ಉತ್ತರ ಪ್ರದೇಶ:ಕೋವಿಡ್​ನಿಂದ ತಾಯಿಯನ್ನು ಕಳೆದುಕೊಂಡು ಅನಾಥವಾಗಿ ಒಂದೊತ್ತಿನ ಊಟಕ್ಕೂ ಪರದಾಡುತ್ತಿದ್ದ 10 ವರ್ಷದ ಬಾಲಕನೊಬ್ಬ ರಾತ್ರೋರಾತ್ರಿ ಕೋಟ್ಯಧಿಪತಿಯಾಗಿದ್ದಾನೆ! ಕೆಲ ವರ್ಷಗಳ ಹಿಂದೆಯೇ ತಂದೆ ಮೃತಪಟ್ಟಿದ್ದರು. ಮಹಾಮಾರಿ ಕರೊನಾಗೆ ಅಮ್ಮ ಕೂಡ ಬಲಿಯಾಗಿದ್ದಳು. ಎಲ್ಲರನ್ನೂ ಕಳೆದುಕೊಂಡು ಭಿಕ್ಷೆ ಬೇಡುತ್ತಾ ದಿನದೂಡುತ್ತಿದ್ದ ಬಾಲಕ ಇದೀಗ ಕೋಟ್ಯಂತರ ಮೌಲ್ಯದ ಆಸ್ತಿಯ ಒಡೆಯ!
ದೇವರು ದಯೆ ತೋರಿದ್ರೆ ಕ್ಷಣ ಮಾತ್ರದಲ್ಲೇ ಬಡವ ಶ್ರೀಮಂತನಾಗುವ, ಆಗರ್ಭ ಶ್ರೀಮಂತ ಎಲ್ಲವನ್ನೂ ಕಳೆದುಕೊಂಡು ಭಿಕ್ಷುಕನಾಗುತ್ತಾನೆ ಎಂಬ ಮಾತು ಉತ್ತರಪ್ರದೇಶದಲ್ಲಿ ಅಕ್ಷರಶಃ ನಿಜವಾಗಿದೆ. ಆ ಬಾಲಕನ ಹೆಸರು ಶಹಜೇಬ್‌.
ಇಮ್ರಾನಾ ಎಂಬಾಕೆಗೆ ಉತ್ತರ ಪ್ರದೇಶದ ಸಹರಾನ್‌ಪುರ ಜಿಲ್ಲೆಯ ಪಾಂಡೋಲಿ ಗ್ರಾಮದ ನಾವೇದ್​ ಎಂಬುವರ ಜತೆ ಮದುವೆ ಆಗಿತ್ತು. ದಂಪತಿಗೆ ಶಹಜೇಬ್‌ ಎಂಬ ಮಗನಿದ್ದ. ಇಮ್ರಾನಾಳ ಗಂಡ 2019ರಲ್ಲಿ ಮೃತಪಟ್ಟಿದ್ದರು. ಬಳಿಕ ಅತ್ತೆ ಜತೆಗಿನ ವೈಮನಸ್ಸಿನಿಂದ ಬೇಸತ್ತು ಊರು ತೊರೆದ ಇಮ್ರಾನಾ, ಮಗನೊಂದಿಗೆ ತವರು ಮನೆ ಸೇರಿದ್ದಳು. ಮೊಬಿನ್ ಗ್ರಾಮದಲ್ಲಿ ವಾಸವಿದ್ದರು. ಸಂಬಂಧಿಕರಿಗೂ ತಾಯಿ-ಮಗ ಎಲ್ಲಿದ್ದಾರೆಂದು ತಿಳಿದಿರಲಿಲ್ಲ. ಈ ನಡುವೆ ಮಹಾಮಾರಿ ಕರೊನಾಗೆ ಕಳೆದ ವರ್ಷ ಇಮ್ರಾನಾ ಬಲಿಯಾಗಿದ್ದರು. 2021ರಲ್ಲಿ ಮಾವ ಮೊಹ್ಮದ್​ ಯಾಕೂಬ್ ಕೂಡ ಮೃತಪಟ್ಟಿದ್ದರು.
