ನವದೆಹಲಿ:ಬೆಂಗಳೂರು ಸೇರಿದಂತೆ ದೇಶದ 10 ನಗರಗಳಲ್ಲಿ ವಾಯು ಮಾಲಿನ್ಯದಿಂದ ಪ್ರತಿವರ್ಷ 33ಸಾವಿರ ಮಂದಿ ಮೃತಪಡುತ್ತಿದ್ದಾರೆ ಎಂದು ಲ್ಯಾನ್ಸೆಟ್ ಪ್ಲಾನೆಟರಿ ಹೆಲ್ತ್ ವರದಿ ಬಹಿರಂಗಪಡಿಸಿದೆ.
ಇದನ್ನೂ ಓದಿ:ನೀಟ್ ವಿರುದ್ಧ ತಮಿಳುನಾಡು ಸರ್ಕಾರದ ನಿರ್ಣಯಕ್ಕೆ ನಟ ವಿಜಯ್ ಬೆಂಬಲ!
ವರದಿಯ ಪ್ರಕಾರ, ಅಹಮದಾಬಾದ್, ಬೆಂಗಳೂರು, ಚೆನ್ನೈ, ದೆಹಲಿ, ಹೈದರಾಬಾದ್, ಕೋಲ್ಕತ್ತಾ, ಮುಂಬೈ, ಪುಣೆ, ಶಿಮ್ಲಾ ಮತ್ತು ವಾರಣಾಸಿಯಲ್ಲಿ ವಾರ್ಷಿಕ 33 ಸಾವಿರ ಸಾವುಗಳು ವಾಯು ಮಾಲಿನ್ಯದಿಂದ ಸಂಭವಿಸುತ್ತವೆ ಎಂದು ಹೇಳಲಾಗಿದೆ.
ದೇಶದ ಈ ಪ್ರಮುಖ ನಗರಗಳಲ್ಲಿ ಪಿಎಂ .2.5 ಮಟ್ಟದ ಮಾಲಿನ್ಯಕಾರಕಗಳ ಪರಿಣಾಮವನ್ನು ಅಧ್ಯಯನವು ವಿಶ್ಲೇಷಿಸಿದೆ. ವರ್ಷದ ಶೇ.99.8 ದಿನಗಳಲ್ಲಿ, ಪಿಎಂ 2.5 ಮಟ್ಟವು ಡಬ್ಲ್ಯೂಎಚ್​ಒ ನ ಸುರಕ್ಷಿತ ಮಿತಿಗಳಾದ ಪ್ರತಿ ಘನ ಮೀಟರ್‌ಗೆ 15 ಮೈಕ್ರೋಗ್ರಾಂಗಳನ್ನು ಮೀರಿದೆ ಎಂದು ಅದು ಬಹಿರಂಗಪಡಿಸಿದೆ.ಈ ಕಲುಷಿತ ಗಾಳಿ ಶ್ವಾಸಕೋಶ ಮತ್ತು ರಕ್ತಪ್ರವಾಹಕ್ಕೆ ಆಳವಾಗಿ ಪ್ರವೇಶಿಸುವ ಸಣ್ಣ ಮಾಲಿನ್ಯಕಾರಕಗಳಾಗಿವೆ ಎಂದು ಹೇಳಿದೆ.
ದೆಹಲಿಗೆ ಹೋಲಿಸಿದರೆ ಮುಂಬೈ, ಬೆಂಗಳೂರು, ಕೋಲ್ಕತ್ತಾ ಮತ್ತು ಚೆನ್ನೈನಲ್ಲಿ ವಾಯುಮಾಲಿನ್ಯ ಹೆಚ್ಚಿಲ್ಲ ಎಂದು ಹೇಳಿಕೊಂಡರೂ ಸಾವುಗಳು ದಾಖಲಾಗಿರುವುದು ದಿಗ್ಭ್ರಮೆ ಮೂಡಿಸುವಂತಿದೆ. ರಾಜ್ಯ ಸರ್ಕಾರಗಳು ಇನ್ನಾದರೂ ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡಗಳನ್ನು ಬಿಗಿಗೊಳಿಸಬೇಕಿದೆ.
ಇನ್ನು 2008-2019 ರ ನಡುವೆ ದೆಹಲಿಯಲ್ಲಿ ವಾಯು ಮಾಲಿನ್ಯ ಹೆಚ್ಚಿದೆ ಎಂದು ಕಳವಳ ವ್ಯಕ್ತಪಡಿಸಿದರು. ಇಲ್ಲಿ ವಾಯು ಮಾಲಿನ್ಯದ ಪರಿಣಾಮದಿಂದ ಪ್ರತಿ ವರ್ಷ 12 ಸಾವಿರಕ್ಕೂ ಹೆಚ್ಚು ಸಾವುಗಳು ಸಂಭವಿಸುತ್ತಿವೆ ಎಂದು ತಿಳಿದುಬಂದಿದೆ. ವಾರಣಾಸಿ, ಮುಂಬೈ, ಕೋಲ್ಕತ್ತಾ, ಚೆನ್ನೈ ಮತ್ತು ಬೆಂಗಳೂರು ನಗರಗಳು ನಂತರದ ಸ್ಥಾನಗಳಲ್ಲಿವೆ. ಶಿಮ್ಲಾದಲ್ಲಿ ಅತ್ಯಂತ ಕಡಿಮೆ ವಾಯು ಮಾಲಿನ್ಯ ದಾಖಲಾಗಿದೆ.
ಸಸ್ಟೈನಬಲ್ ಫ್ಯೂಚರ್ಸ್ ಸಹಯೋದಲ್ಲಿ ಅಶೋಕ ವಿಶ್ವವಿದ್ಯಾಲಯ, ದೀರ್ಘಕಾಲದ ರೋಗ ನಿಯಂತ್ರಣ ಕೇಂದ್ರ, ಸ್ವೀಡನ್‌ನ ಕರೋಲಿನ್ಸ್ಕಾ ಇನ್‌ಸ್ಟಿಟ್ಯೂಟ್, ಹಾರ್ವರ್ಡ್, ಬೋಸ್ಟನ್ ವಿವಿಗಳು ಮತ್ತು ಇತರ ಸಂಶೋಧಕರು ಈ ಅಧ್ಯಯನವನ್ನು ನಡೆಸಿದ್ದಾರೆ.
ದುಬೈ ಯೂಟ್ಯೂಬರ್​ ಜೊತೆ ತಮಿಳು ನಟಿ ಸುನೈನಾ ನಿಶ್ಚಿತಾರ್ಥ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + 5 =
Remember me
