ನವದೆಹಲಿ:ಬಿಪರ್​ಜಾಯ್​ ಚಂಡಮಾರುತದಿಂದಾಗಿ ಗುಜರಾತ್​ನಲ್ಲಿ ಇಬ್ಬರು ಪ್ರಾಣ ಕಳೆದುಕೊಂಡಿದ್ದು, 22 ಮಂದಿ ಗಾಯಗೊಂಡಿದ್ದಾರೆ. ರಾಜ್ಯಾದ್ಯಂತ ಸಾಕಷ್ಟು ಮರಗಳು ಧರೆಗುರುಳಿವೆ. ವಾಹನಗಳು ಮತ್ತು ಮನೆಗಳಿಗೆ ಹಾನಿಯಾಗಿವೆ. ಚಂಡಮಾರುತ ಇಂದು ರಾಜಸ್ಥಾನಕ್ಕೆ ಕಾಲಿಡಲಿದ್ದು, ವಾಯುಭಾರ ಕುಸಿತವಾಗಿ ದುರ್ಬಲಗೊಳ್ಳುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬಿಪರ್‌ಜಾಯ್​ ಇಂದು ಕ್ರಮೇಣ ದುರ್ಬಲಗೊಳ್ಳುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತನ್ನ ಇತ್ತೀಚಿನ ಪ್ರಕಟಣೆಯಲ್ಲಿ ತಿಳಿಸಿದೆ. ಗುಜರಾತಿನ ವಿವಿಧ ಸ್ಥಳಗಳಲ್ಲಿ 524ಕ್ಕೂ ಹೆಚ್ಚು ಮರಗಳು ಮತ್ತು ವಿದ್ಯುತ್ ಕಂಬಗಳು ಚಂಡಮಾರುತದಿಂದಾಗಿ ನೆಲಸಮವಾಗಿದ್ದು, ಸುಮಾರು 1,000 ಹಳ್ಳಿಗಳಿಗೆ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಭಾವನಗರ ಜಿಲ್ಲೆಯಲ್ಲಿ ಸಿಕ್ಕಿಬಿದ್ದ ಮೇಕೆಗಳನ್ನು ರಕ್ಷಿಸುವ ಪ್ರಯತ್ನದಲ್ಲಿ ತಂದೆ ಮತ್ತು ಅವರ ಮಗ ಸಾವನ್ನಪ್ಪಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಇದನ್ನು ಓದಿ:ಸಾರ್ವಜನಿಕ ಪ್ರದೇಶಗಳಲ್ಲಿ ನಮಾಜ್ ಮಾಡುವಂತಿಲ್ಲ, ಹೊಸ ಮಸೂದೆ ತರಲು ಮುಂದಾಗಿದೆ ಈ ದೇಶ…
10 ದಿನಗಳಿಗೂ ಹೆಚ್ಚು ಕಾಲ ಅರೇಬಿಯನ್ ಸಮುದ್ರದಾದ್ಯಂತ ಸುಳಿದಾಡಿದ ಬಿಪರ್​ಜಾಯ್​ ಚಂಡಮಾರುತ, ಗುರುವಾರ ಸಂಜೆ ಗುಜರಾತ್‌ನ ಜಖೌ ಬಂದರಿನ ಬಳಿ 125 ಕಿ.ಮೀಟರ್​ನಿಂದ 140 ಕಿ.ಮೀಟರ್​ ವೇಗದಲ್ಲಿ ಭೂ ಪ್ರದೇಶಕ್ಕೆ ಅಪ್ಪಳಿಸುವ ಮೂಲಕ ಭೂಕುಸಿತವನ್ನು ಉಂಟುಮಾಡಿತು. ಇದೀಗ ಬಿಪರ್​ಜಾಯ್​ ಚಂಡಮಾರುತವು ವಾಯುವ್ಯ ಕಡೆಗೆ ಚಲಿಸುತ್ತಿರುವುದರಿಂದ ಜೂನ್ 16 ಮತ್ತು 17 ರಂದು ರಾಜಸ್ಥಾನದಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆಯ ಮಹಾನಿರ್ದೇಶಕ ಡಾ ಮೃತ್ಯುಂಜಯ್ ಮೊಹಾಪಾತ್ರ ಹೇಳಿದ್ದಾರೆ.
