ಮುಂಬೈ:ಷೇರು ಮಾರುಕಟ್ಟೆಯಲ್ಲಿ ಈ ಹಿಂದೆ ಪೆನ್ನಿ ವಿಭಾಗದಲ್ಲಿದ್ದು, ಕೆಲವು ವರ್ಷಗಳಲ್ಲಿ ಹೂಡಿಕೆದಾರರಿಗೆ ಮಲ್ಟಿಬ್ಯಾಗರ್ ರಿಟರ್ನ್ಸ್ ನೀಡಿದ ಅನೇಕ ಷೇರುಗಳಿವೆ. ಇಂತಹ ಒಂದು ಸ್ಟಾಕ್ ಎಂದರೆ, ಈಯಂತ್ರ ವೆಂಚರ್ಸ್ (Eyantra Ventures). ಕಳೆದ 3 ವರ್ಷಗಳಲ್ಲಿ ಈ ಸ್ಟಾಕ್ ತನ್ನ ಹೂಡಿಕೆದಾರರಿಗೆ ಬಹುಪಟ್ಟು ಆದಾಯವನ್ನು ನೀಡಿದೆ. ಈ ಅವಧಿಯಲ್ಲಿ ಶೇಕಡಾ 29,287ರಷ್ಟು ಏರಿಕೆ ಕಂಡಿದೆ.
ಈ ಸ್ಟಾಕ್ ಬೆಲೆ ಮಾರ್ಚ್ 2021 ರಲ್ಲಿ ರೂ 3.28 ಇತ್ತು. ಇದೀಗ ರೂ. 963.90ಕ್ಕೆ ಏರಿಕೆಯಾಗಿ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ. ಈ ಅವಧಿಯಲ್ಲಿ ಈ ಸ್ಟಾಕ್​ನಲ್ಲಿ 1 ಲಕ್ಷ ರೂ. ಹೂಡಿಕೆ ಮಾಡಿ, ಇದುವರೆಗೂ ಮುಂದುವರಿಸಿದ್ದರೆ ಈ ಹೂಡಿಕೆಯ ಮೊತ್ತವು 2.92 ಕೋಟಿ ರೂಪಾಯಿ ಆಗುತ್ತಿತ್ತು.
ಕಳೆದ ಒಂದು ವರ್ಷದಲ್ಲಿ ಶೇ 216 ರಷ್ಟು ಹೆಚ್ಚಿದೆ. 2024 ರಲ್ಲಿ ಇಲ್ಲಿಯವರೆಗೆ 4 ತಿಂಗಳುಗಳಲ್ಲಿ ಧನಾತ್ಮಕ ಆದಾಯವನ್ನು ನೀಡಿದೆ. ಸ್ಟಾಕ್ ಫೆಬ್ರವರಿಯಲ್ಲಿ 63 ಪ್ರತಿಶತ ಮತ್ತು ಜನವರಿಯಲ್ಲಿ 3 ಪ್ರತಿಶತದಷ್ಟು ಲಾಭವನ್ನು ನೀಡಿದೆ.
ಈ ಸ್ಟಾಕ್ ತನ್ನ 52 ವಾರಗಳ ಕನಿಷ್ಠ ಬೆಲೆ ರೂ. 305.25 ಇದೆ. ಮೇ 29, 2023 ರಂದು ಸ್ಟಾಕ್ ಈ ಮಟ್ಟವನ್ನು ಮುಟ್ಟಿತ್ತು.
ಬ್ರೋಕರೇಜ್ ICICI ಡೈರೆಕ್ಟ್ ಕಂಪನಿಯ ಷೇರುಗಳ ಬಗ್ಗೆ ಧನಾತ್ಮಕವಾಗಿದೆ. ಅದರಂತೆ, ಈ ಷೇರು ವಾರ್ಷಿಕ ಗಳಿಕೆಯಲ್ಲಿ (ಇಪಿಎಸ್) ಬಲವಾದ ಬೆಳವಣಿಗೆಯನ್ನು ಅನುಭವಿಸಿದೆ.
ಈಯಂತ್ರ ವೆಂಚರ್ಸ್ ಲಿಮಿಟೆಡ್ ಕುರಿತು ಮಾತನಾಡುತ್ತಾ, ಈ ಕಂಪನಿಯು ಐಟಿ ಸಂಬಂಧಿ ಸೇವೆಗಳನ್ನು ಒದಗಿಸುವಲ್ಲಿ ತೊಡಗಿಸಿಕೊಂಡಿದೆ. ಕಂಪನಿಯನ್ನು ಹಿಂದೆ ಪುನಿತ್ ಕಮರ್ಷಿಯಲ್ಸ್ ಲಿಮಿಟೆಡ್ ಎಂದು ಕರೆಯಲಾಗುತ್ತಿತ್ತು. ಕಂಪನಿಯು 1984 ರಲ್ಲಿ ಸ್ಥಾಪನೆಯಾಯಿತು ಮತ್ತು ಭಾರತದ ಹೈದರಾಬಾದ್‌ನಲ್ಲಿ ನೆಲೆಗೊಂಡಿದೆ. ಡಿಸೆಂಬರ್ ತ್ರೈಮಾಸಿಕದಲ್ಲಿ ಕಂಪನಿಯು ರೂ. 27 ಲಕ್ಷ ಲಾಭ ಗಳಿಸಿದೆ. ಡಿಸೆಂಬರ್ 2023 ರ ಅಂತ್ಯದ ತ್ರೈಮಾಸಿಕದಲ್ಲಿ ಇದರ ಆದಾಯವು ರೂ. 4.5 ಕೋಟಿ ರೂಪಾಯಿಗಳಷ್ಟಿತ್ತು,


ಎಕ್ಸ್​ಪ್ರೆಸ್​ ವೇಗದಲ್ಲಿ ಓಡುತ್ತಿದೆ ರೈಲ್ವೆ ಷೇರು ಬೆಲೆ: ಇನ್ನೂ ಹೆಚ್ಚುತ್ತದೆ ಎನ್ನುತ್ತಾರೆ ತಜ್ಞರು…
ಅದಾನಿ ಗ್ರೂಪ್​ನ 5 ಸ್ಟಾಕ್​ಗಳತ್ತ ಆಕರ್ಷಣೆ: ವಿದೇಶಿ ಹೂಡಿಕೆದಾರರು ಹೂಡಿಕೆ ಹೆಚ್ಚಳ ಮಾಡಿದ್ದೇಕೆ?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 3 =
Remember me
