ನವದೆಹಲಿ:ಭಾರತವು ಲಸಿಕೆ ಹಾಕಲು ಆರಂಭಿಸಿದ ಸುಮಾರು 9 ತಿಂಗಳಲ್ಲಿ 21 ಅಕ್ಟೋಬರ್ 2021 ರಂದು 100 ಕೋಟಿ ಡೋಸ್​ಗಳ ಲಸಿಕೆ ನೀಡಿಕೆಯನ್ನು ಪೂರ್ಣಗೊಳಿಸಿದ್ದು, ಚೀನಾ ಬಳಿಕ ಈ ಸಾಧನೆ ಮಾಡಿದ ಎರಡನೇ ಅತಿದೊಡ್ಡ ದೇಶವೆಂಬ ಹೆಗ್ಗಳಿಕೆಯನ್ನು ಭಾರತ ಹೊಂದಿದೆ. 100 ಕೋಟಿ ಡೋಸ್​ಗಳ ಲಸಿಕೆ ನೀಡಿಕೆಯನ್ನು ಪೂರೈಸಿದ ದಿನದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ್ದು, ಕರೊನಾ ವಿರುದ್ಧದ ಅಭೂತಪೂರ್ವ ಯಶಸ್ಸನ್ನು ಜನತೆಗೆ ಅರ್ಪಿಸಿದ್ದಾರೆ.
ಕರೊನಾ ವಿರುದ್ಧದ ಹೋರಾಟದಲ್ಲಿ ಭಾರತ ಯಶಸ್ವಿಯಾಗಿದ್ದು, ದೇಶಾದ್ಯಂತ 100 ಕೋಟಿ ಲಸಿಕೆಯನ್ನು ನೀಡಲಾಗಿದೆ. ಈ ಯಶಸ್ಸಿಗೆ ಕಾರಣರಾದ ಪ್ರತಿಯೊಬ್ಬ ಭಾರತೀಯನಿಗೆ ಹೃತ್ಪೂರ್ವಕ ಅಭಿನಂದನೆಗಳು. ಇಂದು ಭಾರತ ಇಡೀ ಜಗತ್ತಿಗೆ ಮಾದರಿಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಕರ್ತವ್ಯ ಪಾಲನೆಯಿಂದ ನಮಗೆ ಒಳ್ಳೆಯ ಪ್ರತಿಫಲ ಸಿಕ್ಕಿದೆ. 100 ಕೋಟಿ ಲಸಿಕೆಗಳು ಕೇವಲ ಸಂಖ್ಯೆಯಲ್ಲ, ದೇಶದ ಇತಿಹಾಸದಲ್ಲಿ ಇದೊಂದು ಹೊಸ ಅಧ್ಯಾಯದ ಆರಂಭವಾಗಿದೆ. ಭಾರತವು ಕಠಿಣ ಗುರಿಯನ್ನು ಯಶಸ್ವಿಯಾಗಿ ಸಾಧಿಸಬಹುದು ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ದೇಶವು ತನ್ನ ಗುರಿಗಳ ಈಡೇರಿಕೆಗೆ ಶ್ರಮಿಸುತ್ತಿದೆ ಎಂಬುದನ್ನು ಇದು ತೋರಿಸುತ್ತದೆ ಎಂದು ಪ್ರಧಾನಿ ಮೋದಿ ಶ್ಲಾಘಿಸಿದರು.
ಆರಂಭದಲ್ಲಿ ನಮ್ಮ ಲಸಿಕೆ ಕಾರ್ಯಕ್ರಮದ ಬಗ್ಗೆ ಆತಂಕವಿತ್ತು. ಅತಿ ಹೆಚ್ಚು ಜನಸಂಖ್ಯೆ ಇರುವ ರಾಷ್ಟ್ರದಲ್ಲಿ ಶಿಸ್ತು ಹೇಗೆ ಕೆಲಸ ಮಾಡುತ್ತದೆ ಎಂದು ತಿಳಿಯುವ ಕುತೂಹಲವಿತ್ತು. ಆದರೆ, ಭಾರತ ಕಠಿಣ ಸವಾಲನ್ನು ಇಂದು ಮೆಟ್ಟಿ ನಿಂತಿದೆ. 100 ಕೋಟಿ ಲಸಿಕೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಇದು ಪ್ರತಿಯೊಬ್ಬ ಭಾರತೀಯ ಯಶಸ್ಸು ಆಗಿದೆ. ಭಾರತದ ಲಸಿಕೆ ಅಭಿಯಾನವು ‘ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್ ಔರ್ ಸಬ್ಕಾ ಪ್ರಯಾಸ್’ನ ಜೀವಂತ ಉದಾಹರಣೆಯಾಗಿದೆ ಎಂದರು.
