ಮುಂಬೈ:ಸ್ಟಾಕ್ ಮಾರುಕಟ್ಟೆಯಲ್ಲಿ ಅನೇಕ ಪೆನ್ನಿ ಸ್ಟಾಕ್‌ಗಳು ಹೂಡಿಕೆದಾರರಿಗೆ ಒಂದು ವರ್ಷದಲ್ಲಿ ಮಲ್ಟಿಬ್ಯಾಗರ್ ರಿಟರ್ನ್ಸ್ ನೀಡಿವೆ. ಇಂತಹ ಒಂದು ಪೆನ್ನಿ ಸ್ಟಾಕ್ ಸ್ಪ್ರೈಟ್ ಆಗ್ರೋ ಲಿಮಿಟೆಡ್ (Spright Agro Ltd.). ಈ ಪೆನ್ನಿ ಸ್ಟಾಕ್‌ನ ಬೆಲೆ ವರ್ಷದ ಹಿಂದೆ ಒಂದು ರೂಪಾಯಿಗಿಂತ ಕಡಿಮೆಯಿತ್ತು, ಅದು ಈಗ 30 ರೂಪಾಯಿ ಆಗಿದೆ. ಈ ರೀತಿಯಲ್ಲಿ ಹೂಡಿಕೆದಾರರು 5000% ಕ್ಕಿಂತ ಹೆಚ್ಚು ಬಂಪರ್ ಲಾಭವನ್ನು ನೀಡಿದೆ.
ವಾರದ ಮೂರನೇ ವಹಿವಾಟಿನ ದಿನ ಅಂದರೆ ಬುಧವಾರದಂದು ಸ್ಪ್ರೈಟ್ ಆಗ್ರೋ ಲಿಮಿಟೆಡ್ ಷೇರಿನ ಬೆಲೆ ಶೇಕಡಾ 0.55ರಷ್ಟು ಏರಿಕೆಯಾಗಿ 36.75 ರೂ. ತಲುಪಿತು. ಇದು ಈ ಷೇರಿನ ಸಾರ್ವಕಾಲಿಕ ಗರಿಷ್ಠ ಬೆಲೆ ಆಗಿದೆ. ಇದಕ್ಕೂ ಮೊದಲು ಮೇ 7 ರಂದು ಈ ಷೇರಿನ ಬೆಲೆ 52 ವಾರಗಳ ಗರಿಷ್ಠ ಮಟ್ಟವಾಗಿದ್ದ 36.55 ರೂ. ತಲುಪಿತ್ತು. ಆಗಸ್ಟ್ 2023 ರಲ್ಲಿ ಈ ಷೇರಿನ ಬೆಲೆ 65 ಪೈಸೆ ಇತ್ತು. ಇದು ಈ ಷೇರಿನ 52 ವಾರಗಳ ಕನಿಷ್ಠ ಬೆಲೆಯಾಗಿದೆ. ಅಲ್ಲಿಂದ ಇದುವರೆಗೆ ಈ ಷೇರು ಬೆಲೆ ಅಂದಾಜು 5000% ಏರಿಕೆಯಾಗಿದೆ. ಈ ಅವಧಿಯಲ್ಲಿ ಈ ಷೇರಿನಲ್ಲಿ 1 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದರೆ, ಈಗ ಆ ಷೇರಿನ ಮೊತ್ತವು 50 ಲಕ್ಷ ರೂಪಾಯಿಗೆ ಏರಿಕೆಯಾಗುತ್ತದೆ.
ಸ್ಪ್ರೈಟ್ ಆಗ್ರೋ ಲಿಮಿಟೆಡ್‌ನ ವಾರ್ಷಿಕ ಸಾಮಾನ್ಯ ಸಭೆ ಅಂದರೆ AGM ಮೇ 27, 2024 ರಂದು ನಡೆಯಲಿದೆ. ಈ ಸಭೆಯಲ್ಲಿ, ಕಂಪನಿಯ ಆರ್ಥಿಕ ಸ್ಥಿತಿಯ ಹೊರತಾಗಿ ಇತರ ಪ್ರಮುಖ ವಿಷಯಗಳನ್ನು ಚರ್ಚಿಸಲು ಪ್ರಸ್ತಾಪಿಸಲಾಗಿದೆ.
