ಥಾಣೆ:ಖಾಸಗಿ ಆಶ್ರಮ ಶಾಲೆಯೊಂದರ 63 ಬಾಲಕಿಯರು ಸೇರಿದಂತೆ 109 ವಿದ್ಯಾರ್ಥಿಗಳು ಮಧ್ಯಾಹ್ನದ ಊಟ ಸೇವಿಸಿದ ಬಳಿಕ ತೀವ್ರ ಅಸ್ವಸ್ಥಗೊಂಡಿದ್ದು, ಫುಡ್​ ಪಾಯಿಸನ್​ ಆಗಿರುವುದು ಪತ್ತೆಯಾಗಿದೆ. ಮಕ್ಕಳನ್ನು ಥಾಣೆ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಸ್ಥಳೀಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ:“ಸೋಲನ್ನು ಒಪ್ಪುವುದಿಲ್ಲ…….”! ಬಂಧನದ ಬೆನ್ನಲ್ಲೇ ಮಾಜಿ ಸಿಎಂ ಹೇಮಂತ್​ ಸೋರೆನ್ ಕೊಟ್ಟ ಪ್ರತಿಕ್ರಿಯೆ ಹೀಗಿದೆ
ಮುಂಬೈನ ಹೊರವಲಯದಲ್ಲಿರುವ ಶಹಾಪುರ ತಾಲೂಕಿನ ಭಟ್ಸಾಯಿಯಲ್ಲಿರುವ ಸಂತ ಗಡ್ಗೆ ಮಹಾರಾಜ್ ಪ್ರಾಥಮಿಕ ಮತ್ತು ಮಾಧ್ಯಮಿಕ ಆಶ್ರಮ ಶಾಲೆಯಲ್ಲಿ (ಬುಡಕಟ್ಟು ಮಕ್ಕಳ ವಸತಿ ಶಾಲೆಗಳು), 1ರಿಂದ 10ನೇ ತರಗತಿಯ 200 ವಿದ್ಯಾರ್ಥಿಗಳು ಇದ್ದಾರೆ. ಆಸ್ಪತ್ರೆಗೆ ದಾಖಲಾದ ವಿದ್ಯಾರ್ಥಿಗಳ ಪೈಕಿ ನಾಲ್ವರು ವಿದ್ಯಾರ್ಥಿಗಳನ್ನು ಹೊರತುಪಡಿಸಿ ಉಳಿದವರು ಚಿಕಿತ್ಸೆ ನಂತರ ಶಹಾಪುರದ ಉಪವಿಭಾಗದ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ ಎಂದು ಶಹಾಪುರ ತಹಸೀಲ್ದಾರ್ ಕೋಮಲ್ ಠಾಕೂರ್ ಮಾಹಿತಿ ನೀಡಿದ್ದಾರೆ.
ಮಧ್ಯಾಹ್ನದ ಊಟಕ್ಕಾಗಿ ವಿದ್ಯಾರ್ಥಿಗಳಿಗೆ ಪಲಾವ್ ಮತ್ತು ಸಿಹಿ ಖಾದ್ಯ (ಗುಲಾಬ್ ಜಾಮೂನ್) ನೀಡಲಾಗಿತ್ತು. ಅವರಲ್ಲಿ 63 ಹುಡುಗಿಯರು ಮತ್ತು 46 ಹುಡುಗರು ವಾಂತಿ ಮತ್ತು ಆಹಾರ ವಿಷದ ಇತರ ಲಕ್ಷಣಗಳನ್ನು ಹೊಂದಿದ್ದರು ಎಂದು ವರದಿ ತಿಳಿಸಿದೆ. ಹಿರಿಯ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಸ್ಥಿತಿಗತಿ ವಿಚಾರಿಸಿದ್ದಾರೆ,(ಏಜೆನ್ಸೀಸ್).
ಬೆಳಗ್ಗೆ ಹೊತ್ತು ವಾಲ್​ನಟ್ಸ್​​ ಸೇವನೆ ಎಷ್ಟು ಉತ್ತಮ? ಇಲ್ಲಿದೆ ಉಪಯುಕ್ತ ಮಾಹಿತಿ ತಪ್ಪದೇ ತಿಳಿಯಿರಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − thirteen =
Remember me