ವಿಐಪಿ ಸಂಸ್ಕೃತಿಯು ನಮ್ಮ ಲಸಿಕಾ ಅಭಿಯಾನದ ಮೇಲೆ ಪ್ರಭಾವ ಬೀರದಂತೆ ಖಾತ್ರಿಪಡಿಸಿದ್ದೇವೆ ಮತ್ತು ಎಲ್ಲರನ್ನೂ ಸಮಾನವಾಗಿ ಪರಿಗಣಿಸಲಾಗುತ್ತಿದೆ. ಭಾರತದ ಸಂಪೂರ್ಣ ಲಸಿಕಾ ಕಾರ್ಯಕ್ರಮವು ವಿಜ್ಞಾನ ಚಾಲಿತ ಮತ್ತು ವಿಜ್ಞಾನ ಆಧಾರಿತವಾಗಿದೆ ಎಂಬ ಅಂಶದ ಬಗ್ಗೆ ನಾವು ಹೆಮ್ಮೆ ಪಡಬೇಕು. ಇದು ಸಂಪೂರ್ಣವಾಗಿ ವೈಜ್ಞಾನಿಕ ವಿಧಾನಗಳನ್ನು ಆಧರಿಸಿದೆ ಎಂದು ಹೇಳಿದರು.
ಭಾರತ ಮತ್ತು ವಿದೇಶಗಳಲ್ಲಿನ ತಜ್ಞರು ಭಾರತದ ಆರ್ಥಿಕತೆಯ ಬಗ್ಗೆ ತುಂಬಾ ಧನಾತ್ಮಕ ಅಭಿಪ್ರಾಯ ಹೊಂದಿದ್ದಾರೆ. ಇಂದು, ಭಾರತೀಯ ಕಂಪನಿಗಳಿಗೆ ದಾಖಲೆಯ ಹೂಡಿಕೆ ಮಾತ್ರ ಬರುತ್ತಿಲ್ಲ. ಬದಲಾಗಿ ಯುವಕರಿಗೆ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ. ನಾವು ಎಲ್ಲಿ ನೋಡಿದರೂ ಈಗ ಕೇವಲ ಆಶಾವಾದವಿದೆ. ಮೊದಲು ಈ ದೇಶದಲ್ಲಿ, ಎಲ್ಲವು ಆ ದೇಶದಲ್ಲಿ ಮಾಡಲ್ಪಟ್ಟಿದೆ ಎಂಬ ಘೋಷಣೆಗಳು ಮಾತ್ರ ಇದ್ದವು, ಆದರೆ ಇಂದು ಎಲ್ಲರೂ ‘ಮೇಡ್ ಇನ್ ಇಂಡಿಯಾ’ ಬಗ್ಗೆ ಮಾತನಾಡುತ್ತಿದ್ದಾರೆ ಎನ್ನುವ ಮೂಲಕ ಪರೋಕ್ಷವಾಗಿ ಮೇಡ್​ ಇನ್​ ಚೀನಾಗೆ ಟಾಂಗ್​ ನೀಡಿದರು.
ಮುಂಬರುವ ಹಬ್ಬಗಳಲ್ಲಿ ಅತ್ಯಂತ ಎಚ್ಚರಿಕೆಯಿಂದ ಆಚರಿಸಲು ನಾನು ಎಲ್ಲರನ್ನೂ ವಿನಂತಿಸುತ್ತೇನೆ. ಕೋವಿಡ್ -19 ಲಸಿಕೆಯ ಮೊದಲ ಡೋಸ್ ತೆಗೆದುಕೊಳ್ಳದ ಎಲ್ಲರಿಗೂ ಲಸಿಕೆ ಹಾಕಲು ಹೆಚ್ಚಿನ ಆದ್ಯತೆ ನೀಡಬೇಕು ಎಂದು ನಾನು ಮನವಿ ಮಾಡುತ್ತೇನೆ. ಲಸಿಕೆ ಹಾಕಿಸಿಕೊಂಡವರು ಇತರರನ್ನು ಪ್ರೋತ್ಸಾಹಿಸಬೇಕೆಂದು ಕೇಳಿಕೊಳ್ಳುತ್ತೇನೆಂದು ಹೇಳಿದರು.(ಏಜೆನ್ಸೀಸ್​)
ಅ.30ರೊಳಗೆ ಮೀಸಲಾತಿ ವರದಿ ಪಡೆಯಿರಿ: ಪಂಚಮಸಾಲಿ ಪೀಠದಿಂದ ಸರ್ಕಾರಕ್ಕೆ ಆಗ್ರಹ

ಸಹಾಯಕ ಪ್ರಾಧ್ಯಾಪಕ ಹುದ್ದೆ ಅರ್ಜಿ ಸಲ್ಲಿಕೆ ನಿಯಮ ಸಡಿಲ

ಇಲ್ಲಿ ಎಲ್ಲರೂ ಒಂದೇ… ಯೂಟ್ಯೂಬರ್ಸ್​ ವಿರುದ್ಧ ಕೋರ್ಟ್​ ಮೆಟ್ಟಿಲೇರಿದ ಸಮಂತಾಗೆ ಬಿಗ್​ ಶಾಕ್​!

Sign in to your account
Please enter an answer in digits:3 + four =
Remember me
