ನವದೆಹಲಿ:ಭಾರತ ತನ್ನ 100ನೇ ಸ್ವಾತಂತ್ರ್ಯೋತ್ಸವ ಆಚರಿಸಿಕೊಳ್ಳುವ ವೇಳೆಗೆ ದೇಶದ ಕನಿಷ್ಠ 100 ನಗರಗಳಲ್ಲಿ ಮೆಟ್ರೊ ರೈಲು ಪ್ರಯಾಣಕ್ಕೆ ಲಭ್ಯವಾಗಿರುತ್ತದೆ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಕಾರ್ಯದರ್ಶಿ ದುರ್ಗಾಶಂಕರ್ ಮಿಶ್ರ ಹೇಳಿದ್ದಾರೆ.
ಉತ್ತರಪ್ರದೇಶದ ಲಖನೌದಲ್ಲಿ ಆಜಾದಿ ಕಾ ಅಮೃತ್​ ಮಹೋತ್ಸವ್​ ಪ್ರಯುಕ್ತ ನಡೆಯುತ್ತಿರುವ ನ್ಯೂ ಇಂಡಿಯ ಅರ್ಬನ್​ ಎಕ್ಸ್​ಪೋನ ವೇದಿಕೆಯಲ್ಲಿ ಬುಧವಾರ ಮಾತನಾಡಿದ ಅವರು, ಈಗಾಗಲೇ ಆರಂಭವಾಗಿರುವ ಮತ್ತು ಮುಂದಕ್ಕೆ ಯೋಜಿಸಲಾಗಿರುವ ಯೋಜನೆಗಳಡಿ ಈ ಗುರಿ ಸಾಧಿಸಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ:ಕರೊನಾಗೆ ಬಲಿಯಾದ ನೌಕರರ ಕುಟುಂಬ ಸದಸ್ಯರಿಗೆ ರೈಲ್ವೇ ಉದ್ಯೋಗ
ಪ್ರಸ್ತುತ, ಭಾರತದ ಮೆಟ್ರೋ ಜಾಲದ ಗಾತ್ರವು ಜಾಗತಿಕವಾಗಿ ಐದನೇ ಸ್ಥಾನದಲ್ಲಿದೆ. ದೆಹಲಿ, ಕೊಲ್ಕತ, ಮುಂಬೈ, ಚೆನ್ನೈ, ಹೈದರಾಬಾದ್, ಕೊಚ್ಚಿ, ಜೈಪುರ, ಗುರುಗ್ರಾಮ್, ನೋಯ್ಡಾ, ಲಕ್ನೋ, ಬೆಂಗಳೂರು ಮತ್ತು ಇನ್ನೂ ಕೆಲವು ನಗರಗಳಲ್ಲಿ ಮಾತ್ರ ಮೆಟ್ರೋ ರೈಲುಗಳು ಕಾರ್ಯನಿರ್ವಹಿಸುತ್ತಿವೆ.
“2047ರಲ್ಲಿ ಕನಿಷ್ಠ 100 ನಗರಗಳಲ್ಲಿ ಮೆಟ್ರೋ ರೈಲುಗಳು ಓಡುತ್ತಿರುತ್ತವೆ. ಹಾಲಿ ದೇಶದಲ್ಲಿ 500 ಕಿಲೋಮೀಟರ್​ ನಷ್ಟು ಉದ್ದದ ಮೆಟ್ರೋ ಮಾರ್ಗಗಳಿವೆ. 2047 ರ ವೇಳೆಗೆ ಅದನ್ನು ನಾವು 10 ಪಟ್ಟು, ಅಂದರೆ 5 ಸಾವಿರ ಕಿಲೀಮೀಟರ್​ಗಳಿಗೆ ಹೆಚ್ಚಿಸಿರುತ್ತೇವೆ” ಎಂದು ಮಿಶ್ರ ಹೇಳಿದರು.
ಇದನ್ನೂ ಓದಿ:ಬಿಜೆಪಿಗೆ ಅಧಿಕಾರ ಕಳೆದುಕೊಳ್ಳುವ ಆತಂಕ : ಶಾಸಕ, ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ವಾಗ್ದಾಳಿ
ಕರೊನಾ ಮುಂಚೆ ಪ್ರತಿದಿನ 8.5 ಮಿಲಿಯನ್​ ಜನರು ಮೆಟ್ರೋ ಬಳಸುತ್ತಿದ್ದರು ಹಾಗೂ ಪ್ರಸ್ತುತ ಅವರ ಸಂಖ್ಯೆ 3 ರಿಂದ 3.5 ಮಿಲಿಯನ್​ಗಳಷ್ಟಿದೆ ಎಂದು ತಿಳಿಸಿದ ಅವರು, ಕರೊನಾ ಸಮಸ್ಯೆ ಪರಿಹಾರವಾದ ನಂತರ ಮೆಟ್ರೋ ರೈಲುಗಳ ನಿತ್ಯ ಪ್ರಯಾಣಿಕರ ಸಂಖ್ಯೆ ಮತ್ತೆ ಏರಲಿದ್ದು, 10 ಮಿಲಿಯನ್​ ತಲುಪಲಿದೆ ಎಂದರು.(ಏಜೆನ್ಸೀಸ್)
ತುಂಬಾ ಹೊತ್ತು ಕಂಪ್ಯೂಟರ್​ ಮುಂದೆ ಕೂತು ಕೆಲಸ ಮಾಡುತ್ತೀರಾ? ಹಾಗಿದ್ರೆ, ಈ ಉಪಯುಕ್ತ ಆಸನಗಳನ್ನು ಮಾಡಿ

ಬೆಲೆ ಏರಿಕೆ ಮಾಫಿಯ ಬಗ್ಗೆ ಮಾತಾಡಿ: ಬಿಜೆಪಿ ನಾಯಕರಿಗೆ ಎಚ್​​ಡಿಕೆ ಸವಾಲು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 2 =
Remember me
