಅವರೆಡೆಗೆ ಗುಂಡು ಹಾರಿಸಿದ್ದಾರೆ. ಮೂವರಲ್ಲಿ ಜಿತೇಂದ್ರ ಕುಮಾರ್​ ತೀವ್ರವಾಗಿ ಗಾಯಗೊಂಡಿದ್ದಾರೆ. ನಂತರ ಗಡಿ ಪ್ರದೇಶದಲ್ಲಿದ್ದ ಭಾರತೀಯ ಪೊಲೀಸ್​ ಅಧಿಕಾರಿಗಳಿಗೂ ವಿಷಯ ತಿಳಿಸಲಾಗಿದೆ.
ಕಳೆದ ತಿಂಗಳು ಕೂಡ ಭಾರತ-ನೇಪಾಳ ಗಡಿಯಲ್ಲಿ ಇಂಥದ್ದೇ ಒಂದು ಘಟನೆ ನಡೆದಿತ್ತು. ನೇಪಾಳಿ ಪೊಲೀಸರ ಗುಂಡಿಗೆ ಭಾರತೀಯ ನಾಗರಿಕನೋರ್ವ ಬಲಿಯಾಗಿದ್ದ. (ಏಜೆನ್ಸೀಸ್​)
ಕೊವಿಡ್​-19 ರೋಗಿಯ ಮನೆಗೆ ನುಗ್ಗಿ ಮಟನ್​ ತಯಾರಿಸಿ ಊಟ ಮಾಡಿ…ಹಣ ಕದ್ದ ವಿಚಿತ್ರ ಕಳ್ಳರು…!

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:18 − 1 =
Remember me