ಅಮ್ಮನನ್ನು ಕಳೆದುಕೊಂಡು ಕಂಗೆಟ್ಟ ಬಾಲಕನಿಗೆ ಸಂಕಷ್ಟದ ದಿನಗಳು ಎದುರಾಯ್ತು. ಆಟವಾಡುವ ವಯಸ್ಸಲ್ಲಿ ದಿಕ್ಕು ತೋಚದೆ ಒಂದೊತ್ತಿನ ಊಟಕ್ಕೂ ಪರದಾಡುವಂತಾಯಿತು. ಬೀದಿಬೀದಿಗಳಲ್ಲಿ ಭಿಕ್ಷೆ ಬೇಡುತ್ತಾ ಹಸಿವು ನೀಗಿಸಿಕೊಳ್ಳುತ್ತಿದ್ದ. ಹರಿದ್ವಾರದ ಪಿರನ್ ಕಲಿಯರ್ ಪವಿತ್ರ ಕ್ಷೇತ್ರದಲ್ಲಿ ಅಲೆದಾಡುತ್ತಿದ್ದ.
ಅತ್ತ 2 ವರ್ಷದ ಹಿಂದೆಯೇ ಬಾಲಕನ ಅಜ್ಜ ಮೊಹ್ಮದ್​ ಯಾಕೂಬ್​ ತೀರಿಕೊಂಡಿದ್ದರು. ಸಾಯುವ ಮುನ್ನ ತನ್ನ ಆಸ್ತಿಯಲ್ಲಿ ಅರ್ಧಭಾಗವನ್ನು ಮೊಮ್ಮಗ ಶಹಜೇಬ್​ನ ಹೆಸರಿಗೆ ವಿಲ್​(ಉಯಿಲು) ಮಾಡಿದ್ದರು. ಈ ವಿಚಾರ ಮನೆಯವರಿಗೆ ತಿಳಿದು ಬಾಲಕನಿಗಾಗಿ ಹುಡುಕಾಟ ನಡೆಸುತ್ತಿದ್ದರು. ಮನೆಯ ಸೊಸೆ ಬದುಕಿಲ್ಲ ಎಂಬ ಆಘಾತಕಾರಿ ವಿಚಾರ ತಿಳಿದು ಮರುಗಿದ್ದರು. ಮೊಮ್ಮಗ ಎಲ್ಲಿದ್ದಾನೆ ಎಂಬುದು ಯಕ್ಷ ಪ್ರಶ್ನೆಯಾಗಿತ್ತು. ಪರಿಚಯಸ್ಥರಿಗೆ ಮತ್ತು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಾಕಿ ಹುಡುಕಾಡುತ್ತಿದ್ದರು. ಇತ್ತೀಚಿಗೆ ಕಲಿಯಾರ್ ಎಂಬ ಬೀದಿಯಲ್ಲಿ ಶಹಜೇಬ್​ನನ್ನು ಸಂಬಂಧಿಕರೊಬ್ಬರು ನೋಡಿ, ಆತನ ಕಿರಿಯ ಅಜ್ಜನ ಮನೆಯವರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಡಿ.15ರಂದು ಸ್ಥಳಕ್ಕೆ ಬಂದ ಕುಟುಂಬಸ್ಥರು ಬಾಲಕನನ್ನು ಮುದ್ದಾಡಿ, ನಾವಿದ್ದೇವೆ ಹೆದರಬೇಡ. ನಿನ್ನ ತಾತನ ಕೋಟ್ಯಂತರ ಮೌಲ್ಯದ ಆಸ್ತಿ ನಿನ್ನ ಹೆಸರಲ್ಲಿದೆ ಎಂದು ಅಭಯ ನೀಡಿ ಸ್ವಗ್ರಾಮಕ್ಕೆ ಕರೆದೊಯ್ದಿದ್ದಾರೆ. ಬಾಲಕನ ಪಾಲಿಗೆ ಪೂರ್ವಜರ ಮನೆ ಮತ್ತು ಐದು ಎಕರೆ ಭೂಮಿ ಬಂದಿದೆ. (ಏಜೆನ್ಸೀಸ್​)
ದಾವಣಗೆರೆ ಮೂಲದ ನವದಂಪತಿ ಬಾಳಲ್ಲಿ ದುರಂತ: ಸ್ಟ್ರೆಚರ್​​ನಲ್ಲಿ ಮಲಗಿಕೊಂಡೇ ಶವಗಾರಕ್ಕೆ ಬಂದು ಗಂಡನ ಮುಖ ಸವರಿದ ಪತ್ನಿ… ಮನಕಲಕುತ್ತೆ ಈ ಸ್ಟೋರಿ

ರಾಮನಗರಕ್ಕೆ ನಿಖಿಲ್​ ಕುಮಾರಸ್ವಾಮಿಯೇ ಅಭ್ಯರ್ಥಿ: ಹೆಸರು ಘೋಷಿಸಿದ ಶಾಸಕಿ ಅನಿತಾ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:nineteen − two =
Remember me
