ಮಲೇಷ್ಯಾದ 10 ವರ್ಷದ ಬಾಲಕಿಯೊಬ್ಬಳು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕೇವಲ 45.72 ಸೆಕೆಂಡ್‌ಗಳಲ್ಲಿ ಚೆಸ್ ಬೋರ್ಡ್ ಅನ್ನು ಯಶಸ್ವಿಯಾಗಿ ಜೋಡಿಸಿದ್ದು, ಚೆಸ್​​​ ಆಟವನ್ನ ಸಿಕ್ಕಾಪಟ್ಟೆ ಪ್ರೀತಿಸುತ್ತಾಳೆ ಅನ್ನೋದನ್ನ ಸಾಭೀತುಪಡಿಸಿದ್ದಾಳೆ. ಈ ನಿಟ್ಟಿನಲ್ಲಿ ಆಟದ ಮೇಲಿನ ಪ್ರೀತಿಯನ್ನು ಮುಂದಿನ ಹಂತಕ್ಕೆ ಕೊಂಡೊಯ್ದಿದ್ದಾಳೆ.
ಬಾಲಕಿ ಪುನಿತಮಲರ್ ರಾಜಶೇಖರ್ ಚೆಸ್​​ ಪಾನ್​​​ಗಳನ್ನ ಕಣ್ಣುಮುಚ್ಚಿ 45.72 ಸೆಕೆಂಡ್‌ಗಳಲ್ಲಿ ಜೋಡಿಸಿದ್ದಾಳೆ. ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಜೊತೆ ಮಾತನಾಡಿದ ಪುನಿತಮಲರ್ ರಾಜಶೇಖರ್, ನನ್ನ ತಂದೆ ನನ್ನ ತರಬೇತುದಾರ, ನಾವು ಪ್ರತಿದಿನ ಒಟ್ಟಿಗೆ ಆಡುತ್ತೇವೆ. ನಾನು ಈಗಾಗಲೇ ಕಿಡ್ಸ್ ಗಾಟ್ ಟ್ಯಾಲೆಂಟ್‌ನಂತಹ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ. ನನಗೆ ಚಿಕ್ಕ ವಯಸ್ಸಿನಲ್ಲಿಯೇ ಚೆಸ್​​ ಆಟ ಅಂದ್ರೆ ತುಂಬಾ ಇಷ್ಟ. ನನ್ನ ಉತ್ಸಾಹದ ಮೇಲೆ ನಾನು ಗಮನಹರಿಸಬೇಕು ಎಂದು ನನ್ನ ತಂದೆ ಸಲಹೆ ನೀಡಿದರು. ನಾನು ಹಲವಾರು ಶಾಲಾ ಸ್ಪರ್ಧೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದೇನೆ ಎಂದು ಹೇಳಿದ್ದಾರೆ.
ಮನುಷ್ಯರು ಈಗಾಗಲೇ ಎಲ್ಲಾ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆಗಳನ್ನ ಮಾಡುತ್ತಲೇ ಇದ್ದಾರೆ. ಒಂದು ನಾನು ದಿನ ಅಸಾಧಾರಣ ಸಾಧನೆಗಳ ಕುರಿತಂತ ಸಾಕ್ಷ್ಯ ಚಿತ್ರವೊಂದನ್ನ ವೀಕ್ಷಿಸುತ್ತಿದೆ. ಅಂದು ನಾನು ಏನಾದರೂ ಸಾಧನೆ ಮಾಡಿ ದಾಖಲೆ ಮುರಿಯಬೇಕು ಅಂದುಕೊಂಡೆ. ಅಂತೆಯೇ ನನ್ನ ಶೈಕ್ಷಣಿಕ ಆಸಕ್ತಿಯು ಗಣಿತಶಾಸ್ತ್ರದಲ್ಲಿದೆ ಮತ್ತು ಅವರು ಭವಿಷ್ಯದಲ್ಲಿ ಬಾಹ್ಯಾಕಾಶ ವಿಜ್ಞಾನಿಯಾಗಬೇಕು ಅಂದುಕೊಂಡಿದ್ದೇನೆ ಎಂದು ಪುನಿತಮಲರ್ ತಿಳಿಸಿದ್ದಾರೆ.
ಇನ್ನು ಯುವ ಚೆಸ್ ಚಾಂಪಿಯನ್ ಸ್ಪರ್ಧೆಯಲ್ಲಿಯೂ ಕಣ್ಣುಮುಚ್ಚಿ ಆಟವಾಡುವ ವಿಭಾಗದಲ್ಲಿ ಮತ್ತೊಂದು ದಾಖಲೆಯನ್ನು ಪ್ರಯತ್ನಿಸುವ ಗುರಿಯ ಬಗ್ಗೆ ಬಾಲಕಿ ತಿಳಿಸಿದ್ದಾಳೆ.
ಪುನಿತಮಲರ್ ಕೇವಲ ಚೆಸ್​​ ಮಾತ್ರವಲ್ಲದೆ ಹಲವಾರು ಶಾಲಾ ಸ್ಪರ್ಧೆ, ಕಥೆ ಹೇಳುವುದು ಮತ್ತು ಸಾರ್ವಜನಿಕ ಭಾಷಣದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + 1 =
Remember me
