ಯೂಕ್ರೇನ್ ಮೇಲೆ ರಷ್ಯಾ ದಾಳಿ ಆರಂಭಿಸಿ 100 ದಿನ ಆಗಿದೆ. ರಷ್ಯಾದ ಹಿತವನ್ನು ಕಡೆಗಣಿಸಿ ಯೂಕ್ರೇನ್ ನ್ಯಾಟೋ ಜತೆಗೆ ಸೇರುತ್ತಿರುವುದನ್ನು ಖಂಡಿಸಿ ಆರಂಭವಾದ ದಾಳಿ ಸಮರವಾಗಿ ಮಾರ್ಪಟ್ಟಿದ್ದು, ಎಷ್ಟು ಯೋಧರು ಭಾಗಿಯಾಗಿದ್ದಾರೆ, ಸಾವಿನ ಸಂಖ್ಯೆ ಎಷ್ಟು ಎಂಬಿತ್ಯಾದಿ ನಿಖರ ಮಾಹಿತಿ ಸಿಕ್ಕಿಲ್ಲ.
ಯೂಕ್ರೇನ್ ಮೇಲೆ ಫೆ.24ರಂದು ದಾಳಿ ಆರಂಭಿಸಿದ ರಷ್ಯಾಕ್ಕೆ ನಿರೀಕ್ಷೆ ಮೀರಿದ ಪ್ರತಿರೋಧ ಉಂಟಾದ ಕಾರಣ, ಗೆಲ್ಲುವುದು ಸಾಧ್ಯವಾಗಿಲ್ಲ. ಅಮೆರಿಕ ಮತ್ತು ಮಿತ್ರರಾಷ್ಟ್ರಗಳು ಸೇನಾ ನೆರವು ನೀಡುತ್ತಿರುವ ಕಾರಣ ತೀವ್ರ ಪ್ರತಿರೋಧ ತೋರುವುದು ಯೂಕ್ರೇನ್​ಗೆ ಸಾಧ್ಯವಾಗಿದೆ. ನಾಗರಿಕರ ಹತ್ಯೆ, ಮಹಿಳೆಯರ ಮೇಲೆ ಅತ್ಯಾಚಾರ, ಮಕ್ಕಳ ಶೋಷಣೆ ಕುರಿತ ವರದಿಗಳು ನಿರಂತರವಾಗಿ ಪ್ರಕಟವಾಗುತ್ತಿವೆ. ಬುಚಾದ ರಸ್ತೆಗಳಲ್ಲಿ ನಾಗರಿಕರ ಶವ ಪತ್ತೆಯಾಗುತ್ತಿದ್ದು, ಪರಿಸ್ಥಿತಿಯ ಘೋರತೆಯನ್ನು ಬಿಂಬಿಸುವಂತಿವೆ. ಮರಿಯೋಪೋಲ್, ಡಾನ್​ಬೋಸ್, ಕಿಯೇವ್ ಮತ್ತು ಇತರೆ ಪ್ರದೇಶಗಳ ಮೇಲೆ ಕ್ಷಿಪಣಿ ದಾಳಿ ಅವ್ಯಾಹತವಾಗಿವೆ.
ಸಾವಿನ ಸಂಖ್ಯೆಯ ಲೆಕ್ಕಾಚಾರ:ಕಳೆದ 100 ದಿನಗಳಲ್ಲಿ ಮೃತಪಟ್ಟವರೆಷ್ಟು, ಗಾಯಗೊಂಡವರೆಷ್ಟು ಎಂಬ ನಿಖರ ಲೆಕ್ಕ ಇಲ್ಲ. ಯೂಕ್ರೇನ್ ಮತ್ತು ರಷ್ಯಾ ಸರ್ಕಾರಗಳ ಲೆಕ್ಕ ಒಂದು ರೀತಿ ಇದ್ದರೆ, ವಿಶ್ವಸಂಸ್ಥೆಯ ಲೆಕ್ಕ ಬೇರೆಯದೇ ರೀತಿ ಇರುತ್ತದೆ. ಮರಿಯುಪೋಲ್ ಮತ್ತು ಇತರೆ ನಗರಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಹತ್ಯೆ ನಡೆದಿದೆ. ರಷ್ಯಾ ಸೇನೆ ನಾಗರಿಕರ ಹತ್ಯೆ ಮಾಡಿದ ಬಳಿಕ, ಶವಗಳನ್ನು ಸಾಮೂಹಿಕ ಸಮಾಧಿ ಮಾಡುತ್ತ ಸಾಗುತ್ತಿದೆ ಎಂಬ ಆರೋಪವೂ ಇದೆ.
ಯೂಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್​ಸ್ಕಿ ಗುರುವಾರ ಹೇಳಿದ ಪ್ರಕಾರ, ಮರಿಯುಪೋಲ್ ಒಂದರಲ್ಲೇ 21,000 ನಾಗರಿಕರು ಹತರಾಗಿದ್ದಾರೆ. ನಿತ್ಯವೂ 60 ರಿಂದ 100 ಯೂಕ್ರೇನ್ ಯೋಧರು ಹುತಾತ್ಮರಾಗುತ್ತಿದ್ದಾರೆ. 500ಕ್ಕೂ ಹೆಚ್ಚು ಯೋಧರು ಗಾಯಾಳುಗಳಾಗುತ್ತಿದ್ದಾರೆ. ರಷ್ಯಾದ 30,000 ಯೋಧರು ಮೃತಪಟ್ಟಿದ್ದಾರೆ. ರಷ್ಯಾ ನೀಡಿದ ಮಾಹಿತಿ ಪ್ರಕಾರ, ಇದುವರೆಗೆ 1,351 ಯೋಧರು ಮೃತಪಟ್ಟಿದ್ದು, 3,825 ಯೋಧರು ಗಾಯಗೊಂಡಿದ್ದಾರೆ.
ಸಮರದಿಂದಾದ ನಾಶ-ನಷ್ಟ:ಯೂಕ್ರೇನ್​ನಲ್ಲಿ ರಷ್ಯಾ ದಾಳಿಗೆ 38,000 ವಸತಿ ಸಂಕೀರ್ಣಗಳು ನಾಶವಾಗಿವೆ. 2,20,000 ಜನ ನಿರ್ಗತಿಕರಾಗಿದ್ದಾರೆ. 1900 ಶಿಕ್ಷಣ ಸಂಸ್ಥೆಗಳು ಹಾನಿಗೊಳಗಾಗಿವೆ. ಈ ಪೈಕಿ 180 ಸಂಪೂರ್ಣ ನಾಶವಾಗಿವೆ. 300 ಕಾರು, 50 ರೈಲ್ವೆ ಸೇತುವೆ, 500 ಕೈಗಾರಿಕೆ, 500 ಆಸ್ಪತ್ರೆಗಳು ಹಾನಿಗೀಡಾಗಿವೆ. ವಿಶ್ವಸಂಸ್ಥೆಯ ವರದಿ ಪ್ರಕಾರ, 68 ಲಕ್ಷ ಜನ ಊರು ಬಿಟ್ಟು ಹೋಗಿದ್ದಾರೆ. ಜಗತ್ತಿನ ಆರ್ಥಿಕತೆ ಮೇಲೆ ಪರಿಣಾಮ ಬೀರಿದೆ. ಖಾದ್ಯ ತೈಲ ಕೊರತೆ, ಇಂಧನ ಬೆಲೆ ಏರಿಕೆ, ಹಣದುಬ್ಬರ ಎಲ್ಲವೂ ಈ ಸಮರದ ಪರಿಣಾಮಗಳೇ ಆಗಿವೆ.
ಭೂಮಿ ವಶ ಮರುವಶ:ಯೂಕ್ರೇನ್ ಮೇಲೆ ದಾಳಿ ಮುಂದುವರಿಸಿರುವ ರಷ್ಯಾ, ಅನೇಕ ಪ್ರದೇಶಗಳನ್ನು ವಶಕ್ಕೆ ತೆಗೆದುಕೊಂಡಿದೆ. ಈ ನಡುವೆ, 20 ಗ್ರಾಮಗಳನ್ನು ಮರುವಶಪಡಿಸಿಕೊಂಡಿ ರುವುದಾಗಿ ಯೂಕ್ರೇನ್ ಹೇಳಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × one =
Remember me
