ಕರೀಂಗಂಜ್:ಅಸ್ಸಾಂನ ಪೊಲೀಸರು ಡ್ರಗ್ಸ್​ ಪೆಡ್ಲರ್​​ಗಳ ವಿರುದ್ಧ ಸಮರ ಸಾರಿದ್ದಾರೆ. ಡ್ರಗ್ಸ್​ ​ಮುಕ್ತ ನಗರವನ್ನಾಗಿ ಮಾಡಲು ಪಣ ತೊಟ್ಟಿದ್ದಾರೆ. ಅದರಂತೆ ಡೀಸೆಲ್‌ ಟ್ಯಾಂಕ್‌ನಲ್ಲಿಟ್ಟು ಡ್ರಗ್ಸ್‌ಗೆ ಸಂಬಂಧಿಸಿದ ಮಾತ್ರೆ ಸಾಗಾಟ ಮಾಡುತ್ತಿದ್ದ ದಂಧೆಕೋರರನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ:ಪಾಠ ಮಾಡುವುದು ಬಿಟ್ಟು ಮೊಬೈಲ್​ನಲ್ಲಿ ಕ್ಯಾಂಡಿಕ್ರಷ್ ಆಡ್ತಿದ್ದ ಶಾಲಾ ಶಿಕ್ಷಕ ಅಮಾನತು
ಈ ಸಂಬಂಧ ಕರೀಂಗಂಜ್ ಪೊಲೀಸರು ಇಬ್ಬರನ್ನು ಬಂಧಿಸಿದ್ದು, 30 ಕೋಟಿ ರೂ. ಮೌಲ್ಯದ ಒಂದು ಲಕ್ಷ ಮಾತ್ರೆಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಗಳನ್ನು ನಜ್ಮುಲ್ ಹುಸೇನ್ ಮತ್ತು ಮುತ್ಲಿಬ್ ಅಲಿ ಎಂದು ಗುರುತಿಸಲಾಗಿದೆ.
🚫SAY NO TO DRUGS🚫
Based on actionable intelligence,@karimganjpoliceintercepted a vehicle coming from a neighbouring State and recovered 1,00,000 YABA tablets from hidden chambers of the vehicle.
Two people have been apprehended
Good job@assampolice#AssamAgainstDrugspic.twitter.com/Yo2VTiVy7k
— Himanta Biswa Sarma (@himantabiswa)July 11, 2024

ಮಿಜೋರಂ ಕಡೆಯಿಂದ ಯಾಬಾ ಮಾತ್ರೆಗಳನ್ನು ಸಾಗಿಸುತ್ತಿರುವುದಾಗಿ ಮಾಹಿತಿ ಬಂದಿತ್ತು. ತಕ್ಷಣ ರಟಾಬರಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಾಕಾಬಂಧಿ ರಚಿಸಿ ತಪಾಸಣೆ ಶುರು ಮಾಡಿದ್ದೆವು. ಡೀಸೆಲ್‌ ಟ್ಯಾಂಕ್‌ ವಾಹನ ಪರಿಶೀಲಿಸಿದಾಗ ಯಾಬಾ ಮಾತ್ರೆಗಳುಳ್ಳ 10 ಪ್ಯಾಕೆಟ್‌ ಪತ್ತೆಯಾಯಿತು. ಬಳಿಕ ಮಾತ್ರೆಗಳನ್ನು ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಲಾಯಿತು. ಮಾದಕ ವಸ್ತುಗಳ ಮಾರುಕಟ್ಟೆಯಲ್ಲಿ ಈ ಮಾತ್ರೆಗಳ ಮೌಲ್ಯ ಸುಮಾರು 30 ಕೋಟಿ ರೂ. ಇದೆ ಎಂದು ಕರೀಂಗಂಜ್ ಎಸ್ಪಿ ಪಾರ್ಥ ಪ್ರೋತಿಮ್ ದಾಸ್ ತಿಳಿಸಿದ್ದಾರೆ.
ಇದಕ್ಕೂ ಮೊದಲು, ಜೂನ್ 7 ರಂದು, ಅಸ್ಸಾಂ ಪೊಲೀಸರು 8.5 ಕೋಟಿ ಮೌಲ್ಯದ 1.7 ಕಿಲೋಗ್ರಾಂಗಳಷ್ಟು ಹೆರಾಯಿನ್ ಅನ್ನು ವಶಪಡಿಸಿಕೊಂಡು, ಅಸ್ಸಾಂ-ಮಿಜೋರಾಂ ಗಡಿಯ ಸಮೀಪವಿರುವ ಧೋಲೈಖಾಲ್ ಪ್ರದೇಶದಲ್ಲಿ ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದರು. ಮಿಜೋರಾಂನ ಚೈಫೈನಿಂದ ಅಕ್ರಮವಾಗಿ ಸಾಗಿಸಲಾಗಿದೆ ಎಂದು ಶಂಕಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ದೆಹಲಿ: ಮೆಟ್ರೋ ಬರುವಾಗ ಹಳಿಗೆ ಹಾರಿ ವೃದ್ಧ ಆತ್ಮಹತ್ಯೆ; ರೈಲು ಸಂಚಾರ ಸ್ಥಗಿತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + 6 =
Remember me
