ಬೆಂಗಳೂರು:ಭಾರತದಲ್ಲಿ ಮಧುಮೇಹ ಸೇರಿ ಅಸಾಂಕ್ರಾಮಿಕ ರೋಗಗಳ ಪ್ರಮಾಣ ಹೆಚ್ಚುತ್ತಿದ್ದು, ಈ ಪೈಕಿ 101 ದಶಲಕ್ಷಕ್ಕೂ ಅಧಿಕ ಮಂದಿ ಮಧುಮೇಹದಿಂದ ಬಳಲುತ್ತಿದ್ದಾರೆ. ದೇಶದ ಇತರೆ ಭಾಗಗಳಿಗೆ ಹೋಲಿಸಿದರೆ ದಕ್ಷಿಣ ಮತ್ತು ಉತ್ತರ ಭಾರತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಅಸಾಂಕ್ರಾಮಿಕ ರೋಗಗಳನ್ನು ಹೊಂದಿದವರಾಗಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು (ಐಸಿಎಂಆರ್) ತಿಳಿಸಿದೆ.
ಅಸಾಂಕ್ರಾಮಿಕ ರೋಗಗಳ ಪ್ರಮಾಣ ಅಳೆಯಲು ಐಸಿಎಂಆರ್ ಮತ್ತು ಇಂಡಿಯಾ ಡಯಾಬಿಟಿಸ್ ಸಹಯೋಗದಲ್ಲಿ ದೇಶದ 31 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಬೃಹತ್ ಸಮೀಕ್ಷೆಯಲ್ಲಿ ನಡೆಸಲಾಯಿತು. 101 ದಶಲಕ್ಷ ಮಂದಿ ಮಧುಮೇಹ, 136 ದಶಲಕ್ಷ ಮಂದಿ ಮಧುಮೇಹ ಪೂರ್ವ, 135 ದಶಲಕ್ಷ ಮಂದಿ ಅಧಿಕ ರಕ್ತದ ಒತ್ತಡ, 254 ದಶಲಕ್ಷ ಮಂದಿ ಸಾಮಾನ್ಯ ಬೊಜ್ಜು, 351 ದಶಲಕ್ಷ ಮಂದಿ ಹೊಟ್ಟೆಯ ಭಾಗದಲ್ಲಿ ಹೆಚ್ಚುವರಿ ಬೊಜ್ಜು, 213 ದಶಲಕ್ಷ ಮಂದಿ ಅಧಿಕ ಕೊಲೆಸ್ಟ್ರಾಲ್ ಹಾಗೂ 185 ದಶಲಕ್ಷ ಮಂದಿ ಕೆಟ್ಟ ಕೊಲೆಸ್ಟ್ರಾಲ್ ಹೊಂದಿರುವುದು ಸಮೀಕ್ಷೆಯಲ್ಲಿ ಬಹಿರಂಗಗೊಂಡಿದೆ.
2008 ಮತ್ತು 2020ರ ನಡುವೆ ನಡೆಸಲಾದ ಸಮೀಕ್ಷೆಯು ದೇಶದ 33,537 ನಗರ ಹಾಗೂ 79,506 ಗ್ರಾಮೀಣ ಜನರು ಸೇರಿ 1,13,043 ಜನರನ್ನು ಒಳಗೊಂಡಿದೆ. ದಕ್ಷಿಣ ಮತ್ತು ಉತ್ತರ ಭಾರತದ ರಾಜ್ಯಗಳಲ್ಲಿ ಅದರಲ್ಲೂ ನಗರ ಪ್ರದೇಶಗಳಲ್ಲಿನ ಜನರಲ್ಲಿ ಮಧುಮೇಹ ಹರಡುವಿಕೆ ಪ್ರಮಾಣ ಅತ್ಯಧಿಕವಾಗಿರುವುದು ತಿಳಿದು ಬಂದಿದೆ. ಇದರ ಹೊರತಾಗಿ ಮಧ್ಯ ಮತ್ತು ಈಶಾನ್ಯ ಪ್ರದೇಶಗಳಲ್ಲಿ ಕಡಿಮೆ ಹರಡುವಿಕೆ ಇದೆ. ಈ ಕುರಿತು ಗುರುವಾರ ದಿ ಲ್ಯಾನ್ಸೆಟ್ ಡಯಾಬಿಟಿಸ್ ಮತ್ತು ಎಂಡೋಕ್ರೖೆನಾಲಜಿಯಲ್ಲಿ ಅಧ್ಯಯನ ವರದಿ ಪ್ರಕಟವಾಗಿದೆ.
