ನವದೆಹಲಿ:ಬ್ಯಾಂಕ್​ಗಳು ಕಳೆದ ಐದು ಹಣಕಾಸು ವರ್ಷಗಳಲ್ಲಿ 10,09,511 ಕೋಟಿ ರೂ. ಸುಸ್ತಿಸಾಲವನ್ನು ರೈಟ್ ಆಫ್ (ಸಾಲದ ಲೆಕ್ಕವನ್ನು ತಾಂತ್ರಿಕವಾಗಿ ಕಡತದಿಂದ ಹೊರಗಿಡುವುದು) ಮಾಡಿವೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿಗೆ ಮಂಗಳವಾರ ತಿಳಿಸಿದರು.
ಬ್ಯಾಲೆನ್ಸ್ ಶೀಟ್ ಸ್ವಚ್ಛಗೊಳಿಸಲು, ತೆರಿಗೆ ಪ್ರ್ರೊಜನ ಪಡೆಯಲು ಮತ್ತು ಬಂಡವಾಳವನ್ನು ಉತ್ತಮವಾಗಿಸಿಕೊಳ್ಳಲು ನಿಯಮಿತ ಪ್ರಕ್ರಿಯೆ ಭಾಗವಾಗಿ ಬ್ಯಾಂಕ್​ಗಳು ಅನುತ್ಪಾದಕ ಆಸ್ತಿ (ಎನ್​ಪಿಎ) ಗಳನ್ನು ರೈಟ್ ಆಫ್ ಮಾಡುತ್ತವೆ ಎಂದು ಅವರು ರಾಜ್ಯಸಭೆಯಲ್ಲಿ ಹೇಳಿದರು. ಸಾಲಗಳು ರೈಟ್ ಆಫ್ ಆದರೂ ಸಾಲಗಾರರು ಮರುಪಾವತಿಸುವ ಜವಾಬ್ದಾರಿ ಹೊಂದಿರುತ್ತಾರೆ. ಸಾಲ ವಸೂಲಾತಿ ಟ್ರಿಬ್ಯುನಲ್​ಗಳಲ್ಲಿ ಹಾಗೂ ದಿವಾಳಿತನ ಕಾಯ್ದೆ ಅನ್ವಯ ಪ್ರಕರಣ ದಾಖಲಿಸುವುದು ಹಾಗೂ ಎನ್​ಪಿಎ ಮಾರಾಟ ಮೂಲಕ ಕ್ರಮ ಕೈಗೊಳ್ಳುವುದನ್ನು ಬ್ಯಾಂಕ್ ಮುಂದುವರಿಸುತ್ತವೆ. ರೈಟ್ ಆಫ್ ಮಾಡಿದ ಸಾಲದ ಖಾತೆಗಳಿಗೆ ಸಂಬಂಧಿಸಿದಂತೆ ಕಳೆದ ಐದು ವರ್ಷಗಳಲ್ಲಿ ಬ್ಯಾಂಕುಗಳು 1,32,036 ಕೋಟಿ ರೂ. ವಸೂಲಾತಿ ಮಾಡಿವೆ ಎಂದೂ ಅವರು ತಿಳಿಸಿದರು.
ಸರ್ಕಾರದ ಪರಿಹಾರ ನಿಧಿಗೆ ಸಿಎಸ್​ಆರ್ ಫಂಡ್: ಕೇಂದ್ರ ಸರ್ಕಾರದ ವಿವಿಧ ಪರಿಹಾರ ನಿಧಿಗಳಿಗೆ ಕಾರ್ಪೆರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್​ಆರ್) ಫಂಡ್ ನೀಡುವ ನಿರ್ಧಾರವನ್ನು ಹಿಂದಿನ ಯುಪಿಎ ಸರ್ಕಾರವು 2013ರಲ್ಲಿ ತೆಗೆದುಕೊಂಡಿತ್ತು ಎಂದು ನಿರ್ಮಲಾ ಸೀತಾರಾಮನ್ ರಾಜ್ಯ ಸಭೆಗೆ ತಿಳಿಸಿದರು.
