ನವದೆಹಲಿ:ಭಾರತೀಯ ಅರಣ್ಯಾಧಿಕಾರಿ (ಐಎಫ್​ಎಸ್​) ಪರ್ವೀನ್​ ಕಾಸ್ವಾನ್​ ಅವರು 80ರ ದಶಕದಲ್ಲಿ ತಮ್ಮ ತಾತ ಭಾರತ ಸರ್ಕಾರಕ್ಕೆ ಗೋಧಿ ಬೆಳೆ ಮಾರಾಟ ಮಾಡಿದ್ದಕ್ಕೆ ಸಂಬಂಧಿಸಿದ ಹಳೆಯ ರಶೀದಿಯನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದು ಎಲ್ಲರ ಗಮನ ಸೆಳೆದಿದೆ.
80ರ ದಶಕದಲ್ಲಿ ಒಂದು ಕೆಜಿ ಗೋಧಿಗೆ ಕೇವಲ 1.6 ರೂಪಾಯಿ ಇದೆ. 1987ರಲ್ಲಿ ಗೋಧಿ ಮಾರಾಟ ಮಾಡಿರುವ ರಶೀದಿಯನ್ನು ಪರ್ವೀನ್​ ಕಾಸ್ವಾನ್ ಟ್ವಿಟರ್​ನಲ್ಲಿ​ ಶೇರ್​ ಮಾಡಿಕೊಂಡಿದ್ದು, ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ನೆಟ್ಟಿಗರು ತಮ್ಮದೇ ರೀತಿಯಲ್ಲಿ ಬಗೆ ಬಗೆಯ ಕಾಮೆಂಟ್​ಗಳು ಹರಿಬಿಡುತ್ತಿದ್ದಾರೆ.
Time when wheat used to be at 1.6 rupees per kg. The wheat crop my grandfather sold in 1987 to Food Corporation of India.pic.twitter.com/kArySiSTj4
— Parveen Kaswan, IFS (@ParveenKaswan)January 2, 2023

ತಮ್ಮ ಹಿರಿಯರು ಎಲ್ಲ ದಾಖಲೆಗಳನ್ನು ಸುರಕ್ಷಿತವಾಗಿ ಶೇಖರಿಸಿಡುವ ಅಭ್ಯಾಸ ಹೊಂದಿದ್ದರು ಎಂಬುದನ್ನು ಪ್ರಸ್ತಾಪಿಸಿರುವ ಪರ್ವೀನ್​ ಕಾಸ್ವಾನ್​, ನಮ್ಮ ಅಜ್ಜನಿಗೆ ಎಲ್ಲ ದಾಖಲೆಗಳನ್ನು ಹಾಗೆಯೇ ಇಡುವ ಅಭ್ಯಾಸವಿತ್ತು. ಈ ದಾಖಲೆಯನ್ನು ಜೆ ಫಾರಂ ಎಂದು ಕರೆಯಲಾಗುತ್ತದೆ. ಅವರ ಸಂಗ್ರಹಣೆಯಲ್ಲಿ ಕಳೆದ 40 ವರ್ಷಗಳಲ್ಲಿ ಮಾರಾಟವಾದ ಬೆಳೆಗಳ ಎಲ್ಲಾ ದಾಖಲೆಗಳಿವೆ. ಮನೆಯಲ್ಲಿಯೇ ಅದರ ಅಧ್ಯಯನ ಮಾಡಬಹುದು ಎಂದು ಹೇಳಿದರು.
ಇದಕ್ಕೂ ಮುನ್ನ ಜಾರ್ಖಂಡ್‌ನಲ್ಲಿ 80ರ ದಶಕದಲ್ಲಿ 20,000 ರೂಪಾಯಿಗೆ ಖರೀದಿಸಲಾದ ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಸಿಸಿಗೆ ಸಂಬಂಧಿಸಿದ ಹಳೆಯ ಬಿಲ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿ ಬೈಕ್ ಸವಾರರನ್ನು ಬೆಚ್ಚಿ ಬೀಳಿಸುವಂತೆ ಮಾಡಿತ್ತು. ಇತ್ತೀಚಿನ ದಿನಗಳಲ್ಲಿ ಎರಡ ಲಕ್ಷಕ್ಕೂ ಅಧಿಕ ಬೆಲೆ ಬಾಳುವ ರಾಯಲ್​ ಎನ್​ಫೀಲ್ಡ್​ 1986 ರಲ್ಲಿ 18,700 ರೂಪಾಯಿಗೆ ಖರೀದಿಸಲಾಗಿತ್ತು ಎಂಬುದನ್ನು ತಿಳಿದರೆ ಹುಬ್ಬೇರುವುದರಲ್ಲಿ ಸಂದೇಹವೇ ಇಲ್ಲ.(ಏಜೆನ್ಸೀಸ್​)
ನಟಿ ಗಾಯತ್ರಿ ರಘುರಾಮ್​ ಆರೋಪಗಳ ಬಗ್ಗೆ ಪ್ರಶ್ನಿಸಿದ್ದಕ್ಕೆ ತಾಳ್ಮೆ ಕಳೆದುಕೊಂಡ ಅಣ್ಣಾಮಲೈ!

ಕಾಂಗ್ರೆಸ್​ ಸಭೆಯಲ್ಲಿ ಗಲಾಟೆ ಪ್ರಕರಣ: ಬ್ಲಾಕ್ ಕಾಂಗ್ರೆಸ್​ ಅಧ್ಯಕ್ಷೆ ಸೇರಿದಂತೆ ಇಬ್ಬರ ಬಂಧನ

ಲೈಂಗಿಕ ಸುಖದ ನಷ್ಟ ಅನುಭವಿಸಿದ್ದೇನೆ! 10 ಸಾವಿರ ಕೋಟಿ ರೂ. ಪರಿಹಾರ ಕೋರಿ ಕೋರ್ಟ್​ ಮೆಟ್ಟಿಲೇರಿದ ವ್ಯಕ್ತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 4 =
Remember me