ಹೆಚ್ಚಿನ ವೇಗದ ಗಾಳಿ, ಉಬ್ಬರವಿಳಿತ ಮತ್ತು ಭಾರೀ ಮಳೆಯಿಂದಾಗಿ ತಾತ್ಕಾಲಿಕ ವಸತಿ ರಚನೆಗಳಿಗೆ ವ್ಯಾಪಕ ಹಾನಿ ಮತ್ತು ಮರಗಳು ಮತ್ತು ಕೊಂಬೆಗಳು ಬೀಳುವ ಬಗ್ಗೆ ಎಚ್ಚರಿಕೆಗಳನ್ನು ಈಗಾಗಲೇ ಹವಾಮಾನ ಇಲಾಖೆ ನೀಡಿದೆ. ಇಂದು ಬೆಳಗ್ಗೆ ಪ್ರಧಾನಿ ಮೋದಿ ಗುಜರಾತ್​ ಸಿಎಂ ಭೂಪೇಂದ್ರ ಪಟೇಲ್​ ಅವರೊಂದಿಗೆ ಮಾತನಾಡಿ ವಸ್ತು ಸ್ಥಿತಿಯ ಮಾಹಿತಿಯನ್ನು ಪಡದದುಕೊಂಡಿದ್ದಾರೆ. ಗಿರ್​ ಅರಣ್ಯದಲ್ಲಿ ಸಿಂಹಗಳು ಸೇರಿದಂತೆ ಪ್ರಾಣಿಗಳ ಸುರಕ್ಷತೆಗೆ ತೆಗೆದುಕೊಂಡ ಕ್ರಮಗಳ ಬಗ್ಗೆ ವಿಚಾರಿಸಿದ್ದಾರೆ.
ಇದುವರೆಗೂ 94 ಸಾವಿರ ಮಂದಿಯನ್ನು ಕರಾವಳಿ ಪ್ರದೇಶದಿಂದ ಸ್ಥಳಾಂತರ ಮಾಡಿರುವುದಾಗಿ ಗುಜರಾತ್​ ಸರ್ಕಾರ ಮಾಹಿತಿ ನೀಡಿದೆ. ರೈಲು ಸಂಚಾರಗಳ ಮೇಲೂ ಸೈಕ್ಲೋನ್​ ಪರಿಣಾಮ ಬೀರಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್​ಡಿಆರ್​ಎಫ್​)ಯ 8 ತಂಡಗಳು, ರಾಜ್ಯ ವಿಪತ್ತು ನಿರ್ವಹಣಾ ಪಡೆಯ 12 ತಂಡಗಳು, ರಾಜ್ಯ ರಸ್ತೆ ಮತ್ತು ಕಟ್ಟಡ ಇಲಾಖೆಯ 115 ತಂಡ ಮತ್ತು ರಾಜ್ಯ ವಿದ್ಯುತ್​ ಇಲಾಖೆಯ 397 ತಂಡ ಕರಾವಳಿ ಜಿಲ್ಲೆಗಳಲ್ಲಿ ಬೀಡುಬಿಟ್ಟಿದ್ದು, ರಕ್ಷಣಾ ಕಾರ್ಯದಲ್ಲಿ ನಿರತರಾಗಿವೆ.
ಇದನ್ನೂ ಓದಿ:ಸಾವರ್ಕರ್ ಮತ್ತು ಹೆಡ್ಗೆವಾರ್​ ಪಠ್ಯ ವಿವಾದ: ಮಹಾರಾಷ್ಟ್ರ ಡಿಸಿಎಂ ಫಡ್ನವೀಸ್ ವಾಗ್ದಾಳಿ
ಮೀನುಗಾರಿಕಾ ಚಟುವಟಿಕೆಯನ್ನು ನಾಳೆಯವರೆಗೆ ರದ್ದು ಮಾಡಲಾಗಿದೆ. ಯಾವುದೇ ದೋಣಿಗಳನ್ನು ಸಮುದ್ರಕ್ಕೆ ಇಳಿಸದಂತೆ ಖಡಕ್​ ಸೂಚನೆ ನೀಡಲಾಗಿದೆ. ದೇವಭೂಮಿ ದ್ವಾರಕಾದಲ್ಲಿರುವ ದ್ವಾರಕಾಧೀಶ್ ದೇವಾಲಯ ಮತ್ತು ಗಿರ್ ಸೋಮನಾಥ ಜಿಲ್ಲೆಯ ಸೋಮನಾಥ ದೇವಾಲಯವನ್ನು ಮುಚ್ಚಲಾಗಿದೆ.
ಬೆಂಗಾಲಿ ಭಾಷೆಯಲ್ಲಿ ಬಿಪರ್​ಜಾಯ್ ಎಂದರೆ ವಿಪತ್ತು ಎಂದರ್ಥ. ಈ ಚಂಡಮಾರುತ ಹೆಚ್ಚು ಶಕ್ತಿಯುತವಾಗಿರುವ ಕಾರಣ ಬಿಪರ್​ಜಾಯ್ (ವಿಪತ್ತು) ಎಂದು ನಾಮಕರಣ ಮಾಡಲಾಗಿದೆ.(ಏಜೆನ್ಸೀಸ್​)
ಸಾರ್ವಜನಿಕ ಪ್ರದೇಶಗಳಲ್ಲಿ ನಮಾಜ್ ಮಾಡುವಂತಿಲ್ಲ, ಹೊಸ ಮಸೂದೆ ತರಲು ಮುಂದಾಗಿದೆ ಈ ದೇಶ…

ಸಾವರ್ಕರ್ ಮತ್ತು ಹೆಡ್ಗೆವಾರ್​ ಪಠ್ಯ ವಿವಾದ: ಮಹಾರಾಷ್ಟ್ರ ಡಿಸಿಎಂ ಫಡ್ನವೀಸ್ ವಾಗ್ದಾಳಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × one =
Remember me
