ಲೂದಿಯಾನಾ:ಮನೆಯಲ್ಲಿ ಆರ್ಥಿಕ ಸಮಸ್ಯೆ ಇದ್ದಿದ್ದರಿಂದ ಶಾಲೆಗೆ ಹೋಗಲಾಗದೇ ಎರಡನೇ ತರಗತಿಯಲ್ಲಿ ಮದ್ಯಂತರಕ್ಕೆ ಶಾಲೆ ಬಿಟ್ಟಿದ್ದ 10 ವರ್ಷದ ಪಂಜಾಬ್​ ಬಾಲಕನ ನೆರವಿಗೆ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಧಾವಿಸಿದ್ದಾರೆ.
ಲೂದಿಯಾನಾದ ಬಾಲಕ ವಂಶ್​ ಸಿಂಗ್ ಎನ್ನುವ ಬಾಲಕ ಶಾಲೆ ಬಿಟ್ಟು ಟ್ರಾಫಿಕ್ ಸಿಗ್ನಲ್​ಗಳಲ್ಲಿ ಸಾಕ್ಸ್​​ಗಳನ್ನು ಮಾರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದನ್ನು ಗಮನಿಸಿದ್ದ ಸಿಎಂ ಅಮರಿಂದರ್ ಸಿಂಗ್ ಅಧಿಕಾರಿಗಳ ಮೂಲಕ ಬಾಲಕನಿಗೆ ವಿಡಿಯೋ ಕಾಲ್ ಮಾಡಿ ಮಾತನಾಡಿದ್ದಾರೆ.
ಕೂಡಲೇ ಬಾಲಕನನ್ನು ಶಾಲೆಗೆ ದಾಖಲಿಸಿ, ಸದ್ಯ ಈ ಕರೊನಾದ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಆನ್​ಲೈನ್​ ತರಗತಿಗಳನ್ನು ಕಲಿಯಲು ಮಾಡಿ ಕೊಟ್ಟಿರುವ ಅನುಕೂಲಗಳನ್ನೂ ಈ ವಿದ್ಯಾರ್ಥಿಗೆ ನೀಡಬೇಕು ಎಂದು ಆದೇಶಿಸಿದ್ದಾರೆ. ಅಲ್ಲದೇ ಸಿಎಂ ಅವರು ತಮ್ಮ ವೈಯಕ್ತಿಕವಾಗಿ ಬಾಲಕನ ಕುಟುಂಬಕ್ಕೆ 2 ಲಕ್ಷ ರೂಪಾಯಿ ನೆರವು ನೀಡಿದ್ದಾರೆ.
Spoke on phone to young Vansh Singh, aged 10, a Class II dropout who’s video I saw selling socks at traffic crossing in Ludhiana. Have asked the DC to ensure he rejoins his school. Also announced an immediate financial assistance of Rs 2 lakhs to his family.pic.twitter.com/pnTdnftCDo
— Capt.Amarinder Singh (@capt_amarinder)May 8, 2021

ಈ ಕುರಿತು ಟ್ವಿಟ್ಟರ್​ನಲ್ಲಿ ಮಾಹಿತಿ ಹಂಚಿಕೊಂಡಿರುವ ಅಮರಿಂದರ್ ಸಿಂಗ್ ಅವರು, ಆರ್ಥಿಕ ಸಮಸ್ಯೆಯಿಂದ ಶಾಲೆ ಬಿಟ್ಟು ಬೀದಿಯಲ್ಲಿ ಸಾಕ್ಸ್​ ಮಾರುವ ಬಾಲಕನ ವಿಡಿಯೋ ಗಮನಿಸಿದ್ದು, ಇದೊಂದು ಬೇಸರದ ಸಂಗತಿಯಾಗಿದೆ. ಆ ಬಾಲಕನನ್ನು ಶಾಲೆಗೆ ಸೇರಿಸುವಂತೆ ಲೂದಿಯಾನಾ ಜಿಲ್ಲಾಧಿಕಾರಿಗೆ ಮಾತನಾಡಿದ್ದೇನೆ. ಆತನ ಕುಟುಂಬಕ್ಕೆ 2 ಲಕ್ಷ ರೂ ನೆರವು ನೀಡುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.
ಭಾರತದ ಒಳಿತಿಗಾಗಿ ‘ನಮಃ ಶಿವಾಯ’ ಜಪಿಸಿದ ಇಸ್ರೇಲ್​ ಜನರು; ವಿಡಿಯೋ ವೈರಲ್​

ಅಸ್ಸಾಂ ನೂತನ ಸಿಎಂ ಯಾರಾಗ್ತಾರೆ? ಮುಂದುವರೆದ ಕುತೂಹಲ, ಇಬ್ಬರು ನಾಯಕರಲ್ಲಿ ತೀವ್ರ ಪೈಪೋಟಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 5 =
Remember me
