ಲಖನೌ: ಸೋನಾಭದ್ರಾದಲ್ಲಿ ಸರ್ಕಾರ ಚಿನ್ನದ ನಿಕ್ಷೇಪಕ್ಕಿಂತಲೂ ಹೆಚ್ಚಿನದನ್ನು, ಅಮೂಲ್ಯವಾದುನ್ನು ನಿರೀಕ್ಷಿಸುತ್ತಿದೆ ಸರಕಾರ. ಸೋನಾಭದ್ರಾದ ಎರಡು ಗ್ರಾಮಗಳ ವ್ಯಾಪ್ತಿಯಲ್ಲಿ ಮೂರು ಸಾವಿರಕ್ಕೂ ಹೆಚ್ಚು ಟನ್ ಚಿನ್ನದ ನಿಕ್ಷೇಪ ಖಾತ್ರಿಯಾಗಿದ್ದು, ಈ ಬಗ್ಗೆ ಜನರ ಗಮನಸೆಳೆದಿರುವಾಗಲೇ ಯುರೇನಿಯಂ ನಿಕ್ಷೇಪದ ವಿಚಾರ ಬಹಿರಂಗವಾಗಿದೆ.
ಇದನ್ನೂ ಓದಿ:ಸೋನಾಭದ್ರ ಚಿನ್ನದ ನಿಕ್ಷೇಪದ ಮೌಲ್ಯ ನಮ್ಮ ದೇಶದ ಮೀಸಲು ಚಿನ್ನದ ಪ್ರಮಾಣಕ್ಕಿಂತ 5-6 ಪಟ್ಟು!
ಸೋನಾಭದ್ರಾದ ಲಿಲಾಸಿ-ಸಂಗೋಬಂಧ್ ದಾರಿ ಮಧ್ಯೆ ಸಿಗುವ ಕುದ್ರಿ ಬೆಟ್ಟದಲ್ಲಿ ಯುರೇನಿಯಂ ನಿಕ್ಷೇಪ ಇದೆ ಎಂಬ ಮಾಹಿತಿ ಇದೆ. ಇದಕ್ಕೆ ಸಂಬಂಧಿಸಿ ಬೆಟ್ಟದ ಮೂರು ಪ್ರದೇಶಗಳಲ್ಲಿ ಉತ್ಖನನ ಆರಂಭವಾಗಿದೆ. ಇದಕ್ಕೆ ಹೊರತಾಗಿ ಮೂರು ರಾಜ್ಯಗಳ ಗಡಿಭಾಗದ ಜಿಲ್ಲೆಗಳಲ್ಲೂ ಈ ಬಗ್ಗೆ ಸರ್ವೇಕ್ಷಣೆ ನಡೆದಿದೆ.
ದೆಹಲಿಯಲ್ಲಿರುವ ಸೆಂಟ್ರಲ್ ಅಟೋಮಿಕ್ ಎನರ್ಜಿ ಡಿಪಾರ್ಟ್​ಮೆಂಟ್​ನ ತಂಡ ಛತ್ತೀಸ್​ಗಢ, ಮಧ್ಯಪ್ರದೇಶ, ಬಿಹಾರ ರಾಜ್ಯಗಳಲ್ಲಿ ಈ ಸೋನಾಭದ್ರ ಜಿಲ್ಲೆಯ ನೆರೆಭಾಗದಲ್ಲಿ ಯುರೇನಿಯಂ ಪತ್ತೆಗೆ ಶೋಧಕಾರ್ಯ ಮುಂದುವರಿಸಿದೆ. ಇದಕ್ಕಾಗಿ ಈ ತಂಡ ಹೆಲಿಕಾಪ್ಟರ್​ನಲ್ಲಿ ಏರೋ ಮ್ಯಾಗ್ನೆಟಿಕ್ ಸಿಸ್ಟಂ ಬಳಕೆ ಮಾಡಿದ್ದು, ಇದರಲ್ಲಿ ಸಿಕ್ಕ ಮಾಹಿತಿ ಪ್ರಕಾರ ಕುದ್ರಿಯಲ್ಲಿ 100 ಟನ್​ ಯುರೇನಿಯಂ ನಿಕ್ಷೇಪವನ್ನು ನಿರೀಕ್ಷಿಸಲಾಗುತ್ತಿದೆ. ಯುರೇನಿಯಂ ಒಂದು ಕಿಲೋ ಇದ್ದರೆ 24 ಮೆಗಾವಾಟ್​ ವಿದ್ಯುತ್ ಉತ್ಪಾದಿಸಬಹುದು.
ಇದನ್ನೂ ಓದಿ:ಸೋನಾಭದ್ರ ಆಯಿತು, ಲಲಿತಪುರದಲ್ಲೂ ಚಿನ್ನದ ನಿಕ್ಷೇಪವಿದೆಯಂತೆ!: ನೆಲಮಟ್ಟದಿಂದ ಒಂದು ಮೀಟರ್ ಆಳದಲ್ಲಿ ಲಭ್ಯವಿದೆಯಂತೆ ಚಿನ್ನ, ಪ್ಲಾಟಿನಂ!
ಅಸ್ತಿತ್ವ ಕಳೆದುಕೊಳ್ಳುವ ಭೀತಿಯಲ್ಲಿದೆ ಬೆಟ್ಟ: ಒಂದೊಮ್ಮೆ ಇಲ್ಲಿ ಚಿನ್ನ, ಯುರೇನಿಯಂ ಮತ್ತು ಇತರೆ ಖನಿಜಗಳ ನಿಕ್ಷೇಪ ಉತ್ಖನನ ಶುರುವಾದರೆ ಕುದ್ರಿ ಬೆಟ್ಟ ಅಸ್ತಿತ್ವ ಕಳೆದುಕೊಳ್ಳಲಿದೆ. ಸುತ್ತಮುತ್ತಲಿನ ಗ್ರಾಮಗಳ ಜನರನ್ನು ಸ್ಥಳಾಂತರಿಸಬಹುದು. ಹಲವು ರೀತಿಯ ಆತಂಕ ಈಗ ಅಲ್ಲಿನ ಜನರನ್ನು ಕಾಡತೊಡಗಿದೆ. (ಏಜೆನ್ಸೀಸ್)
ಸೋನಾಭದ್ರ ಚಿನ್ನದ ನಿಕ್ಷೇಪದ ಕಾವಲಿಗೆ ಜಗತ್ತಿನಲ್ಲೇ ಅತಿ ಹೆಚ್ಚು ವಿಷ ಹೊಂದಿರುವ ಸರ್ಪಗಳಿವೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 16 =
Remember me
