ನವದೆಹಲಿ:ಭಾರತೀಯ ವಾಯುಪಡೆಯ ವಿಶೇಷ ವಿಮಾನವೊಂದು ಇಂದು ಬೆಳಿಗ್ಗೆ 107 ಭಾರತೀಯರೂ ಸೇರಿದಂತೆ 168 ಜನರನ್ನು ಅಫ್ಘಾನಿಸ್ತಾನದಿಂದ ಹೊತ್ತುತಂದಿದ್ದು, ದೆಹಲಿ ಬಳಿಯ ಹಿಂದೋನ್​ ಏರ್​ ಬೇಸ್​ನಲ್ಲಿ ಇಳಿದಿದೆ. ಹೀಗೆ ಆಗಮಿಸಿರುವ ಯಾತ್ರಿಗಳಿಗೆ ಕರೊನಾದ ಆರ್​ಟಿಪಿಸಿಆರ್​ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಎಎನ್​​ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
#WATCH| 168 passengers, including 107 Indian nationals, arrive at Hindon IAF base in Ghaziabad from Kabul, onboard Indian Air Force's C-17 aircraftPassengers are yet to come out of the airport as they will first undergo the#COVID19RT-PCR test.#Afghanistanpic.twitter.com/x7At7oB8YK— ANI (@ANI)August 22, 2021
#WATCH| 168 passengers, including 107 Indian nationals, arrive at Hindon IAF base in Ghaziabad from Kabul, onboard Indian Air Force's C-17 aircraftPassengers are yet to come out of the airport as they will first undergo the#COVID19RT-PCR test.#Afghanistanpic.twitter.com/x7At7oB8YK
ಇದರೊಂದಿಗೆ ಏರ್​ ಇಂಡಿಯ, ಇಂಡಿಗೋ ಮತ್ತು ವಿಸ್ತಾರ ಏರ್​ಲೈನ್​ಗಳ ಮೂರು ಇತರ ವಿಮಾನಗಳೂ ಕಾಬುಲ್​ನಿಂದ ತೆರವುಗೊಳಿಸಲ್ಪಟ್ಟ ಭಾರತೀಯರನ್ನು ತಜಿಕಿಸ್ತಾನದ ರಾಜಧಾನಿ ದುಶಾನ್ಬೆ ಮತ್ತು ಖತಾರ್​​ನ ದೋಹಾದಿಂದ ಹೊತ್ತುತಂದಿದೆ.
Jubilant evacuees on their journey home !pic.twitter.com/3sfvSaEVK7— Arindam Bagchi (@MEAIndia)August 21, 2021
Jubilant evacuees on their journey home !pic.twitter.com/3sfvSaEVK7
ಈ ಬಗ್ಗೆ ಮಾಹಿತಿ ನೀಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್​ ಬಾಗ್ಚಿ, ಆಗಿಂದಾಗ್ಗೆ ಟ್ವಿಟರ್​ನಲ್ಲಿ ತೆರವು ಕಾರ್ಯಾಚರಣೆಯ ಫೋಟೋ, ವಿಡಿಯೋಗಳನ್ನು ಪೋಸ್ಟ್​ ಮಾಡುತ್ತಿದ್ದಾರೆ. ಶನಿವಾರದಂದು 87 ಭಾರತೀಯರು ಮತ್ತು ಇಬ್ಬರು ನೇಪಾಳೀಯರನ್ನು ಐಎಎಫ್​ ವಿಮಾನವು ಕಾಬುಲ್​ನಿಂದ ಭಾರತಕ್ಕೆ ಕರೆದುತಂದಿತ್ತು. ಈ ವಿಮಾನದ ಪ್ರಯಾಣಿಕರು ‘ಭಾರತ​ಮಾತಾ ಕಿ ಜೈ’ ಎಂದು ಘೊಷಣೆ ಕೂಗುತ್ತಿರುವ ವಿಡಿಯೋ ತುಣುಕನ್ನು ಕಾಣಬಹುದು.(ಏಜೆನ್ಸೀಸ್)
ಥಿಯೇಟರ್ ಬಂದ್ ಹೈ, ಪಿಚ್ಚರ್ ಕೈಸೆ ಚಾಲೂ ಹೋತಾ ಹೈ? ಶಾಸಕ ರಾಜೂ ಗೌಡ ಪ್ರಶ್ನೆ!
ಕತ್ತು ಮತ್ತು ಬೆನ್ನೆಲುಬನ್ನು ಬಲಿಷ್ಠಗೊಳಿಸುವ ‘ಏಕಪಾದ ಶೀರ್ಷಾಸನ’!


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + 17 =
Remember me
