ತಿರುವನಂತಪುರಂ: ಕರೊನಾ ವೈರಸ್​ ಬಗ್ಗೆ ಅದೆಷ್ಟೋ ಮಿಥ್ಯಗಳು ಹುಟ್ಟಿಕೊಂಡಿವೆ. ಅದರಲ್ಲಿ ಒಂದು ವಯಸ್ಸಾದವರಿಗೆ ಈ ಸೋಂಕು ತಗುಲಿದರೆ ಬದುಕುವುದೇ ಇಲ್ಲ ಎಂಬುದು. ಆದರೆ ಜಗತ್ತಿನ ಅನೇಕ ಕಡೆಗಳಲ್ಲಿ, ಭಾರತದಲ್ಲೂ ಕೆಲವು ವೃದ್ಧರು ಕರೊನಾವನ್ನು ಯಶಸ್ವಿಯಾಗಿ ಮಣಿಸಿದ ಉದಾಹರಣೆಗಳು ಸಿಗುತ್ತಿವೆ.ಇದನ್ನೂ ಓದಿ:‘ಯಾರಾದರೂ ಸತ್ತರೆ ನಿಮಗೆ ಅವರ ಬೆಡ್​…ಅಲ್ಲಿಯವರೆಗೂ ನೆಲದ ಮೇಲೆ ಮಲಗಿ’
ಇದೀಗ ಆ ಸಾಲಿಗೆ ಸೇರಿದವರು ಕೇರಳದ ಆಸ್ಮಾ ಬೀವಿ ಎಂಬ 105 ವರ್ಷದ ವೃದ್ಧೆ. ಕರೊನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್​ಚಾರ್ಜ್​ ಆಗಿದ್ದಾರೆ. ಕೊವಿಡ್​ನಿಂದ ಪಾರಾದ ಕೇರಳದ ಅತ್ಯಂತ ಹಿರಿಯ ಮಹಿಳೆ ಎಂಬ ಖ್ಯಾತಿಗೂ ಪಾತ್ರರಾಗಿದ್ದಾರೆ.
ಬೀವಿ ಅವರು ಕೊಲ್ಲಂನಲ್ಲಿರುವ ಇಎಸ್​ಐ ಸರ್ಕಾರಿ ಮೆಡಿಕಲ್​ ಕಾಲೇಜಿಗೆ ದಾಖಲಾಗಿದ್ದರು. 105 ವರ್ಷದ ಇವರಿಗೆ ಮಗಳಿಂದಲೇ ಕರೊನಾ ಸೋಂಕು ತಗುಲಿತ್ತು. ಇವರೇನೂ ಸುಲಭದಲ್ಲಿ ಕರೊನಾವನ್ನು ಮಣಿಸಲಿಲ್ಲ. ಒಂದೆರಡು ಬಾರಿ ಆರೋಗ್ಯ ತೀರ ಹದಗೆಟ್ಟಿತ್ತು. ಆದರೆ ಮತ್ತೆ ಸುಧಾರಿಸಿಕೊಂಡು, ಇದೀಗ ಆರೋಗ್ಯದಿಂದ ಹಿಂದಿರುಗಿದ್ದಾರೆಂದು ಆಸ್ಪತ್ರೆ ತಿಳಿಸಿದೆ. (ಏಜೆನ್ಸೀಸ್)
ಕಾಂಗ್ರೆಸ್​ ರಾಜ್ಯಸಭಾ ಸದಸ್ಯರೊಂದಿಗೆ ನಾಳೆ ಸಭೆ ನಡೆಸಲಿರುವ ಸೋನಿಯಾ ಗಾಂಧಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + five =
Remember me
