ವಿಜಯವಾಡ:ಮನೆಗೆ ಬಂದ ಅಳಿಯನಿಗೆ ಅತ್ತೆ-ಮಾವಂದಿರು ವಿಶೇಷ ಮನ್ನಣೆ ನೀಡುವುದು ಸಾಮಾನ್ಯ ಸಂಗತಿ. ಆದರೆ, ಆಂಧ್ರಪ್ರದೇಶದಲ್ಲಿ ಬಹಳ ಹಿಂದಿನಿಂದ ಒಂದು ವಿಶೇಷ ಸಂಪ್ರದಾಯ ನಡೆದುಕೊಂಡು ಬರುತ್ತಿದೆ. ಅದೇನೆಂದರೆ, ಮದುವೆಯಾಗಿ ಮೊದಲ ಬಾರಿಗೆ ಮನೆಗೆ ಬಂದ ಅಳಿಯನಿಗೆ ವಿವಿಧ ಬಗೆಯ ಭಕ್ಷ್ಯಗಳನ್ನು ತಯಾರಿಸಿ ಉಣಬಡಿಸುವುದು.
ಆಂಧ್ರದ ಗೋದಾವರಿ ಜಿಲ್ಲೆಯಲ್ಲಿ ಇಂತಹ ಆಚರಣೆಗಳು ಹೆಚ್ಚಾಗಿ ಕಂಡುಬರುತ್ತವೆ. ಇದೀಗ ಕಾಕಿನಾಡದಲ್ಲಿ ಮನೆಗೆ ಬಂದ ಹೊಸ ಅಳಿಯನಿಗೆ ಅತ್ತೆ 100 ಬಗೆಯ ಖಾದ್ಯಗಳನ್ನು ತಯಾರಿಸಿ ಬಡಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.
ವಿವರಣೆಗೆ ಬರುವುದಾದರೆ, ಕಾಕಿನಾಡ ಜಿಲ್ಲೆಯ ಕಿರ್ಲಂಪುಡಿ ಮಂಡಲದ ತಾಮರದ ಗ್ರಾಮದ ರತ್ನಕುಮಾರಿ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕಾಕಿನಾಡ ನಗರದ ರವಿತೇಜ ಅವರನ್ನು ವಿವಾಹವಾಗಿದ್ದರು. ಆದರೆ, ಮದುವೆಯ ನಂತರ ಆಷಾಢ ಮಾಸ ಮುಗಿದು ಅಳಿಯ ಮೊದಲಬಾರಿಗೆ ಅತ್ತೆಯ ಮನೆಗೆ ಬಂದಾಗ ಅತ್ತೆಯು ತನ್ನ ಅಳಿಯನಿಗೆ ಭರ್ಜರಿ ಊಟವನ್ನು ಸಿದ್ಧಪಡಿಸಿದರು.
ಬರೋಬ್ಬರಿ ನೂರು ಬಗೆಯ ತಿನಿಸುಗಳನ್ನು ಅಳಿಯನ ಮುಂದೆ ಉಣಬಡಿಸಲಾಗಿತ್ತು. ತನ್ನ ಮುಂದೆ ವಿವಿಧ ಖಾದ್ಯಗಳನ್ನು ನೋಡಿದ ಅಳಿಯ ಯಾವುದನ್ನು ತಿನ್ನುವುದು ಮತ್ತು ಯಾವುದನ್ನು ಬಿಡುವುದು ಎಂಬ ಗೊಂದಲಕ್ಕೆ ಒಳಗಾದರು. ಅಲ್ಲದೆ, ತನ್ನ ಅತ್ತೆ ತನಗಾಗಿ ವಿವಿಧ ಬಗೆಯ ಅಡುವೆ ಮಾಡಿದಕ್ಕೆ ಹರ್ಷ ವ್ಯಕ್ತಪಡಿಸಿದರು. ಇದೀಗ ಈ ಘಟನೆಯ ವಿಡಿಯೋ ವೈರಲ್ ಆಗಿದೆ. (ಏಜೆನ್ಸೀಸ್​)
100 రకాల పిండి వంటలతో అల్లుడికి మర్యాద
ఆషాడం ముగిసిన తర్వాత తొలిసారి ఇంటికి వచ్చిన అల్లుడికి 100 రకాల పిండి వంటలు చేసి పెట్టిన అత్తామామలు
కాకినాడ జిల్లా కిర్లంపూడి మండలం తామరాడ గ్రామానికి చెందిన రత్నకుమారికి కాకినాడకు చెందిన రవితేజకు గత ఏడాది సెప్టెంబర్‌లో వివాహం జరిగింది.…pic.twitter.com/fNx5Q6KlkC
— Telugu Scribe (@TeluguScribe)August 11, 2024

ಈ ವಿಚಾರದಲ್ಲಿ ವಿರಾಟ್​ ಕೊಹ್ಲಿಯನ್ನು ಬಿಟ್ಟುಕೊಡುವ ಮಾತೇ ಇಲ್ಲ! ದಿನೇಶ್​ ಕಾರ್ತಿಕ್​ ಅಚ್ಚರಿ ಹೇಳಿಕೆ

ಅಂಬಾನಿ ಕುಟುಂಬದ ಬಳಿಯಿದೆ ದೇಶದ ಜಿಡಿಪಿಯ ಶೇ. 10 ರಷ್ಟು ಸಂಪತ್ತು! ಒಟ್ಟು ಆಸ್ತಿ ಮೌಲ್ಯ ಕೇಳಿದ್ರೆ ಹುಬ್ಬೇರುತ್ತೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:four + four =
Remember me
