ಭಂಡಾರಾ:ಮಹಾರಾಷ್ಟ್ರದ ಭಂಡಾರದಲ್ಲಿರುವ ಆಸ್ಪತ್ರೆಯಲ್ಲಿ ತಡರಾತ್ರಿ 2 ಗಂಟೆ ಸುಮಾರಿಗೆ ಸಂಭವಿಸಿದ ಅಗ್ನಿ ಅವಘಡದಲ್ಲಿ 10 ನವಜಾತು ಶಿಶು ದುರಂತ ಸಾವಿಗೀಡಾಗಿವೆ. ಶಿಶುಗಳ ಸಾವಿಗೆ ಪ್ರಧಾನಿ ಮೋದಿ ಕಂಬನಿ ಮಿಡಿದಿದ್ದು, ಹೃದಯ ಬಿರಿಯುವ ದುರಂತ ಎಂದು ಕರೆದಿದ್ದಾರೆ.
ಮುಂಬೈನಿಂದ 900 ಕಿ.ಮೀ ದೂರದಲ್ಲಿರುವ ಭಂಡಾರ ಜಿಲ್ಲೆಯಲ್ಲಿರುವ ನಾಲ್ಕು ಅಂತಸ್ತಿನ ಆಸ್ಪತ್ರೆಯ ವಿಶೇಷ ಮಕ್ಕಳ ಘಟಕಕ್ಕೆ 17 ನವಜಾತ ಶಿಶುಗಳು ದಾಖಲಾಗಿದ್ದವು. ಇದರಲ್ಲಿ ವಾರ್ಡಿನೊಳಗಿದ್ದ ಏಳು ಮಕ್ಕಳನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ್ದು, ಹೊರಗಿದ್ದ ಉಳಿದ ಮಕ್ಕಳು ಉಸಿರಾಟ ಸಮಸ್ಯೆಯಿಂದ ಮೃತಪಟ್ಟಿವೆ.
ಇದನ್ನೂ ಓದಿ:ಕಾಮುಕ ಸೋದರಸಂಬಂಧಿಯನ್ನು ಕೊಂದ ಯುವತಿಯನ್ನು ಬಂಧಿಸದೇ ಬಿಟ್ಟು ಕಳುಹಿಸಿದ ಪೊಲೀಸ್​ ಅಧಿಕಾರಿ!
ಈ ಬಗ್ಗೆ ಟ್ವೀಟ್​ ಮಾಡಿರುವ ಪ್ರಧಾನಿ ಮೋದಿ, ಮಹಾರಾಷ್ಟ್ರದ ಭಂಡಾರದಲ್ಲಿ ನಡೆದಿರುವುದು ಹೃದಯ ಬಿರಿಯುವ ದುರಂತ. ಅಮೂಲ್ಯವಾದ ಯುವ ಜೀವನವನ್ನು ನಾವು ಕಳೆದುಕೊಂಡಿದ್ದೇವೆ. ಮಕ್ಕಳನ್ನು ಕಳೆದಕೊಂಡು ಕುಟುಂಬದ ದುಃಖದಲ್ಲಿ ನಾನು ಭಾಗಿಯಾಗಿದ್ದೇನೆ. ಗಾಯಗೊಂಡವರು ಸಾಧ್ಯವಾದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ನಾನು ಬಯಸುತ್ತೇನೆಂದು ಪ್ರಧಾನಿ ಹೇಳಿದ್ದಾರೆ.
Heart-wrenching tragedy in Bhandara, Maharashtra, where we have lost precious young lives. My thoughts are with all the bereaved families. I hope the injured recover as early as possible.
— Narendra Modi (@narendramodi)January 9, 2021

ಎಲ್ಲ ಮಕ್ಕಳು ಸಹ ಕೇವಲ ಒಂದರಿಂದ ಮೂರು ತಿಂಗಳ ಅವಧಿಯಲ್ಲಿ ಜನಿಸಿವೆ. ವಿಶೇಷ ಮಕ್ಕಳ ಘಟಕದಲ್ಲೇ ಅಗ್ನಿ ಅವಘಡ ಸಂಭವಿಸಿದ್ದು, ಆರಂಭದಲ್ಲಿ ವಾರ್ಡ್​ ಡ್ಯೂಟಿಯಲ್ಲಿದ್ದ ನರ್ಸ್​ ಗಮನಿಸಿದ್ದಾರೆ. ಬೆಂಕಿ ಹರಡದಂತೆ ಆಸ್ಪತ್ರೆಯ ಸಿಬ್ಬಂದಿಯೇ ತಡೆದಿದ್ದು, ದಟ್ಟವಾಗಿ ಆವರಿಸಿದ್ದ ಹೊಗೆಯಿಂದಾಗಿ ಉಸಿರಾಡಲು ಆಗದೆ ಮಕ್ಕಳು ಮೃತಪಟ್ಟಿವೆ. ಶಾರ್ಟ್​ಸೆರ್ಕ್ಯೂಟ್​ನಿಂದಾಗಿ ಬೆಂಕಿ ಹೊತ್ತಿಕೊಂಡಿದೆ ಎಂದು ಅಂದಾಜಿಸಲಾಗಿದ್ದು, ಇತರೆ ವಾರ್ಡ್​ಗಳಲ್ಲಿದ್ದ ರೋಗಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ಆಸ್ಪತ್ರೆಯ ಆಡಳಿತ ಮಂಡಳಿ ತಿಳಿಸಿದೆ.
ಘಟನೆ ಕುರಿತು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಅವರು ಆರೋಗ್ಯ ಸಚಿವ ರಾಜೇಶ್​ ತೋಪೆ ಜತೆ ಮಾತನಾಡಿ, ತನಿಖೆ ಆದೇಶಿಸಿದ್ದಾರೆ. ಅಲ್ಲದೆ, ಜಿಲ್ಲಾಧಿಕಾರಿ ಮತ್ತು ಪೊಲೀಸ್​ ವರಿಷ್ಠಧಿಕಾರಿಗೂ ತನಿಖೆಗೆ ಸೂಚನೆ ನೀಡಿದ್ದಾರೆ.
ಇದನ್ನೂ ಓದಿರಿ:ಸರ್ಕಾರಿ ನೌಕರನೆಂದು ಮದ್ವೆಯಾದವಳಿಗೆ ನಿತ್ಯ ನರಕ ದರ್ಶನ: ಗಂಡನ ಮೊಬೈಲ್​ ನೋಡಿ ಪತ್ನಿಗೆ ಶಾಕ್!​
ಮೃತರ ಕುಟುಂಬಕ್ಕೆ ಎಲ್ಲ ರೀತಿಯ ನೆರವು ನೀಡಲು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದು, ಮಕ್ಕಳ ಸಾವಿಗೆ ಸಂತಾಪ ಸೂಚಿಸಿದ್ದಾರೆ.(ಏಜೆನ್ಸೀಸ್​)
ಭಯದಿಂದಲೇ ಎಸ್​ಬಿಐ ಉದ್ಯೋಗಿ ಆತ್ಮಹತ್ಯೆಗೆ ಶರಣು: ಡೆತ್​ನೋಟ್​ನಲ್ಲಿತ್ತು ನೋವಿನ ನುಡಿ!

ಬಂಧಿತ ಯುವತಿಯರ ಮೊಬೈಲ್​, ಲ್ಯಾಪ್​ಟಾಪ್​ ತುಂಬಾ ಪೋರ್ನ್​ ವಿಡಿಯೋಗಳು: ಎಫ್​ಎಸ್​ಎಲ್​ ಸ್ಫೋಟಕ ವರದಿ!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:10 − one =
Remember me