ಈ ಕಂಪನಿಯಲ್ಲಿ ಪ್ರವರ್ತಕರು ಯಾವುದೇ ಪಾಲನ್ನು ಹೊಂದಿಲ್ಲ. ಇದು ಸಾರ್ವಜನಿಕ ಷೇರುದಾರರು 100 ಪ್ರತಿಶತ ಪಾಲನ್ನು ಹೊಂದಿರುವ ಕಂಪನಿಯಾಗಿದೆ. ಸಾರ್ವಜನಿಕ ಷೇರುದಾರರಲ್ಲಿ ಚಿಂತನ್ ಯಶವಂತಭಾಯ್ ಪಟೇಲ್, ರಂಜನ್‌ಬೆನ್ ಅರವಿಂದಭಾಯ್ ಪಟೇಲ್ ಸೇರಿದ್ದಾರೆ.
ಮಾರ್ಚ್ ತ್ರೈಮಾಸಿಕದಲ್ಲಿ ಕಂಪನಿಯ ನಿವ್ವಳ ಲಾಭವು 5.78 ಕೋಟಿ ರೂಪಾಯಿಗಳಾಗಿದ್ದು, ಇದು ಒಂದು ವರ್ಷದ ಹಿಂದೆ ಇದೇ ಅವಧಿಯಲ್ಲಿ 0.02 ಕೋಟಿ ರೂಪಾಯಿಗಳ ನಷ್ಟಕ್ಕಿಂತ ಹಲವಾರು ಪಟ್ಟು ಹೆಚ್ಚಾಗಿದೆ. ಮಾರಾಟದಲ್ಲಿ 1907.34% ಜಿಗಿತ ಕಂಡುಬಂದು 43.76 ಕೋಟಿ ರೂ. ಮುಟ್ಟಿದೆ. ಇಡೀ ಹಣಕಾಸು ವರ್ಷದ ಬಗ್ಗೆ ಹೇಳುವುದಾದರೆ, ಕಂಪನಿಯ ಲಾಭ 11.62 ಕೋಟಿ ರೂ. ಆಗಿದೆ. ಮಾರಾಟ ಕೂಡ ಶೇ. 841.17 ಹೆಚ್ಚಳವಾಗಿ 72.47 ಕೋಟಿ ರೂ. ಮುಟ್ಟಿದೆ.

ಅಕ್ಷಯ ತೃತೀಯದಲ್ಲಿ ಚಿನ್ನ ಖರೀದಿಸಿದವರು ಶ್ರೀಮಂತರಾದರು: ಕಳೆದ 12 ವರ್ಷಗಳ ದಾಖಲೆ ಹೀಗಿದೆ ನೋಡಿ..

ಲಿವ್ ಇನ್ ರಿಲೇಶನ್​ಶಿಪ್​ನಲ್ಲಿ ಇರಲು ಮುಸ್ಲಿಮರಿಗೆ ಹಕ್ಕಿಲ್ಲ: ಹೈಕೋರ್ಟ್ ಈ ಆದೇಶ ನೀಡಿದ್ದೇಕೆ?

ಐಶ್ವರ್ಯಾ ರೈ – ಕತ್ರಿನಾ ಕೈಫ್ ಇವರಲ್ಲಿ ಯಾರು ಹೆಚ್ಚು ಸುಂದರಿ?: ಈ ಪ್ರಶ್ನೆಗೆ ಸಲ್ಮಾನ್​ ಖಾನ್​ ಉತ್ತರಿಸಿದ್ದು ಹೀಗೆ…

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:18 − three =
Remember me
