ಚೆನ್ನೈ:ಸಿಬಿಐಗಿರುವ ಮಹತ್ವ ನಿಮಗೆಲ್ಲರಿಗೂ ಗೊತ್ತಿರುವಂತದ್ದೇ. ಆದರೆ ಇದೀಗ ಅದೇ ಸಿಬಿಐ ವಶದಲ್ಲಿದ್ದ 45 ಕೋಟಿ ರೂಪಾಯಿ ಮೌಲ್ಯದ 103 ಕೆ.ಜಿ ಚಿನ್ನವೇ ಕಾಣದಾಗಿದೆ. ಸಿಬಿಐನ ಈ ಪ್ರಕರಣದ ಬಗ್ಗೆ ಸ್ಥಳೀಯ ಪೊಲೀಸರು ವಿಚಾರಣೆ ನಡೆಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.
ಇದನ್ನೂ ಓದಿ:ಪಶ್ಚಿಮ ಬಂಗಾಳದ ಐಪಿಎಸ್​ ಅಧಿಕಾರಿಗಳ ವಿರುದ್ಧ ಕೇಂದ್ರದ ಕ್ರಮ; ರಕ್ಷಣೆ ನೀಡಲು ವಿಫಲವಾದ ಅಧಿಕಾರಿಗಳು ಕೇಂದ್ರ ಸೇವೆಗೆ ನಿಯೋಜನೆ
2012ರಲ್ಲಿ ಚೆನ್ನೈನ ಸುರಾನಾ ಕಾರ್ಪೋರೇಶನ್​ ಮೇಲೆ ಸಿಬಿಐ ದಾಳಿ ನಡೆಸಿತ್ತು. ಈ ವೇಳೆ ಅಲ್ಲಿ ಸಿಕ್ಕಿದ 400.47 ಕೆ.ಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿತ್ತು. ಚಿನ್ನವನ್ನು ಅದೇ ಕಚೇರಿಯಲ್ಲಿ ಲಾಕರ್​ನಲ್ಲಿರಿಸಿ ಸಿಬಿಐ ಸೀಲು ಮಾಡಲಾಗಿತ್ತು. ಅದಾದ ನಂತರ ಎಂಟು ವರ್ಷಗಳ ಕಾಲ ಅದನ್ನು ಹೊರಗೆ ತೆಗೆದಿಲ್ಲ. ಇತ್ತೀಚೆಗೆ ಸೀಲು ತೆಗೆದು ಚಿನ್ನವನ್ನು ತೂಕ ಮಾಡಿದಾಗ ಅದರಲ್ಲಿ 103 ಕೆ.ಜಿ ಚಿನ್ನ ಕಡಿಮೆಯಾಗಿದೆ.
ಸೀಲ್​ ಮಾಡುವ ಮೊದಲು ಚಿನ್ನವನ್ನು ಒಟ್ಟಾರೆಯಾಗಿ ಹಾಕಿ ತೂಕ ಮಾಡಲಾಗಿತ್ತು. ಆದರೆ ವಾಪಾಸು ಈಗ ತೂಕ ಮಾಡುವಾಗಿ ಪ್ರತ್ಯೇಕವಾಗಿ ತೂಕ ಮಾಡಲಾಗಿದೆ. ಅದೇ ಕಾರಣದಿಂದಾಗಿ ತೂಕ ಕಡಿಮೆಯಾಗಿದೆ ಎಂದು ಸಿಬಿಐ ಹೇಳಿದೆ.
ಇದನ್ನೂ ಓದಿ:ಇನ್​ಸ್ಟಾಗ್ರಾಂ ಸ್ಟಾರ್​ಗೆ 10 ವರ್ಷ ಜೈಲು! ವಿಚಿತ್ರವಾಗಿ ಕಾಣಲು ಹೋಗಿ ಜೈಲು ಸೇರಿದ ಯುವತಿ
ಈ ಪ್ರಕರಣದ ವಿಚಾರಣೆ ನಡೆಸಿದ ಮದ್ರಾಸ್​ ಹೈ ಕೋರ್ಟ್​, ಪ್ರಕರಣದ ತನಿಖೆಯನ್ನು ಎಸ್‌ಪಿ ಶ್ರೇಣಿಯ ಅಧಿಕಾರಿಗೆ ವಹಿಸಿದೆ. ಆರು ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಬೇಕೆಂದು ನ್ಯಾಯಾಲಯ ತಿಳಿಸಿದೆ. ಇದಕ್ಕೆ ತಕರಾರು ತೆಗೆದ ಸಿಬಿಐ, ಸ್ಥಳೀಯ ಪೊಲೀಸರಿಗೆ ಸಿಬಿಐ ಪ್ರಕರಣ ನೀಡಿದರೆ, ನಮ್ಮ ಘನತೆ ಕುಗ್ಗುತ್ತದೆ ಎಂದು ವಾದಿಸಿದೆ. ಈ ವಾದವನ್ನು ತಳ್ಳಿ ಹಾಕಿರುವ ನ್ಯಾಯಾಲಯ, ‘ಎಲ್ಲ ಪೊಲೀಸರ ಮೇಲೂ ನಮಗೆ ನಂಬಿಕೆಯಿದೆ. ಇಲ್ಲಿ ಸಿಬಿಐ ಮತ್ತು ಸ್ಥಳೀಯ ಪೊಲೀಸರು ಎನ್ನುವ ಭೇದ ಭಾವ ಸಲ್ಲ’ ಎಂದು ತಿಳಿಸಿದೆ.
ಇದು ಸಿಬಿಐಗೆ ಅಗ್ನಿ ಪರೀಕ್ಷೆಯಿದ್ದಂತೆ. ಅವರ ಕೈ ಸೀತಾ ಮಾತೆಯಷ್ಟು ಪವಿತ್ರವಾಗಿದ್ದರೆ ಅವರು ಪ್ರಕಾಶಮಾನವಾಗಿ ಹೊರಬರಬಹುದು. ಇಲ್ಲವಾದರೆ ಅದಕ್ಕೆ ತಕ್ಕ ಪಾಠ ಕಲಿಯಲಿದ್ದಾರೆ ಎಂದು ನ್ಯಾಯಾಲಯ ಹೇಳಿದೆ. (ಏಜೆನ್ಸೀಸ್​)
ಮಾನಸಿಕ ಅಸ್ವಸ್ಥ ಗಂಡನೆದುರೇ ನಡೆಯುತ್ತಿತ್ತು ಅತ್ತಿಗೆಯ ಅಫೇರ್​! ವಿಷಯ ಗೊತ್ತಿದ್ದ ಮೈದುನನಿಗೆ ಅತ್ತಿಗೆ ಮಾಡಿದ್ದೇನು?

ಪ್ರಿಯತಮೆಗೆ ಗರ್ಭನಿರೋಧಕ ಮಾತ್ರೆ ಕೊಟ್ಟು ಹಸೆಮಣೆ ಏರಿದ ಭೂಪ! ಮದುವೆ ದಿನವೇ ಮಸಣ ಸೇರಿದ ಯುವತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × five =
Remember me
