ಪುಣೆ:ರಸ್ತೆಯೊಂದರಲ್ಲಿ ತನ್ನ ಅಜ್ಜಿಯ ಜತೆ ನಡೆದುಕೊಂಡು ಹೋಗುತ್ತಿದ್ದ 10 ವರ್ಷದ ಬಾಲಕಿಯೊಬ್ಬಳು ದ್ವಿಚಕ್ರ ವಾಹನದಲ್ಲಿ ಬಂದ ವ್ಯಕ್ತಿಯ ಸರಗಳ್ಳ ನ ಕಳ್ಳತನದ ಯತ್ನವನ್ನು ವಿಫಲಗೊಳಿಸಿದ್ದಾಳೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ದೂರಿನ ಪ್ರಕಾರ, ಫೆಬ್ರವರಿ 25ರಂದು ಪುಣೆ ನಗರದ ಮಾಡೆಲ್ ಕಾಲೋನಿ ಪ್ರದೇಶದಲ್ಲಿ 60 ವರ್ಷದ ವೃದ್ಧೆ ಲತಾ ಘಾಗ್ ತನ್ನ ಮೊಮ್ಮಗಳು ರುತ್ವಿ ಫಾಗ್ ಜತೆ ಮನೆಗೆ ಹಿಂದಿರುಗುತ್ತಿದ್ದಾಗ ಈ ಘಟನೆ ಸಂಭವಿಸಿದೆ.
#WATCH| A 10-year-old girl foiled an attempt by a chain snatcher to snatch her grandmother's chain in Maharashtra's Pune CityThe incident took place on February 25 & an FIR was registered yesterday after the video of the incident went viral.(CCTV visuals confirmed by police)pic.twitter.com/LnTur7pTeU— ANI (@ANI)March 10, 2023
#WATCH| A 10-year-old girl foiled an attempt by a chain snatcher to snatch her grandmother's chain in Maharashtra's Pune CityThe incident took place on February 25 & an FIR was registered yesterday after the video of the incident went viral.(CCTV visuals confirmed by police)pic.twitter.com/LnTur7pTeU
ದಾರಿ ಕೇಳುವ ನೆಪದಲ್ಲಿ ದ್ವಿಚಕ್ರ ವಾಹನದಲ್ಲಿ ಬಂದ ವ್ಯಕ್ತಿಯೊಬ್ಬ ವೃದ್ಧ ಮಹಿಳೆ ಧರಿಸಿದ್ದ ಸರ ಕಸಿದುಕೊಳ್ಳಲು ಯತ್ನಿಸಿದ್ದಾನೆ. ಇದನ್ನು ನೋಡಿದ 10 ವರ್ಷದ ರುತ್ವಿ ಘಾಗ್ ಕಳ್ಳನ ಮುಖಕ್ಕೆ ಬ್ಯಾಗ್‌ನಿಂದ ಹೊಡೆಯಲು ಆರಂಭಿಸಿದಳು. ಇದರಿಂದಾಗಿ ಶಾಕ್​ ನೀಡಲು ಬಂದವನೇ ಶಾಕ್​ ಆಗಿದ್ದು ನಂತರ ಸ್ಥಳದಿಂದ ಪರಾರಿಯಾಗಿದ್ದಾನೆ. ಹೀಗೆ ಆತನ ಸರ ಕಿತ್ತುಕೊಳ್ಳುವ ಯತ್ನ ವಿಫಲವಾಯಿತು,” ಎಂದು ದೂರಿನಲ್ಲಿ ತಿಳಿಸಲಾಗಿದೆ.
ಫೆಬ್ರವರಿ 25 ರಂದು ನಡೆದ ಘಟನೆ ಗುರುವಾರ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ವೈರಲ್ ಆದ ನಂತರ ಬೆಳಕಿಗೆ ಬಂದಿದೆ. ಪುಣೆ ಪೊಲೀಸರು ಸಂತ್ರಸ್ತೆಯನ್ನು ಭೇಟಿ ಮಾಡಿ ವಿಚಾರಣೆ ನಡೆಸಿದ್ದು ಮಾರ್ಚ್ 9ರಂದು ಶಿವಾಜಿ ನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 393 ರ ಅಡಿಯಲ್ಲಿ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + one =
Remember me