ವರದಿಯಲ್ಲಿ ಹೆಚ್ಚು ಆತಂಕಕಾರಿ ಸಂಗತಿ ಎಂದರೆ ಮಧುಮೇಹ ಇರುವವರಲ್ಲಿ ಪ್ರಿ-ಡಯಾಬಿಟಿಸ್ ಹೊಂದಿರುವವರ ಸಂಖ್ಯೆ ಹೆಚ್ಚಾಗಿರುವುದು. ಇದನ್ನು ನೋಡಿದಾಗ ರೋಗ ಇನ್ನೂ ದೂರ ಇದೆ ಎಂದೆನ್ನಿಸುತ್ತದೆ. ಆದರೆ ಮುಂಬರುವ ವರ್ಷಗಳಲ್ಲಿ ಮಧುಮೇಹ ಹೊಂದಿರುವವರ ಪ್ರಮಾಣ ಮತ್ತಷ್ಟು ಏರಿಕೆಯಾಗಲಿದೆ. ಹಿಂದಿನ ವರದಿಯನ್ನು ಗಮನಿಸಿದಾಗ 74 ದಶಲಕ್ಷ ಎಂದು ಅಂದಾಜಿಸಲಾಗಿದ್ದ ಪ್ರಮಾಣ 101ಕ್ಕೆ ಏರಿಕೆಯಾಗುವ ಮೂಲಕ ಮಧುಮೇಹಿಗಳ ಪ್ರಮಾಣದಲ್ಲಿ ಭಾರಿ ಜಿಗಿತ ಕಂಡಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಮಹಿಳೆಯರಲ್ಲಿ ಹೆಚ್ಚು ಸ್ಥೂಲಕಾಯ:ಇಪ್ಪತ್ತು ವರ್ಷ ಮೇಲ್ಪಟ್ಟವರಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಮಹಿಳೆಯರಲ್ಲಿ ಹೆಚ್ಚು ಸ್ಥೂಲಕಾಯತೆ ಕಂಡು ಬಂದಿದೆ. ಅದೇ ರೀತಿ ಪುರುಷರಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಗಮನಾರ್ಹವಾಗಿ ಹೆಚ್ಚಾಗಿದೆ. ಅಧಿಕ ರಕ್ತದೊತ್ತಡ, ಕೆಳಹೊಟ್ಟೆಯಲ್ಲಿ ಹೆಚ್ಚು ಸ್ಥೂಲಕಾಯ, ಡಿಸ್ಲಿಪಿಡೆಮಿಯಾ, ಕಾರ್ಡಿಯೋಮೆಟಬಾಲಿಕ್ ನಂತರ ಅಪಾಯಕಾರಿ ಅಂಶಗಳು ನಗರ ಪ್ರದೇಶಗಳ ಜನರಲ್ಲಿ ಹೆಚ್ಚಿದೆ.
ದೇಶದಲ್ಲಿ ಮಧುಮೇಹ ಮತ್ತು ಸಂಬಂಧಿತ ಅಸಾಂಕ್ರಾಮಿಕ ರೋಗಗಳು ಅತಿ ಹೆಚ್ಚು ಪ್ರಮಾಣದಲ್ಲಿ ಹರಡಿದ್ದು, ಇದು ಹೃದಯರಕ್ತನಾಳದ ಕಾಯಿಲೆಯ ಅಪಾಯವನ್ನು ಹೆಚ್ಚಿಸಿದೆ. ಇದಲ್ಲದೆ ಮಧುಮೇಹಿಗಳಲ್ಲಿ ಮೂತ್ರಪಿಂಡ, ಕಾಲು ಮತ್ತು ಕಣ್ಣಿನ ಕಾಯಿಲೆಗಳ ಅಪಾಯವೂ ಇದೆ. ಒಟ್ಟಾರೆಯಾಗಿ ಅಸಾಂಕ್ರಾಮಿಕ ರೋಗಗಳ ಪ್ರಮಾಣ ಏರಿಕೆಯಾಗುವುದರ ಜತೆಗೆ ಅದರ ಚಿಕಿತ್ಸಾ ವೆಚ್ಚವನ್ನು ವ್ಯಕ್ತಿ, ಸಮಾಜ ಮತ್ತು ದೇಶದವನ್ನು ದುರ್ಬಲಗೊಳಿಸಲಿದೆ.
ನೋವುನಿವಾರಕದ ಡಬ್ಬಿ​ ನುಂಗಿ 9 ತಿಂಗಳ ಮಗು ಸಾವು; ಮದ್ವೆಯಾಗಿ 10 ವರ್ಷದ ಬಳಿಕ ಜನಿಸಿದ್ದ ಪುತ್ರಿ!

ಒಂದು ವರ್ಷದ ಮಗುವನ್ನು ಹೆತ್ತತಾಯಿಯೇ ಬ್ಲೇಡ್​ನಿಂದ ಕೊಯ್ದು ಕೊಂದಳು; ಬಳಿಕ ಸ್ವತಃ ಕತ್ತು ಕೊಯ್ದುಕೊಂಡಳು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eighteen − 8 =
Remember me
