ನವದೆಹಲಿ:ಒಡಿಶಾ ಮತ್ತು ರಾಂಚಿಯಲ್ಲಿರುವ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಧೀರಜ್ ಪ್ರಸಾದ್ ಸಾಹು ಒಡೆತನದ ಸ್ಥಳಗಳು ಮತ್ತು ಡಿಸ್ಟಿಲರಿಗಳು, ಸಂಬಂಧಿತ ಘಟಕಗಳ ಮೇಲೆ ಆದಾಯ ತೆರಿಗೆ ಇಲಾಖೆ ನಡೆಸಿದ ದಾಳಿಯಲ್ಲಿ ಇಲ್ಲಿಯವರೆಗೆ 300 ಕೋಟಿ ರೂ.ಗೂ ಅಧಿಕ ನಗದು ವಶಪಡಿಸಿಕೊಳ್ಳಲಾಗಿದೆ.
ನಾಲ್ಕನೇ ದಿನವಾದ ಶನಿವಾರವೂ ದಾಳಿ ಮುಂದುವರಿದಿದ್ದು, ಇನ್ನಷ್ಟು ನಗದು ವಶಪಡಿಸಿಕೊಳ್ಳುವ ನಿರೀಕ್ಷೆಯಿದೆ. ನೋಟು ಎಣಿಸುವ ಕಾರ್ಯ ಇನ್ನೆರಡು ದಿನ ನಡೆಯಲಿದೆ. ಚಿನ್ನಾಭರಣವೂ ಸೇರಿ ಈ ಮೊತ್ತ 500 ಕೋಟಿ ರೂ.ಗೂ ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಐಟಿ ಇಲಾಖೆ ಮೂಲಗಳು ಮಾಹಿತಿ ನೀಡಿವೆ.
ಜಾರ್ಖಂಡ್, ಪಶ್ಚಿಮ ಬಂಗಾಳ, ಒಡಿಶಾ ರಾಜ್ಯಗಳಲ್ಲಿರುವ ಒಡಿಶಾ ಮೂಲದ ಡಿಸ್ಟಿಲರಿ ಗ್ರೂಪ್​ಗಳ ಕಚೇರಿಗಳಲ್ಲಿ ಈ ದೊಡ್ಡ ಮೊತ್ತ ಪತ್ತೆಯಾಗಿದೆ. ಬೌಧ್ ಡಿಸ್ಟಿಲರಿ, ಅದರ ಅಂಗಸಂಸ್ಥೆ ಬಲದೇವ್ ಸಾಹು ಇನ್ಪಾ› ಮತ್ತು ಡಿಸ್ಟಿಲರಿ ಒಡೆತನದ ಅಕ್ಕಿ ಗಿರಣಿಯಲ್ಲಿ ಶನಿವಾರ ಶೋಧ ನಡೆಸಲಾಯಿತು. ಪತ್ತೆಯಾಗಿರುವ ನೋಟುಗಳನ್ನು ಎಣಿಸಲು ಆದಾಯ ತೆರಿಗೆ ಇಲಾಖೆಯು 40ಕ್ಕೂ ಅಧಿಕ ದೊಡ್ಡ ಮತ್ತು ಸಣ್ಣ ಯಂತ್ರಗಳನ್ನು ಬಳಸುತ್ತಿದೆ. ಎಣಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಇಲಾಖೆ ಮತ್ತು ಬ್ಯಾಂಕ್​ಗಳ ಹೆಚ್ಚಿನ ಉದ್ಯೋಗಿಗಳನ್ನು ಕರೆಸಲಾಗಿದೆ.
ಬಲಂಗೀರ್ ಜಿಲ್ಲೆಯ ವಿವಿಧೆಡೆ 100ಕ್ಕೂ ಹೆಚ್ಚು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು. ‘50 ಮಂದಿ ಹಣ ಎಣಿಕೆ ಮಾಡುತ್ತಿದ್ದಾರೆ. ವಶಪಡಿಸಿಕೊಂಡ 176 ಚೀಲಗಳ ಪೈಕಿ ಕೇವಲ 40 ಚೀಲಗಳ ಎಣಿಕೆಯಷ್ಟೇ ಮುಗಿಸಿದ್ದು, ಉಳಿದವುಗಳನ್ನು ಎಣಿಕೆ ಮಾಡಲಾಗುತ್ತಿದೆ. ವಶಪಡಿಸಿಕೊಂಡ ಹಣವನ್ನು ರಾಜ್ಯ ಸರ್ಕಾರಿ ಬ್ಯಾಂಕ್​ಗಳಿಗೆ ಸಾಗಿಸಲು ಹೆಚ್ಚಿನ ವಾಹನಗಳನ್ನು ಇಲಾಖೆಯು ಕೇಳಿದೆ ಎಂದು ಬಲಂಗೀರ್ ಎಸ್​ಬಿಐನ ಪ್ರಾದೇಶಿಕ ವ್ಯವಸ್ಥಾಪಕ ಭಗತ್ ಬೆಹೆರಾ ತಿಳಿಸಿದ್ದಾರೆ.
ಇತಿಹಾಸದಲ್ಲೇ ಅತಿ ಹೆಚ್ಚುದೇಶದಲ್ಲೇ ಒಂದೇ ಕಾರ್ಯಾಚರಣೆಯಲ್ಲಿ ಇಷ್ಟೊಂದು ಅಕ್ರಮ ನಗದು ಮೊದಲ ಬಾರಿ ವಶಪಡಿಸಿಕೊಳ್ಳಲಾಗಿದೆ. ನಗದು ಮಾತ್ರವಲ್ಲದೇ ದಾಳಿಯಲ್ಲಿ 3 ಸೂಟ್​ಕೇಸ್​ನಷ್ಟು ಚಿನ್ನಾಭರಣ ಪತ್ತೆಯಾಗಿದೆ. ಬಲಂಗೀರ್ ಜಿಲ್ಲೆಯ ಕಂಪನಿಯಲ್ಲಿ ಇರಿಸಲಾಗಿದ್ದ 8-10 ಕಪಾಟುಗಳಿಂದ ಸುಮಾರು 230 ಕೋಟಿ ರೂಪಾಯಿ ನಗದನ್ನು ವಶಪಡಿಸಿ ಕೊಳ್ಳಲಾಗಿದ್ದು, ಉಳಿದವುಗಳನ್ನು ತಿತ್ಲಗಢ್, ಸಂಬಲ್ಪುರ್ ಮತ್ತು ರಾಂಚಿಯ ಸ್ಥಳಗಳಿಂದ ವಶಪಡಿಸಿಕೊಳ್ಳಲಾಗಿದೆ ಎನ್ನಲಾಗಿದೆ.
ಐಟಿ ಭರ್ಜರಿ ಬೇಟೆ, 3 ದಿನ ಕಳೆದ್ರೂ ಮುಗಿದಿಲ್ಲ ನೋಟು ಎಣಿಕೆ! 290 ಅಲ್ಲ 500 ಕೋಟಿ ರೂ. ದಾಟಲಿದೆಯಂತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + 4 =
Remember me