16 ಲಕ್ಷಕ್ಕೂ ಹೆಚ್ಚು ಸೈಬರ್ ಕ್ರೖೆಂ:ಸಾಮಾಜಿಕ ಮಾಧ್ಯಮಗಳ ಬಳಕೆಯಿಂದ ಭಯೋತ್ಪಾದನೆ ಹರಡುವ ಸಾಧ್ಯತೆಗಳು ಹಿಂದೆಂದಿಗಿಂತಲೂ ಹೆಚ್ಚಾಗಿದೆ ಎಂದ ಸಚಿವ ನಿತ್ಯಾನಂದ ರೈ, ಕಳೆದ ಮೂರು ವರ್ಷಗಳಲ್ಲಿ ದೇಶದಲ್ಲಿ 16 ಲಕ್ಷಕ್ಕೂ ಹೆಚ್ಚು ಸೈಬರ್ ಕ್ರೖೆಂ ಪ್ರಕರಣಗಳು ವರದಿಯಾಗಿದ್ದು, 32 ಸಾವಿರಕ್ಕೂ ಹೆಚ್ಚು ಎಫ್​ಐಆರ್​ಗಳು ದಾಖಲಾಗಿವೆ ಎಂದರು.
ಡಿಜಿಟಲ್ ಆಸ್ತಿಯಿಂದ 60.46 ಕೋಟಿ ರೂ. ತೆರಿಗೆ:ಟಿಡಿಎಸ್ ನಿಬಂಧನೆ ಪರಿಚಯಿಸಿದಾಗಿನಿಂದ ವರ್ಚುವಲ್ ಡಿಜಿಟಲ್ ಆಸ್ತಿಗಳ ವಹಿವಾಟಿನಿಂದ 60.46 ಕೋಟಿ ರೂ. ತೆರಿಗೆ ಸ್ವೀಕರಿಸಲಾಗಿದೆ ಎಂದು ವಿತ್ತ ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ತಿಳಿಸಿದ್ದಾರೆ.
ಹುತಾತ್ಮರಿಗೆ ನಮನ:21 ವರ್ಷಗಳ ಹಿಂದೆ ಸಂಸತ್ತಿನ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದವರಿಗೆ ಉಪರಾಷ್ಟ್ರಪತಿ ಜಗದೀಪ್ ಧನಕರ್, ಪ್ರಧಾನಿ ನರೇಂದ್ರ ಮೋದಿ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಸಚಿವರು, ವಿರೋಧ ಪಕ್ಷಗಳ ಸಂಸದರು ಮಂಗಳವಾರ ಶ್ರದ್ಧಾಂಜಲಿ ಸಲ್ಲಿಸಿದರು.
ಕರ್ನಾಟಕದ 38 ಕ್ಲೇಮ್ ಪಾವತಿ:ಕೋವಿಡ್ ವಿರುದ್ಧ ಹೋರಾಡುತ್ತಿರುವ ಆರೋಗ್ಯ ಕಾರ್ಯಕರ್ತರಿಗೆ ವಿಮಾ ಯೋಜನೆಯಡಿ ತಲಾ 50 ಲಕ್ಷ ರೂ.ಗಳ 2,302 ಕ್ಲೇಮ್ಳು ಹಾಗೂ ಕರ್ನಾಟಕದ 38 ಸೇರಿದಂತೆ ವಿವಿಧ ರಾಜ್ಯಗಳ 465 ವೈದ್ಯರ ಕುಟುಂಬಗಳಿಗೆ ಕ್ಲೇಮ್ ಪಾವತಿಸಲಾಗಿದೆ ಎಂದು ಆರೋಗ್ಯ ಖಾತೆಯ ರಾಜ್ಯ ಸಚಿವೆ ಭಾರತಿ ಪ್ರವೀಣ್ ಪವಾರ್ ತಿಳಿಸಿದ್ದಾರೆ.

ಮಹಿಳೆಯ ಒಳ ಉಡುಪು, ಸೀರೆ, ಬಿಂದಿ, ಬಳೆ ಧರಿಸಿದ್ದ ಹತ್ತನೇ ತರಗತಿ ಹುಡುಗ ಮನೆಯಲ್ಲಿ ಶವವಾಗಿ ನೇತಾಡುತ್ತಿದ್ದ!
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:five × one =
Remember me
