ನವದೆಹಲಿ:ಆನ್​ಲೈನ್​ನಲ್ಲಿ ಕೇವಲ 2,500 ರೂ.ಗೆ 10 ಸಾವಿರ ಜನರ ಫೋನ್ ನಂಬರ್​ಗಳನ್ನು ಖರೀದಿಸಿ, ಆ ಮಾಹಿತಿಯನ್ನು ವಂಚನೆಗೆ ಬಳಸುತ್ತಿದ್ದ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ನಕಲಿ ವಿಮಾ ಪಾಲಿಸಿ ಮತ್ತು ಸಾಲ ಮಂಜೂರು ಮಾಡುತ್ತಿದ್ದ ಈ ಬಹುಕೋಟಿ ವಂಚನೆ ಪ್ರಕರಣ ಸಂಬಂಧ 9 ಮಹಿಳೆಯರು ಸೇರಿದಂತೆ 11 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ದೀಪಿಕಾ ಪಡುಕೋಣೆ ತೊಟ್ಟ ಸೀರೆಯನ್ನು ತಯಾರಿಸಲು ಬೇಕಾಯ್ತು 3,400 ಗಂಟೆಗಳು ! ಈ ಸೀರೆ ಸಖತ್​ ದುಬಾರಿ..
ಆಶೀಶ್ ಮತ್ತು ಜಿತೇಂದ್ರ ಈ ಜಾಲದ ಮಾಸ್ಟರ್​ವೆುೖಂಡ್​ಗಳು. 2019ರಲ್ಲಿ ಎಸ್​ಬಿಐ ಲೈಫ್​ನಲ್ಲಿ ಉದ್ಯೋಗಿಗಳಾಗಿದ್ದ ಇವರು ಕೆಲಸ ಬಿಟ್ಟಿದ್ದರು. ಇಂಡಿಯಾ ಮಾರ್ಟ್​ನಿಂದ 10 ಸಾವಿರ ಜನರ ಫೋನ್ ಡೇಟಾವನ್ನು 2500 ರೂ.ಗೆ ಖರೀದಿಸಿದ್ದರು. ನೋಯ್ಡಾದ ಸೆಕ್ಟರ್ 51ರಲ್ಲಿ ಕಾಲ್ ಸೆಂಟರ್ ತೆರೆದಿದ್ದರು. ನಕಲಿ ಆಧಾರ್ ಸಂಖ್ಯೆ ಬಳಸಿ ಸಿಮ್​ಗಳನ್ನು ಅಕ್ರಮವಾಗಿ ಖರೀದಿಸಿದ್ದರು.
9 ಮಹಿಳೆಯರನ್ನು ಕಾಲ್​ಸೆಂಟರ್ ಎಕ್ಸಿಕ್ಯೂಟಿವ್​ಗಳನ್ನಾಗಿ ನೇಮಿಸಿಕೊಂಡಿದ್ದರು. ದೆಹಲಿಗಿಂತ ಹೆಚ್ಚಾಗಿ ಹೊರಗಿನ ರಾಜ್ಯಗಳ ಅಮಾಯಕರಿಗೆ ಫೋನ್ ಮಾಡಿ ಹೆಚ್ಚಿನ ಲಾಭದ ಆಸೆ ಹುಟ್ಟಿಸಿ, ಹಣ ಹಾಕಿಸಿಕೊಳ್ಳುತ್ತಿದ್ದರು. ಕರ್ನಾಟಕದ ಅರವಿಂದ ಎಂಬುವವರ ಪಂಜಾಬ್ ನ್ಯಾಷನಲ್ ಬ್ಯಾಂಕ್ ಖಾತೆಯನ್ನು ಮಾಸಿಕ 1 ಸಾವಿರ ರೂ.ಗೆ ಬಾಡಿಗೆಗೆ ಪಡೆದಿದ್ದ ದುಷ್ಕರ್ವಿುಗಳು, ಜನರಿಂದ ಹಾಕಿಸಿಕೊಂಡ ಹಣವನ್ನು ನೋಯ್ಡಾದಲ್ಲಿ ಡೆಬಿಟ್ ಕಾರ್ಡ್ ಬಳಸಿ ವಿತ್​ಡ್ರಾ ಮಾಡಿಕೊಳ್ಳುತ್ತಿದ್ದರು.
ಇದನ್ನೂ ಓದಿ:ಹೆಣ್ಣು ಬೇಕಾ? ಗಂಡು ಮಗು ಬೇಕಾ? ದೀಪಿಕಾ ಪತಿ ರಣವೀರ್ ಹೇಳಿದ್ದೇನು ಗೊತ್ತಾ?
ಪೊಲೀಸರ ದಾಳಿ ವೇಳೆ ಆಶೀಶ್ ಬರೆದಿಟ್ಟಿದ್ದ ಕಪ್ಪು ಡೈರಿ ಸಿಕ್ಕಿದ್ದು, ಇಡೀ ವರ್ಷ ನಡೆಸಿದ ಕೋಟ್ಯಂತರ ರೂ. ವಹಿವಾಟಿನ ವಿವರ ಅದರಲ್ಲಿದೆ. ಭಾರತೀಯ ನ್ಯಾಯ ಸಂಹಿತೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ಅಭಿಷೇಕ್​ ಶರ್ಮ ಶತಕಕ್ಕೆ ಗಿಲ್ ಕೊಟ್ಟ ಈ ಗಿಫ್ಟ್​​ ಕಾರಣ! ಇದರಿಂದಲೇ ಒಲಿಯಿತು ‘ಅಭಿ’ಗೆ ಅದೃಷ್ಟ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + two =
Remember me
