ನವದೆಹಲಿ :ಜೂನ್​ ತಿಂಗಳಲ್ಲಿ 9 ರಿಂದ 10 ಕೋಟಿ ಡೋಸ್​ಗಳಷ್ಟು ಕೋವಿಶೀಲ್ಡ್​ ಕರೊನಾ ಲಸಿಕೆಯನ್ನು ಉತ್ಪಾದಿಸಿ ಪೂರೈಸುವುದಾಗಿ ಕೋವಿಶೀಲ್ಡ್​ ಉತ್ಪಾದಕ ಸೀರಮ್​ ಇನ್ಸ್​​ಟಿಟ್ಯೂಟ್​ ಆಫ್​ ಇಂಡಿಯ(ಎಸ್​​ಐಐ) ಕೇಂದ್ರ ಸರ್ಕಾರಕ್ಕೆ ತಿಳಿಸಿದೆ. ಕರೊನಾ ಎರಡನೇ ಅಲೆಯ ಸಂದರ್ಭದಲ್ಲೂ ಕರೊನಾ ಲಸಿಕೆಯ ಉತ್ಪಾದನೆ ಹೆಚ್ಚಿಸಲು ತನ್ನ ಸಿಬ್ಬಂದಿ ಹಗಲೂ ಇರುಳೂ ಶ್ರಮಿಸುತ್ತಿದ್ದಾರೆ ಎಂದು ಕಂಪೆನಿ ಕೇಂದ್ರ ಗೃಹ ಸಚಿವ ಅಮಿತ್​ ಷಾಗೆ ಪತ್ರ ಬರೆದಿದೆ ಎನ್ನಲಾಗಿದೆ.
“ಮೇನಲ್ಲಿ 6.5 ಕೋಟಿ ಡೋಸ್​ಗಳನ್ನು ಉತ್ಪಾದಿಸಿದ್ದಕ್ಕೆ ಹೋಲಿಸಿದರೆ ನಾವು ಜೂನ್​​ನಲ್ಲಿ 9 ರಿಂದ 10 ಕೋಟಿ ಡೋಸ್​ ಕೋವಿಶೀಲ್ಡ್​​ ಉತ್ಪಾದಿಸಿ ಪೂರೈಸಬಲ್ಲೆವು” ಎಂದು ಎಸ್​ಐಐನ ಜಿಆರ್​ಎ ನಿರ್ದೇಶಕ ಪ್ರಕಾಶ್​ ಕುಮಾರ್​ ಬರೆದಿದ್ದಾರೆ. “ನಮ್ಮ ಸಿಇಒ ಆಡಾರ್​ ಸಿ.ಪೂನವಾಲಾ ಅವರ ನಾಯಕತ್ವದಲ್ಲಿ ಕರೊನಾ ವಿರುದ್ಧ ಹೋರಾಡುವಲ್ಲಿ ಸರ್ಕಾರದ ಹೆಗಲಿಗೆ ಹೆಗಲು ಕೊಟ್ಟು ನಮ್ಮ ತಂಡ ಕೆಲಸ ಮಾಡುತ್ತಿದೆ” ಎಂದಿದ್ದಾರೆ.(ಏಜೆನ್ಸೀಸ್)
VIDEO | ಕರೊನಾ ರೋಗಿ ಶವವನ್ನು ಸೇತುವೆ ಮೇಲಿಂದ ನದಿಗೆ ಬಿಸಾಡಿದ ಕುಟುಂಬಸ್ಥರು !

ಭಾರತೀಯ ವಿದ್ಯಾರ್ಥಿನಿಗೆ ಯುಎಇ ಗೋಲ್ಡನ್ ವೀಸಾ !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × five =
Remember me
