ಮುಂಬೈ:ಜೆನ್ಸೋಲ್ ಇಂಜಿನಿಯರಿಂಗ್ ಲಿಮಿಟೆಡ್​ (Gensol Engineering Ltd.) ಕಂಪನಿಯ ಷೇರುಗಳಲ್ಲಿ ಈ ಮತ್ತೆ ಭಾರಿ ಏರಿಕೆಯಾಗಿದೆ. ಕಳೆದ 3 ವರ್ಷಗಳಲ್ಲಿ ಕಂಪನಿಯ ಷೇರುಗಳು 7000% ಹೆಚ್ಚಳವಾಗಿರುವುದು ಗಮನಾರ್ಹವಾಗಿದೆ.
ಕಂಪನಿಯು 3 ವರ್ಷಗಳಲ್ಲಿ ಎರಡು ಬಾರಿ ಬೋನಸ್ ಷೇರುಗಳನ್ನು ನೀಡಿದೆ. ಬೋನಸ್ ಷೇರುಗಳ ಆಧಾರದ ಮೇಲೆ ಕಂಪನಿಯ ಷೇರುಗಳು ಕೇವಲ 3 ವರ್ಷಗಳಲ್ಲಿ 1 ಲಕ್ಷ ರೂಪಾಯಿಗಳ ಹೂಡಿಕೆಯನ್ನು 2.83 ಕೋಟಿ ರೂ. ಮಾಡಿವೆ.
ಕಂಪನಿಯ ಷೇರುಗಳ ಬೆಲೆ 20 ಫೆಬ್ರವರಿ 2024 ರಂದು ರೂ. 1331 ರೂಪಾಯಿಗೆ ತಲುಪಿವೆ. ಕಂಪನಿಯ ಷೇರುಗಳ ಬೆಲೆ 1 ವರ್ಷದಲ್ಲಿ 321% ರಷ್ಟು ಹೆಚ್ಚಾಗಿದೆ. ಕಳೆದ ಒಂದು ವರ್ಷದಲ್ಲಿ Gensol Engineering ನ ಷೇರುಗಳ ಬೆಲೆ 321% ರಷ್ಟು ಹೆಚ್ಚಾಗಿದೆ. ಈ ಅವಧಿಯಲ್ಲಿ ಕಂಪನಿಯ ಷೇರುಗಳ ಬೆಲೆ ರೂ. 316.88ರಿಂದ ರೂ.1331ಕ್ಕೆ ಏರಿಕೆಯಾಗಿದೆ.
12 ಫೆಬ್ರವರಿ 2021 ರಂದು ಈ ಕಂಪನಿಯ ಷೇರುಗಳ ಬೆಲೆ ಕೇವಲ 18.75 ರೂಪಾಯಿ ಇತ್ತು. ಆಗ ಒಬ್ಬ ವ್ಯಕ್ತಿ ಕಂಪನಿಯ ಈ ಷೇರುಗಳಲ್ಲಿ 1 ಲಕ್ಷ ರೂ. ಹೂಡಿಕೆ ಮಾಡಿದ್ದರೆ 5333 ಷೇರುಗಳು ಸಿಗುತ್ತಿದ್ದವು. ಕಂಪನಿಯು ಅಕ್ಟೋಬರ್ 2021 ರಲ್ಲಿ 1:3 ಅನುಪಾತದಲ್ಲಿ ಬೋನಸ್ ಷೇರುಗಳನ್ನು ನೀಡಿದೆ. ಅಕ್ಟೋಬರ್ 2023 ರಲ್ಲಿ, ಕಂಪನಿಯು 2:1 ಅನುಪಾತದಲ್ಲಿ ಬೋನಸ್​ ಷೇರುಗಳನ್ನು ನೀಡಿದೆ. ಈ ಬೋನಸ್ ಷೇರುಗಳನ್ನು ಸೇರಿಸಿದ ನಂತರ ಒಟ್ಟು ಷೇರುಗಳ ಸಂಖ್ಯೆ 21330 ಆಗುತ್ತದೆ. 20 ಫೆಬ್ರವರಿ 2024 ರಂದು ಷೇರುಗಳ ಬೆಲೆ 1331 ರೂ. ಇದೆ. ಈ ಪ್ರಕಾರ ಲೆಕ್ಕ ಹಾಕಿದರೆ 1 ಲಕ್ಷ ರೂಪಾಯಿಯ ಹೂಡಿಕೆಯು ಈಗ 2.83 ಕೋಟಿ ರೂಪಾಯಿ ಆಗುತ್ತದೆ.
ಕಳೆದ 6 ತಿಂಗಳ ಅವಧಿಯಲ್ಲಿ ಕೂಡ, ಈ ಕಂಪನಿಯ ಷೇರುಗಳು ಹೂಡಿಕೆದಾರರ ಹಣವನ್ನು ದ್ವಿಗುಣಗೊಳಿಸಿವೆ. ಕಳೆದ 6 ತಿಂಗಳಲ್ಲಿ ಕಂಪನಿಯ ಷೇರುಗಳ ಬೆಲೆ 128% ಏರಿಕೆಯಾಗಿದೆ. ಕಳೆದ ಒಂದು ತಿಂಗಳಲ್ಲಿ, ಷೇರುಗಳ ಬೆಲೆ 50% ರಷ್ಟು ಹೆಚ್ಚಾಗಿದೆ. ಷೇರುಗಳ 52 ವಾರಗಳ ಗರಿಷ್ಠ ಬೆಲೆ 1377.10 ರೂ, ಕನಿಷ್ಠ ಬೆಲೆ 265.42 ರೂ. ಆಗಿದೆ.

ಹಿಂದೂಸ್ತಾನ್ ಯೂನಿಲಿವರ್ ಮೀರಿಸಿದ ಐಟಿಸಿ: ಷೇರು ಖರೀದಿಗೆ ದಲ್ಲಾಳಿಗಳ ಶಿಫಾರಸು ಮಾಡಿದ್ದೇಕೆ?

ಸರ್ಕಾರಿ ಬ್ಯಾಂಕ್‌ಗಳ ಬದಲು ಈ 3 ಲಾರ್ಜ್​ ಕ್ಯಾಪ್​ಗಳಲ್ಲಿ ತೊಡಗಿಸಿ: ಮುಂದೆ ಲಾಭ ಖಚಿತ ಎನ್ನುತ್ತಾರೆ ಮಾರುಕಟ್ಟೆ ತಜ್ಞರು

5 ರೂಪಾಯಿ ಷೇರು ಈಗ 125 ರೂಪಾಯಿ, ಲಾಭ 2300%: ಡಿಫೆನ್ಸ್​ ಕಂಪನಿ ಸ್ಟಾಕ್​ನಲ್ಲಿ ವಿದೇಶಿಗರ ಹೂಡಿಕೆ ಹೆಚ್ಚಳ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + 11 =
Remember me
