ಕರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಭಾರತ ಮಹತ್ವದ ಮುನ್ನಡೆ ಸಾಧಿಸಿದೆ. ದೇಶದಲ್ಲಿ ಪ್ರತಿದಿನ ಸುಮಾರು ಒಂದು ಲಕ್ಷ ಜನರ ತಪಾಸಣೆ ನಡೆಸಲಾಗುತ್ತಿದೆ. ಇದಕ್ಕೆ ಅಗತ್ಯವಾಗಿರುವ ಕ್ರಮವನ್ನು ಕೇಂದ್ರ ಆರೋಗ್ಯ ಸಚಿವಾಲಯ ಹಾಗೂ ಐಸಿಎಂಆರ್ ಕೈಗೊಂಡಿವೆ. ಪರೀಕ್ಷೆ ಸಾಮರ್ಥ್ಯ ಹೆಚ್ಚಿದಂತೆ ರೋಗ ಪತ್ತೆ, ನಿಖರ ಅಂಕಿ-ಅಂಶ ಲಭ್ಯವಾಗುತ್ತದೆ. ಸೋಂಕು ಹರಡುವುದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಅನುಕೂಲ ಆಗಲಿದೆ. ಕೋವಿಡ್ ತಪಾಸಣೆ ಕಿಟ್ ಉತ್ಪಾದಿಸುವ ಭಾರತದ ಸಾಮರ್ಥ್ಯ ಕೂಡ ಸುಧಾರಿಸಿದ್ದು, ದೈನಿಕ ಪರೀಕ್ಷಾ ಸಾಮರ್ಥ್ಯವೂ ಹೆಚ್ಚಾಗಿದೆ. ಕರೊನಾ ಸಾಂಕ್ರಾಮಿಕ ರೋಗದಿಂದ ಮೃತಪಡುವವರ ದರ ಭಾರತದಲ್ಲಿ ಜಗತ್ತಿನಲ್ಲೇ ಅತಿ ಕಡಿಮೆಯಾಗಿದೆ. ಜಾಗತಿಕ ಮರಣ ದರ ಸುಮಾರು ಶೇ. 7ರಿಂದ 7.5 ಆಗಿದ್ದು, ಭಾರತದಲ್ಲಿ ಶೇ. 3.2 ಆಗಿದೆ. ಕೆಲವು ರಾಜ್ಯಗಳಲ್ಲಿ ಈ ದರ ಇನ್ನೂ ಕಡಿಮೆಯಿದೆ. ಗುಣಮುಖ ದರ ದರ ಶೇ. 31.7 ಆಗಿದೆ.
1.ಕರೊನಾ ಲಕ್ಷಣ ಇರುವವರು 2. ಸೋಂಕಿತರ ಸಂಪರ್ಕಕ್ಕೆ ಬಂದಿರುವವರು 3. ವಿದೇಶದಿಂದ ಭಾರತಕ್ಕೆ ವಾಪಸಾಗಿರುವವರು 4. ತಮ್ಮ ಊರಿಗೆ ಮರಳಿರುವ ವಲಸೆ ಕಾರ್ವಿುಕರು 5. ರ್ಯಾಂಡಮ್ ಪರೀಕ್ಷೆ (ಒಂದು ಪ್ರದೇಶದಲ್ಲಿ ಐಚ್ಛಿಕವಾಗಿ ಕೆಲ ಮಾದರಿ ಪರೀಕ್ಷೆ )
ಭಾರತ ಇದುವರೆಗೆ ದಿನಕ್ಕೆ 75 ಸಾವಿರದಿಂದ 80 ಸಾವಿರದಷ್ಟು ಮಾದರಿಗಳನ್ನು ಸೋಂಕು ಖಾತರಿಗಾಗಿ ಪರೀಕ್ಷೆ ಮಾಡುತ್ತಿತ್ತು. ಆ ಸಾಮರ್ಥ್ಯ ಇದೀಗ ಒಂದು ಲಕ್ಷಕ್ಕೆ ಏರಿದೆ. ಮೈಲ್ಯಾಬ್ ಇದುವರೆಗೆ ಸುಮಾರು 20 ರಾಜ್ಯಗಳ 140 ಪ್ರಯೋಗಾಲಯ ಹಾಗೂ ಆಸ್ಪತ್ರೆಗಳಿಗೆ 6,50,000 ಪರೀಕ್ಷೆ ನಡೆಸಿಕೊಟ್ಟಿದೆ.
ಕರೊನಾ ಪರೀಕ್ಷೆಗೆ ಅಗತ್ಯವಾದ ಕಿಟ್​ಗಳನ್ನು ಉತ್ಪಾದಿಸುವಲ್ಲಿ ಭಾರತದ ದೇಶೀಯ ಕಂಪನಿ ಕೂಡ ಸಮರ್ಥವಿದೆ ಎಂಬುದನ್ನು ಪುಣೆ ಮೂಲದ ಮೈಲ್ಯಾಬ್ ಡಿಸ್ಕವರಿ ಸಲ್ಯೂಷನ್ಸ್ ತೋರಿಸಿದೆ. ಸೆರಂ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾ ಜೊತೆ ಸೇರಿ ಅದು ಈ ಸಾಧನೆ ಮಾಡಿದೆ. ಪರೀಕ್ಷೆ ನಡೆಸಲು ಕೇಂದ್ರೀಯ ಔಷಧ ಮಾನಕ ನಿಯಂತ್ರಣ ಸಂಸ್ಥೆಯ (ಸಿಡಿಎಸ್​ಸಿಒ) ಅನುಮತಿ ಗಳಿಸಿದ ಸ್ಥಳೀಯ ಕಂಪನಿಗಳಲ್ಲಿ ಮೈಲ್ಯಾಬ್ ಒಂದಾಗಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಮಾನದಂಡ ಪೂರೈಸುವ ಕಿಟ್​ಗಳನ್ನು ಸರಬರಾಜು ಮಾಡಲು ಸಿಡಿಎಸ್​ಸಿಒ ನಂತರ ಇನ್ನೂ ಆರು ಕಂಪನಿಗಳಿಗೆ ಅನುಮತಿ ನೀಡಿದೆ.
ಚೀನಾ ವಿರುದ್ಧ ನಿರ್ಬಂಧಕ್ಕೆ ಅಮೆರಿಕ ಚಿಂತನೆ

ಕೇಸ್ ಕ್ಲೋಸ್ ಮಾಡಿ, ಸಾಲ ಮರುಪಾವತಿಸ್ತೇನೆ- ಅಂಗಾಲಾಚುತ್ತಿದ್ದಾರೆ ವಿಜಯ್ ಮಲ್ಯ!

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:5 × five =
Remember me
