ನವದೆಹಲಿ:ಮದ್ದೇ ಇಲ್ಲದ ರೋಗ ಎನ್ನಲಾಗಿರುವ ಕರೊನಾಗೆ ದೇಶದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಮದ್ದು ಕಂಡು ಹಿಡಿದಿದ್ದು, ಅದು ನಾಳೆಯೇ ಲೋಕಾರ್ಪಣೆ ಆಗಲಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ನಾಳೆ ರಾಷ್ಟ್ರ ರಾಜಧಾನಿಯಲ್ಲಿ ಈ ಔಷಧದ ಹತ್ತು ಸಾವಿರ ಪ್ಯಾಕೆಟ್​ಗಳನ್ನು ಕೆಲವು ಆಸ್ಪತ್ರೆಗಳಿಗೆ ನೀಡಲಿದ್ದಾರೆ.
ಒ2 ಡಿಜೆ ಎಂಬ ಹೆಸರಿನ ಈ ಔಷಧವು ದೇಹವನ್ನು ಸೇರಿಕೊಂಡ ವೈರಾಣುಗಳ ಬಲವನ್ನು ಕುಂದಿಸಿ, ಸೋಂಕು ಇತರ ಭಾಗಗಳಿಗೆ ಹರಡದಂತೆ ರಕ್ಷಾಕವಚ ನಿರ್ವಿುಸುತ್ತದೆ. ಈ ಔಷಧ ಬಳಸಿದ ಮೂರೇ ದಿನಗಳಲ್ಲಿ ಸೋಂಕಿತರು ಚೇತರಿಸಿಕೊಳ್ಳುವಂತೆ ಮಾಡುವ ಸಾಮರ್ಥ್ಯ ಇದಕ್ಕಿರುವುದು ಕ್ಲಿನಿಕಲ್ ಟ್ರಯಲ್​ನಲ್ಲಿ ಇದು ಸಾಬೀತಾಗಿದೆ ಎಂದು ಡಿಆರ್​ಡಿಒ ತಿಳಿಸಿದೆ.
ಒ2 ಡಿಜೆ ರೂಪ ಯಾವುದು?:ಪುಡಿಯ ರೂಪದಲ್ಲಿರುವ ಈ ಔಷಧವನ್ನು ಸೋಂಕಿತರು ಯಾವುದೇ ಭಯವಿಲ್ಲದೆ ನೀರಿನಲ್ಲಿ ಬೆರೆಸಿ ಕುಡಿಯಬಹುದು. ಇದು ಕೋವಿಡ್ ರೋಗಿಗಳು ಗುಣಮುಖರಾಗಿ ಶೀಘ್ರ ಆಸ್ಪತ್ರೆಯಿಂದ ಹೊರಬರಲು ನೆರವಾಗುತ್ತಿದೆ.
ಲಾಭಗಳೇನು?:ಈ ಔಷಧದಿಂದ ಜೀವಹಾನಿ ತಗ್ಗಲಿದೆ. ಸೋಂಕಿತರು ಮೂರೇ ದಿನದಲ್ಲಿ ಚೇತರಿಸಿಕೊಂಡರೆ ದೇಶಾದ್ಯಂತ ಆಸ್ಪತ್ರೆಗಳಲ್ಲಿ ಕಾಡುತ್ತಿರುವ ಹಾಸಿಗೆಗಳ ಕೊರತೆ ಸಮಸ್ಯೆ ಬಗೆಹರಿಯಲಿದೆ. ಎಲ್ಲ ಸೋಂಕಿತರಿಗೂ ಬೆಡ್ ಸೌಲಭ್ಯ ಸಿಗಲಿದೆ. ಆಮ್ಲಜನಕದ ಕೊರತೆ ತಗ್ಗಿ ರೋಗಿಗಳ ಚೇತರಿಕೆಗೆ ನೆರವಾಗಲಿದೆ.
ಸಾಯುವವನು ಎಲ್ಲಿ ಬೇಕಾದ್ರೂ ಸಾಯಲಿ, ನಾನು ಇಲ್ಲಿ ಕೋವಿಡ್ ಸೆಂಟರ್ ತೆರೆಯಲ್ಲ: ಬಿಜೆಪಿ ಶಾಸಕರ ಖಡಾಖಂಡಿತ ಮಾತು
ಒಂದೇ ಮನೆಯ ನಾಲ್ವರು ಕರೊನಾಗೆ ಬಲಿ; 2- 3 ದಿನಗಳ ಅಂತರದಲ್ಲಿ ಇಬ್ಬಿಬ್ಬರ ಸಾವು!
ಕರೊನಾಗೆ ಬಲಿಯಾದ ತಾಯಿಯ ಅಂತ್ಯಸಂಸ್ಕಾರದ ಬಳಿಕ ಮಗನಿಗೂ ಸಾವು!


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + fourteen =
Remember me
