ಲಖನೌ :ಉತ್ತರಪ್ರದೇಶದ ಬುಲಂದ್‌ಶಹರ್‌ನ ನರೋರಾ ಗಂಗಾ ಘಾಟ್‌ನ ಕಾಲುವೆಯ ಬಳಿ 10 ಅಡಿ ಉದ್ದದ ಬೃಹತ್ ಮೊಸಳೆ ಅಚಾನಕ್ಕಾಗಿ ನೀರಿನಿಂದ ಹೊರಬಂದಿದೆ. ಕಾಲುವೆಯಿಂದ ಹೊರಬಂದಿದ್ದ ಮೊಸಳೆ ಪುನಃ ನೀರಿಗೆ ಮರಳುವ ಪ್ರಯತ್ನದಲ್ಲಿ ಕಬ್ಬಿಣದ ರೈಲಿಂಗ್​ ಮೇಲೆ ಹತ್ತಲು ಪ್ರಯತ್ನಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ರಸ್ತೆ ಮೇಲೆ ಕಂಡ ಹತ್ತು ಅಡಿಯ ಮೊಸಳೆ ನೋಡಲು ಜನರು ಗುಂಪು ಗುಂಪಾಗಿ ಸೇರಿದ್ದರು ಜತೆಗೆ ಫೋಟೋ ಕ್ಲಿಕ್ಕಿಸಿಕೊಂಡರು. ಬಳಿಕ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಮೊಸಳೆಯನ್ನು ಸೆರೆಹಿಡಿಯಲು ಅದರ ತಲೆಯನ್ನು ಬಟ್ಟೆಯಿಂದ ಮುಚ್ಚಿದ್ದರು ಮತ್ತು ರಕ್ಷಣಾ ತಂಡದ ಮೇಲೆ ದಾಳಿ ಮಾಡದಂತೆ ತಡೆಯಲು ಅದರ ಕಾಲುಗಳನ್ನು ಹಗ್ಗದಿಂದ ಕಟ್ಟಿದ್ದರು. ಹಲವು ಗಂಟೆಗಳ ಸತತ ಪ್ರಯತ್ನದ ಬಳಿಕ ಮೊಸಳೆಯನ್ನು ರಕ್ಷಿಸಿ ಮತ್ತೆ ಕಾಲುವೆಗೆ ಬಿಟ್ಟಿದ್ದಾರೆ.
ಮೊಸಳೆ ಕಾಲುವೆಗೆ ಮರಳಲು ಪ್ರಯತ್ನಿಸುತ್ತಿತ್ತು. ಮೊಸಳೆ ರಕ್ಷಿಸುವಾಗ ಕ್ರಮವನ್ನು ಗಮನದಲ್ಲಿಟ್ಟುಕೊಂಡು ಮೊಸಳೆಯನ್ನು ರಕ್ಷಿಸಿ ಮತ್ತೆ ಕಾಲುವೆಗೆ ಬಿಟ್ಟಿದ್ದೇವೆ ಎಂದು ಅರಣ್ಯ ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.
ಅಲ್ಲದೆ, ಗಂಗಾ ನದಿಯಿಂದ ಹೊರಬರುವ ಎಲ್‌ಸಿಸಿಯಲ್ಲಿನ ಪಿಎಲ್‌ಜಿಸಿ ಕಾಲುವೆಯಲ್ಲಿ ಹೆಚ್ಚಿನ ಸಂಖ್ಯೆಯ ಮೊಸಳೆಗಳಿವೆ. ಈ ಮೊಸಳೆಗಳನ್ನು ಚಳಿಗಾಲದಲ್ಲಿ ಕಾಲುವೆಯ ಉದ್ದಕ್ಕೂ ಇರುವ ಹಳಿಗಳ ಮೇಲೆ ಕಾಣಬುಹುದಾಗಿದೆ. ಬೇಸಿಗೆ ಸಮಯದಲ್ಲಿ ಶಾಖದ ಕಾರಣ ಮೊಸಳೆಗಳು ನೀರಿನ ಅಡಿಯಲ್ಲಿ ಉಳಿಯುತ್ತವೆ.
Uttar Pradesh…
A crocodile came out of Ganga canal in Narora of Bulandshahar district, later released back into waterpic.twitter.com/KPOukrCd8X
— BlueGreen Planet (@BluesWaltair)May 29, 2024

ಭಾರತದಲ್ಲಿ ಮೊಸಳೆಗಳು ತಮ್ಮ ಆವಾಸಸ್ಥಾನದಿಂದ ಹೊರಬರುವ ನಿದರ್ಶನ ಇದೇ ಮೊದಲೇನಲ್ಲ. 2023 ಜೂನ್ 24 ರಂದು ಭಾರೀ ಮಳೆಯ ಕಾರಣ ಗುಜರಾತ್‌ನ ವಡೋದರಾದ ವಿಶ್ವಾಮಿತ್ರಿ ನದಿಯ ಬಳಿಯ ರಸ್ತೆಯಲ್ಲಿ ಮೊಸಳೆಯೊಂದು ಕಾಣಿಸಿಕೊಂಡಿತ್ತು. ಬಳಿಕ ವನ್ಯಜೀವಿ ರಕ್ಷಣಾ ತಂಡಗಳು ಕೂಡಲೇ ಮೊಸಳೆಯನ್ನು ಹಿಡಿದು ಬೋನಿನಲ್ಲಿ ಭದ್ರಪಡಿಸಿದ್ದರು. ಅದೇ ರೀತಿ ಡಿಸೆಂಬರ್ 2023ರಲ್ಲಿ ಧಾರಾಕಾರ ಮಳೆಯಿಂದಾಗಿ ಚೆನ್ನೈನ ಬೀದಿಗಳಲ್ಲಿ ಮೊಸಳೆ ಕಂಡುಬಂದಿತು. ತಮಿಳುನಾಡು ಅರಣ್ಯ ಇಲಾಖೆಯು ಅದನ್ನು ರಕ್ಷಿಸಿತ್ತು.(ಏಜೆನ್ಸೀಸ್​)
ತುರುವೇಕೆರೆ ಜೆಡಿಎಸ್ ಶಾಸಕ ಎಂ.ಟಿ. ಕೃಷ್ಣಪ್ಪ ಪೊಲೀಸರ ವಶಕ್ಕೆ!

ಟ್ಯಾಟೂ ಹಾಕಿಸಿಕೊಂಡ ಕಿಚ್ಚನ ಪುತ್ರಿ; ಸಾನ್ವಿ ಸುದೀಪ್‌, ಏನಿದರ ಅರ್ಥ? ಎಂದ್ರು ಫ್ಯಾನ್ಸ್‌

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:1 × 5 =
Remember me
