ಮುಂಬೈ:ಸ್ಮಾಲ್‌ಕ್ಯಾಪ್ ಕಂಪನಿಯಾಗಿರುವ ಕೇಸರ್​ ಇಂಡಿಯಾ ತನ್ನ ಹೂಡಿಕೆದಾರರಿಗೆ ದೊಡ್ಡ ಉಡುಗೊರೆಯನ್ನು ಘೋಷಿಸಿದೆ. ರಿಯಲ್ ಎಸ್ಟೇಟ್ ಕಂಪನಿಯಾಗಿರುವ ಕೇಸರ್​ ಇಂಡಿಯಾ (Kesar India) ತನ್ನ ಹೂಡಿಕೆದಾರರಿಗೆ 6:1 ಅನುಪಾತದಲ್ಲಿ ಬೋನಸ್ ಷೇರುಗಳನ್ನು ನೀಡುತ್ತಿದೆ. ಅಂದರೆ, ಕಂಪನಿಯು ಪ್ರತಿ ಷೇರಿಗೆ 6 ಬೋನಸ್ ಷೇರುಗಳನ್ನು ನೀಡುತ್ತದೆ. ಕಂಪನಿಯು ಬೋನಸ್ ಷೇರುಗಳ ದಾಖಲೆ ದಿನಾಂಕವನ್ನು 19 ಮಾರ್ಚ್ 2024 ಎಂದು ನಿಗದಿಪಡಿಸಿದೆ. ಕಳೆದ ಒಂದು ವರ್ಷದಲ್ಲಿ ಕೇಸರ್ ಇಂಡಿಯಾದ ಷೇರುಗಳು ತ್ವರಿತ ಏರಿಕೆ ಕಂಡಿವೆ. ಕಳೆದ ಒಂದು ವರ್ಷದಲ್ಲಿ ಕೇಸರ್​ ಇಂಡಿಯಾದ ಷೇರುಗಳ ಬೆಲೆ 3100% ಏರಿಕೆಯಾಗಿದೆ. ಕಳೆದ ಒಂದು ತಿಂಗಳಲ್ಲಿ 106.71% ಹೆಚ್ಚಳವಾಗಿದೆ.
ಕೇಸರ್​ ಇಂಡಿಯಾದ ಷೇರುಗಳ ಬೆಲೆ ಮಾರ್ಚ್ 10, 2023 ರಂದು 116 ರೂ. ಇತ್ತು. ಈಗ ಈ ಷೇರುಗಳ ಬೆಲೆ ಮಾರ್ಚ್ 7, 2024 ರಂದು 3713.15 ರೂಪಾಯಿ ತಲುಪಿದೆ. ಕಳೆದ ಒಂದು ವರ್ಷದಲ್ಲಿ ಷೇರು ಬೆಲೆ 3100ರಷ್ಟು ಜಿಗಿತ ಕಂಡುಬಂದಿದೆ. ಮಾರ್ಚ್ 10, 2023 ರಂದು ವ್ಯಕ್ತಿಯೊಬ್ಬರು ಈ ಷೇರುಗಳಲ್ಲಿ 1 ಲಕ್ಷ ರೂ.ಗಳನ್ನು ಹೂಡಿಕೆ ಮಾಡಿ ಈಗಲೂ ಅವರ ಹೂಡಿಕೆಯನ್ನು ಉಳಿಸಿಕೊಂಡಿದ್ದರೆ, ಈ ಷೇರುಗಳ ಪ್ರಸ್ತುತ ಮೌಲ್ಯವು 32 ಲಕ್ಷ ರೂಪಾಯಿ ಆಗುತ್ತದೆ.
ಕೇಸರ್​ ಇಂಡಿಯಾ ಷೇರುಗಳ 52 ವಾರಗಳ ಗರಿಷ್ಠ ಬೆಲೆ 4319.85 ರೂ. ಹಾಗೂ ಕನಿಷ್ಠ ಬೆಲೆ 100.40 ರೂಪಾಯಿ ಇದೆ.
ಕಳೆದ 6 ತಿಂಗಳಲ್ಲಿ ಈ ಷೇರುಗಳ ಬೆಲೆ 1757% ರಷ್ಟು ಏರಿಕೆಯಾಗಿದೆ. ಕಂಪನಿಯ ಷೇರುಗಳ ಬೆಲೆ ಸೆಪ್ಟೆಂಬರ್ 8, 2023 ರಂದು 200 ರೂ. ಇತ್ತು. ಈ ವರ್ಷದ ಆರಂಭದಿಂದ ಇಲ್ಲಿಯವರೆಗೆ ಷೇರುಗಳ ಬೆಲೆ 263% ರಷ್ಟು ಹೆಚ್ಚಾಗಿದೆ. ಈ ಅವಧಿಯಲ್ಲಿ ಕಂಪನಿಯ ಷೇರುಗಳ ಬೆಲೆ 1024.65 ರೂ.ನಿಂದ 3713.15 ರೂ.ಗೆ ಏರಿಕೆಯಾಗಿದೆ. ಪ್ರಸಕ್ತ ಹಣಕಾಸು ವರ್ಷದ ಡಿಸೆಂಬರ್ ತ್ರೈಮಾಸಿಕದಲ್ಲಿ ಈ ಕಂಪನಿಯು 5.25 ಕೋಟಿ ರೂಪಾಯಿ ಲಾಭ ಗಳಿಸಿದೆ.

ಟಾಟಾ ಪವರ್​ ಷೇರು ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ: ಇನ್ನಷ್ಟು ಹೆಚ್ಚಳವಾಗಲಿದೆ ಎನ್ನುತ್ತದೆ ಬ್ರೋಕರೇಜ್​ ಸಂಸ್ಥೆ

ಬರಲಿದೆಯೇ ಟಾಟಾ ಸನ್ಸ್​ ಐಪಿಒ?: ಈ ಚರ್ಚೆಯ ನಡುವೆಯೇ ಟಾಟಾ ಕೆಮಿಕಲ್ಸ್, ಟಾಟಾ ಇನ್ವೆಸ್ಟ್​ಮೆಂಟ್​​ ಷೇರುಗಳ ಬೆಲೆ ಗಗನಕ್ಕೆ

21,382% ಏರಿಕೆ ಕಂಡ ಫಾರ್ಮಾ ಕಂಪನಿ ಷೇರು ಬೆಲೆ: ಸ್ವಾಧೀನ ಸುದ್ದಿ ಬರುತ್ತಿದ್ದಂತೆಯೇ ಅಪ್ಪರ್ ಸರ್ಕ್ಯೂಟ್ ಹಿಟ್​

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:5 × four =
Remember me
