ಅಸ್ಸಾಂ: ಅಸ್ಸಾಂನ ಕ್ಯಾಚ್ಯಾರ್ ಜಿಲ್ಲೆಯ ಸಂಸದ ರಾಜ್​ದೀಪ್ ರಾಯ್ ಅವರ ನಿವಾಸದಲ್ಲಿ ಮನೆಗೆಲಸದವರ ಮಗ ಶವವಾಗಿ ಪತ್ತೆಯಾಗಿದ್ದು, ತನಿಖೆ ಶುರುವಾಗಿದೆ. 10 ವರ್ಷದ ಬಾಲಕನ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಕ್ಯಾಚಾರ್ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಬ್ರತಾ ಸೇನ್ ಪಿಟಿಐಗೆ ತಿಳಿಸಿದ್ದಾರೆ.
ಮರಣೋತ್ತರ ಪರೀಕ್ಷೆಗಾಗಿ 5ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕನ ಶವವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಸಿಲ್ಚಾರ್ ವೈದ್ಯಕೀಯ ಕಾಳೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂತ್ರಸ್ತೆಯ ತಾಯಿ ಬಿಜೆಪಿ ನಾಯಕನ ಮನೆಯಲ್ಲಿ ಎರಡೂವರೆ ವರ್ಷಗಳಿಂದ ಮನೆಗೆಲಸದವಳಾಗಿ ಕೆಲಸ ಮಾಡುತ್ತಿದ್ದಳು ಮತ್ತು ಅವರು ಮೂಲತಃ ಧೋಲೈ ಪ್ರದೇಶದವರು ಎಂದು ಅವರು ಹೇಳಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಇದು ಆತ್ಮಹತ್ಯೆ ಎಂದು ಕಂಡುಬರುತ್ತಿದೆ, ವಿಡಿಯೋ ಗೇಮ್ ಆಡಲು ಮೊಬೈಲ್ ಕೇಳಿದಾಗ ತಾಯಿ ಕೊಡದಿದ್ದಕ್ಕೆ ಕೋಪಗೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದು ತಿಳಿದುಬಂದಿದೆ. ಬಾಲಕನ ತಾಯಿ ಆತನ ಸಹೋದರಿಯೊಂದಿಗೆ ದಿನಸಿ ಖರೀದಿಸಲು ಹೋಗಿದ್ದರು, ಅವರು 40 ನಿಮಿಷಗಳ ಕಾಲ ಹೊರಗಿದ್ದರು. ಆ ಸಮಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದು ತಿಳಿದುಬಂದಿದೆ.
ಈ ಬಗ್ಗೆ ಮಾತನಾಡಿದ ಕ್ಯಾಚ್ಯಾರ್ ಜಿಲ್ಲೆಯ ಸಂಸದ ರಾಜ್​ದೀಪ್ ರಾಯ್, ಬಾಲಕ ಓದಿನಲ್ಲಿ ತುಂಬಾ ಚುರುಕು, ಆತನ ಕೈಬರಹವನ್ನು ಕೂಡ ನೋಡಿದ್ದೇನೆ, ಈ ಸಾವು ನನಗೂ ನೋವು ತಂದಿದೆ, ವೈಯಕ್ತಿಕವಾಗಿ ನನಗೂ ನಷ್ಟವಾಗಿದೆ, ನಮ್ಮ ಕುಟುಂಬವು ಆತಂಕ್ಕೊಳಗಾಗಿದೆ ಎಂದಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × one =
Remember me
