ನವದೆಹಲಿ:ನಿಜಾಮುದ್ದೀನ್​ನ ಮರ್ಕಜ್​ನಲ್ಲಿರುವ ತಬ್ಲಿಘಿ​ ಜಮಾತನಲ್ಲಿ ಪಾಲ್ಗೊಂಡಿದ್ದ 1,023 ಜನರಿಗೆ ಸೋಂಕು ಕಾಣಿಸಿಕೊಂಡಿರುವುದು ದೃಢವಾಗಿದೆ. ಆ ಮೂಲಕ ತಬ್ಲಿಘಿ​ ಜಮಾತ್​ ದೇಶದಲ್ಲಿ ಕರೊನಾ ವೈರಸ್​ನ ಹಾಟ್​ಸ್ಪಾಟ್​ ಎಂಬುದು ಸಾಬೀತಾದಂತಾಗಿದೆ.
ದೇಶದಲ್ಲಿ ಕೋವಿಡ್​-19ಕ್ಕೆ ತುತ್ತಾದವರ ಸಂಖ್ಯೆ ಶನಿವಾರ ಸಂಜೆ ವೇಳೆಗೆ 2,902ಕ್ಕೆ ತಲುಪಿದೆ. ಈ ಪೈಕಿ ತಬ್ಲಿಘಿಯಲ್ಲಿ ಪಾಲ್ಗೊಂಡಿದ್ದ 1,023 ಜನರು ಸೇರಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಇದರರ್ಥ ಶೇ.30 ಪ್ರಕರಣಗಳು ತಬ್ಲಿಘಿಗೆ ಸಂಬಂಧಿಸಿದ್ದಾಗಿವೆ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್​ ಅಗರ್ವಾಲ್​ ತಿಳಿಸಿದ್ದಾರೆ.
ತಬ್ಲಿಘಿ​ ಜಮಾತ್​ನಲ್ಲಿ ಸಾವಿರಾರು ವಿದೇಶೀಯರು ಭಾಗಿಯಾಗಿದ್ದರು. ಅದರಲ್ಲೂ ಇಲ್ಲಿದ್ದವರನ್ನು ತಪಾಸಣೆಗೊಳಪಡಿಸಿ ಕ್ವಾರಂಟೈನ್​ಗೆ ಕಳುಹಿಸಿದಾಗ 900ಕ್ಕೂ ಅಧಿಕ ವಿದೇಶಿಯರು ಜಮಾತ್​ನಲ್ಲಿದ್ದದು ಕಂಡು ಬಂದಿದೆ.
17 ರಾಜ್ಯಗಳಿಗೆ ಸೋಂಕು:ದೆಹಲಿಯ ತಬ್ಲಿಘಿ​ ಜಮಾತ್​ನಲ್ಲಿ ಬಹುತೇಕ ಎಲ್ಲ ರಾಜ್ಯಗಳ ಮುಸ್ಲಿಮರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಜಮಾತ್​ನಲ್ಲಿ ಪಾಲ್ಗೊಂಡು ಅವರವರ ರಾಜ್ಯಗಳಿಗೆ ಹಿಂದಿರುಗಿದವರ ಪೈಕಿ 17 ರಾಜ್ಯಗಳ ಜನರಲ್ಲಿ ಸೋಂಕು ವ್ಯಾಪಿಸಿದೆ. ಕೆಲ ರಾಜ್ಯಗಳಲ್ಲಿ ಜಮಾತ್​ನಲ್ಲಿ ಪಾಲ್ಗೊಂಡಿದ್ದವರೆ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.(ಏಜೆನ್ಸೀಸ್​)
ದೆಹಲಿಯ ಮಸೀದಿಗಳಲ್ಲಿ ಅಡಗಿದ್ದಾರೆ 800ಕ್ಕೂ ಹೆಚ್ಚು ಜಮಾತ್​ನ ವಿದೇಶಿ ಕೆಲಸಗಾರರು!: ಮೊಳಗಿದೆ ಮತ್ತೊಂದು COVID19 ಅಲರ್ಟ್​

ಕರೊನಾ ಆತಂಕ ಇದ್ದರೂ ನಿಲ್ಲದ ಭಯೋತ್ಪಾದಕ ಚಟುವಟಿಕೆ; ಇಂದು ಇಬ್ಬರು ಉಗ್ರರನ್ನು ಕೊಂದು ಹಾಕಿದ ಭದ್ರತಾ ಪಡೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × two =
Remember me
